ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ ಸರ್ಕಲ್‌ಗೆ ಐಜಿಪಿ ಖರ್ಬಿಕರ್ ಭೇಟಿ

Last Updated 5 ಜನವರಿ 2022, 16:29 IST
ಅಕ್ಷರ ಗಾತ್ರ

ಹುಣಸಗಿ: ತುರ್ತು ಸಂದರ್ಭದಲ್ಲಿ ನೆರವಿಗೆ ಬರುವ ನಿಟ್ಟಿನಲ್ಲಿ ಸರ್ಕಾರ 112 ಪೊಲೀಸ್ ಸಂಚಾರಿ ಸೇವೆಯನ್ನು ಒದಗಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಲಬುರಗಿ ವಲಯದ ಐಜಿಪಿ ಮನೀಷ್ ಖರ್ಬಿಕರ್ ಹೇಳಿದರು.

ಹುಣಸಗಿ ಪಟ್ಟಣದ ಪೊಲೀಸ್ ವೃತ್ತ ಕಚೇರಿಗೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಲವು ದಶಕಗಳ ಹಿಂದಿನ ಪೊಲೀಸ್ ವ್ಯವಸ್ಥೆಗೆ ಹೋಲಿಕೆ ಮಾಡಿದಲ್ಲಿ ಪ್ರಸ್ತುತ ಸಾಕಷ್ಟು ಬದಲಾವಣೆ ತರಲಾಗಿದೆ. ಅದಕ್ಕೆ ತಕ್ಕಂತೆ ವಾಹನ ಸವಾರರು, ಪಾದಚಾರಿಗಳು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಲ್ಲಿ ಸಾಕಷ್ಟು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಸ್ವತ: ಕಾನೂನು ಗೌರವಿಸುವುದು, ಹಾಗೂ ಅಪರಾಧ ಘಟಿಸಿದ ಸಂದರ್ಭದಲ್ಲಿ ಅಗತ್ಯ ಮಾಹಿತಿ ನೀಡುವುದರೊಂದಿಗೆ ಇಲಾಖೆಗೆ ಸಹಕರಿಸಬಹುದು.

ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು, ಡಿಜಿಟಲ್ ತಂತ್ರಜ್ಞಾನಕ್ಕೆ ತಕ್ಕಂತೆ ನಮ್ಮ ಇಲಾಖೆ ಕೂಡಾ ಮುನ್ನಡೆಯುತ್ತಿದೆ ಎಂದರು.

ನಗರ ಪ್ರದೇಶಗಳಲ್ಲಿ ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಬಲದಲ್ಲಿ ಹೆಚ್ಚಿಗೆ ಆಗಬೇಕು. ಅದು ಸರ್ಕಾರದ ಗಮನಕ್ಕೆ ಇದೆ. ಇನ್ನು ಕೆಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗ್ರಾಮಗಳನ್ನು ಸಮೀಪದ ಠಾಣೆಗೆ ಸೇರಿಸಬೇಕಿದೆ. ಅದನ್ನು ಸ್ಥಳಿಯ ಪೊಲೀಸ್ ಠಾಣೆಯಿಂದ ವರದಿ ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋಡೆಕಲ್ಲ ಹತ್ತಿರ ಇರುವ ಹಗರಟಗಿ ಗ್ರಾಮ ದೂರದ ನಾರಾಯಣಪುರ ಪೊಲೀಸ್ ಠಾಣೆಗೆ ಒಳಪಡುವ ವಿಷಯವನ್ನು ಗಮನಕ್ಕೆ ತಂದಾಗ ಅದಕ್ಕೆ ಉತ್ತರಿಸಿದರು. ಡಿವೈಎಸ್ಪಿ ದೇವರಾಜ, ಹುಣಸಗಿ ಸಿಪಿಐ ಎನ್.ಕೆ.ದೌಲತ್ ಸೇರಿದಂತೆ ಹುಣಸಗಿ, ನಾರಾಯಣಪುರ, ಕೋಡೆಕಲ್ಲ, ಕೆಂಭಾವಿ ಠಾಣೆಯ ಪಿಎಸ್ಐ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT