ಯಾದಗಿರಿ: ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಅವ್ಯವಹಾರ ಆರೋಪದಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ (ಎಇ) ಸೇರಿ ಐವರ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ ಈ ಬಗ್ಗೆ ದೂರು ನೀಡಿದ್ದರು. ಕಾರ್ಯಪಾಲಕ ಎಂಜಿನಿಯರ್ ಆನಂದ, ಎಇಇ ಬನ್ನಪ್ಪ, ನೈರ್ಮಲ್ಯ ಇಲಾಖೆ ಶಹಾಪುರ ಉಪವಿಭಾಗದ ಹೆಚ್ಚುವರಿ ಪ್ರಭಾರ ಸಹಾಯಕ ಎಂಜಿನಿಯರ್–2 ಎನ್.ಶ್ರೀನಿವಾಸ, ಗುತ್ತಿಗೆದಾರ ವೆಂಕಟೇಶ ಗುರಸಣಗಿ ಮತ್ತು ಥರ್ಡ್ ಪಾರ್ಟಿ ಸಂಸ್ಥೆ ಬೆಂಗಳೂರಿನ ಟ್ರಾನ್ಸ್ಪೋರ್ಟೆಕ್ ವಿರುದ್ಧ ಪ್ರಕರಣ ದಾಖಲಾಗಿದೆ.

‘ಶಹಾಪುರ ವ್ಯಾಪ್ತಿಯ ನಾಯ್ಕಲ್ ಗ್ರಾಮದ ಜೆಜೆಎಂ ಕಾಮಗಾರಿ ಶೇ 35ರಷ್ಟು ಮುಗಿದಿತ್ತು. ಶೇ 82.5ರಷ್ಟು ಪ್ರಗತಿಯಾಗಿದೆ ಎಂದು ನಕಲಿ ದಾಖಲೆ, ದೃಢೀಕರಣ ಪತ್ರ ಸೃಷ್ಟಿಸಿದ್ದಾರೆ. ಗುತ್ತಿಗೆದಾರ ₹ 1.45 ಕೋಟಿ ಮೊತ್ತದ ಕಾಮಗಾರಿ ಮಾಡಿದ್ದರೂ ಹೆಚ್ಚುವರಿಯಾಗಿ ₹ 1.90 ಕೋಟಿ ಬಿಲ್ ಪಾವತಿಸಿ ವಂಚನೆ ಎಸಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.