ಯಾದಗಿರಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಈ ಬಾರಿಯೂ ಕೊನೇ ಸ್ಥಾನದಲ್ಲೇ ಉಳಿಯುವ ಮೂಲಕ ಯಥಾಸ್ಥಿತಿ ಕಾಪಾಡಿಕೊಂಡಿದೆ.
2023ರಲ್ಲೂ 35ನೇ ಸ್ಥಾನದಲ್ಲಿದ್ದ ಯಾದಗಿರಿ, ಕೆಳಗಡೆಯಿಂದ ಮೊದಲ ಸ್ಥಾನದಲ್ಲಿದೆ. 18,880 ವಿದ್ಯಾರ್ಥಿಗಳಲ್ಲಿ 9,551 ಉತ್ತಿರ್ಣರಾಗಿದ್ದು, ಶೇ 50.59 ಫಲಿತಾಂಶ ಬಂದಿದೆ.
ಆವಿಷ್ಕಾರ ಹೆಸರಿನಡಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಶಾಲಾ ಶಿಕ್ಷಣ ಇಲಾಖೆ ಕಸರತ್ತು ನಡೆಸಿತ್ತು. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಕೊನೆ ಸ್ಥಾನ ಗಟ್ಟಿಯಾಗಿದೆ.