ಕಡೇಚೂರು(ಸೈದಾಪುರ): ಯುವ ಸಮೂಹವು ದೇಶದ ಸಂಪತ್ತಾಗಿದ್ದು, ಸದೃಢ ಸಮಾಜದ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದು ಎಂದು ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

ಸಮೀಪದ ಕಡೇಚೂರು ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆ ಬಳಿ ವಿವೇಕಾನಂದರ ವೃತ್ತ ಉದ್ಘಾಟಸಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ವಿವೇಕಾನಂದರ ವಿಚಾರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂಬುದು ಕೇವಲ ಹೇಳಿಕೆಯಲ್ಲಿ ಉಳಿದರೆ ಸಾಲದು. ಅವುಗಳನ್ನು ಜನರ ಮನಸ್ಸಿಗೆ ಮುಟ್ಟುವಂತೆ ಕಾರ್ಯ ರೂಪಕ್ಕೆ ತರಬೇಕು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಗ್ರಾಮದ ಯುವಕರು ಸೇವೆ ಮೆಚ್ಚುವಂತಹುದ್ದು ಎಂದರು.

ಸೈದಾಪುರ ಪೊಲೀಸ್ ಠಾಣೆಯ ಪಿಐ ವಿಜಯ ಕುಮಾರ ಮಾತನಾಡಿ, ವಿವೇಕಾನಂದರ ಆಸೆಯದಂತೆ ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಸಮಾಜ ಮತ್ತು ದೇಶದ ಪ್ರಗತಿಗೆ ಸಹಕಾರವಾಗುವಂತಹ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಅಪರಾಧ ವಿಭಾಗದ ಪಿಎಸ್‍ಐ ಹಣಮಂತರಾಯ ನಾಯಕ, ವಿರೇಶ ಆವಂಟಿ, ವಿರೇಶ ಸಜ್ಜನ, ವಾಬಣ್ಣ, ರಾಜು ಮೇತ್ರಿ, ಚಂದ್ರು, ರಮೇಶ ಕಾವಲಿ, ಚೌಡಪ್ಪ, ರಮೆಶ, ವೊಠ್ಠಲ್, ಶರಣು, ನಾಗೇಸ, ಹುಸೇನ್, ವಿಶ್ವನಾಥ ಬದ್ದೇಪಲ್ಲಿ, ಮಹೇಶ ಸ್ವಾಮಿ ಗದ್ವಾಲ್, ಶಿವುಕುಮಾರ ಇದ್ದರು. ಗುರು ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿವುಕುಮಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.