ಯಾದಗಿರಿಯಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಪೊಲೀಸ್ ತುಕಡಿ ವಿದ್ಯಾರ್ಥಿಗಳಿಂದ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಗೌರವ ವಂದನೆ ಸ್ವೀಕರಿಸಿದರು
ಯಾದಗಿರಿಯಲ್ಲಿ ಬುಧವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ವಿದ್ಯಾರ್ಥಿಗಳು ನೃತ್ಯ ರೂಪಕ ಪ್ರದರ್ಶಿಸಿದರು
ಯಾದಗಿರಿಯಲ್ಲಿ ಬುಧವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು
‘ನಿರಂತರ ಹೋರಾಟದ ಫಲ’
‘ಈ ಹಿಂದಿನ ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕದ ಭಾಗವು ಭಾರತ ಸ್ವತಂತ್ರದ ನಂತರದ ಒಂದು ವರ್ಷ ಒಂದು ತಿಂಗಳು ಎರಡು ದಿನಗಳ ಬಳಿಕ ಸ್ವಾತಂತ್ರ್ಯವನ್ನು ಪಡೆಯಿತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ‘ಸ್ವಾತಂತ್ರ್ಯ ಪಡೆಯುವ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಂತರ ಹೋರಾಟಗಳು ನಡೆದುಕೊಂಡು ಬಂದಿದ್ದು ಹೋರಾಟದ ಮುಂಚೂಣಿಯ ನಾಯಕತ್ವವನ್ನು ಮಹಾನ್ ನಾಯಕರಾದ ರಮಾನಂದ ತೀರ್ಥರು ವಹಿಸಿಕೊಂಡಿದ್ದರು' ಎಂದು ಸ್ಮರಿಸಿದರು. 'ರಾಜ್ಯ ಸರ್ಕಾರವು ರಾಜ್ಯದ ಎಲ್ಲ ವರ್ಗದ ಜನರಿಗೆ ಮಹತ್ವದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರಲ್ಲಿ ಆಶಾಭಾವನೆ ಮೂಡಿಸಿದೆ. ಜನರ ಜೀವನದಲ್ಲಿ ಹಲವು ರೀತಿಯಲ್ಲಿ ನೆರವಾಗುತ್ತಿದೆ. ಅದರಂತೆ ಅಭಿವೃದ್ಧಿಗೂ ಸರ್ಕಾರ ವಿಶೇಷ ಒತ್ತನ್ನು ನೀಡಿದೆ' ಎಂದರು.
ಯಾದಗಿರಿಯಲ್ಲಿ ಬುಧವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಲ್ಲಗಂಬ ಪ್ರದರ್ಶನ ನೀಡಿದ ಬಾಲಮಂದಿರದ ಮಕ್ಕಳು
ಮೈನವಿರೇಳಿಸಿದ ಮಲ್ಲಗಂಬ ಕಸರತ್ತು
ಬಾಲಕ ಬಾಲಮಂದಿರದ ಜೈಕರ್ನಾಟಕ ಮಲ್ಲಗಂಬ ತಂಡದ ಮಕ್ಕಳ ಮಲ್ಲಗಂಬ ಪ್ರದರ್ಶನ ಗಮನ ಸೆಳೆಯಿತು. ಸಾಹಸ ಗೀತೆಗಳ ಹಿನ್ನೆಲೆಯೊಂದಿಗೆ ವಿ– ಷಡಲ್ ಪರಾಮಿಡ್ ಟಿ.ಬ್ಯಾಲೆನ್ಸ್ ಭಜರಂಗ ಚಕೋರಾಸನ ನೌಕಾಸನ ವೀರಭದ್ರಾಸನ ಪ್ರದರ್ಶಿಸಿದರು. ಮಕ್ಕಳ ನವೀರೇಳಿಸುವ ಪ್ರದರ್ಶನವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತ್ತಿದ್ದವರು ಓಡಿ ಬಂದು ಮಲ್ಲಗಂಬದ ಸುತ್ತಲೂ ಜಮಾಯಿಸಿದರು. ಮಕ್ಕಳ ಪ್ರದರ್ಶನ ಕಂಡು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.