ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದಲಮರಿ ಗ್ರಾಮ ಪಂಚಾಯಿತಿಗೆ ಕಸ್ತೂರಿಬಾಯಿ, ಸಂತೋಷ ಆಯ್ಕೆ

Last Updated 31 ಮಾರ್ಚ್ 2021, 16:39 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನ ಗೆದ್ದಲಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ (ಧರ್ಮಪುರ) ಜುಮಾಲಪುರ ದೊಡ್ಡ ತಾಂಡಾದ ಎರಡು ಸದಸ್ಯ ಸ್ಥಾನಗಳ ಮತ ಎಣಿಕೆ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆಯಿತು.

ಬೆಳಿಗ್ಗೆ ಆರಂಭವಾದ ಮತ ಎಣಿಕೆ ಕಾರ್ಯ ಭರದಿಂದ ನಡೆದು ಕಸ್ತೂರಿಬಾಯಿ ತುಕಾರಾಮ 620 ಮತಗಳು ಹಾಗೂ ಸಂತೋಷ ಕಸನಪ್ಪ 549 ಮತಗಳನ್ನು ಪಡೆದು ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಎಸ್ ರಾಠೋಡ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಆದಮ್ ಶಫಿ ಘೋಷಣೆ ಮಾಡಿದರು.

ಒಟ್ಟು ಸಂಖ್ಯೆ ಚಲಾವಣೆಯಾದ 1,374 ಮತಗಳಲ್ಲಿ 1,274 ಕ್ರಮಬದ್ಧವಾಗಿದ್ದು, ಒಟ್ಟು 100 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಈ ಜುಮಾಲಪುರ ತಾಂಡಾ (ಧರ್ಮಪುರ) ಗ್ರಾಮಸ್ಥರು ಬಹಿಷ್ಕಾರ ಮಾಡಿದ್ದರು. ಸದ್ಯ ಪರಿಶಿಷ್ಟ ಜಾತಿ 1 ಹಾಗೂ ಪರಿಶಿಷ್ಟ ಜಾತಿ ಮಹಿಳೆ 1 ಸೇರಿದಂತೆ ಒಟ್ಟು 2 ಸ್ಥಾನಗಳಿಗೆ ಈ ಉಪ ಚುನಾವಣೆ ನಡೆದಿತ್ತು. 6 ಜನರು ನಾಮಪತ್ರ ಸಲ್ಲಿಸಿದ್ದರು.

ಫಲಿತಾಂಶ ಹೊರಬಿಳುತ್ತಿದ್ದಂತೆಯೇ ಚುನಾಯಿತ ಸದಸ್ಯರ ಬೆಂಬಲಿಗರು ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು.

ಪ್ರಮಾಣ ಪತ್ರ ವಿತರಣೆ: ಉಪ ಚುನಾವಣೆಯಲ್ಲಿ ಜಯ ಗಳಿಸಿದ ಕಸ್ತೂರಿಬಾಯಿ ತುಕರಾಮ ಹಾಗೂ ಸಂತೋಷ ಕಸನಪ್ಪ ಅವರಿಗೆ ಚುನಾವಣೆ ಅಧಿಕಾರಿಗಳು ಪ್ರಮಾಣ ಪತ್ರ ವಿತರಿಸಿದರು.

ಉಪತಹಶೀಲ್ದಾರ್ ಮಹಾದೇವಪ್ಪಗೌಡ ಹಾಗೂ ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಪ್ರಕಾಶ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT