ಶುಕ್ರವಾರ, ಜುಲೈ 30, 2021
27 °C
ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 822ಕ್ಕೆ ಏರಿಕೆ

ಯಾದಗಿರಿ | ಮತ್ತೆ 13 ಜನರಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ 13 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 822ಕ್ಕೆ ಏರಿಕೆಯಾಗಿದೆ. 

ಯಾದಗಿರಿ ತಾಲ್ಲೂಕಿನ ಥಾನುನಾಯಕ ತಾಂಡಾದ 17 ವರ್ಷದ ಯುವಕ, 23 ವರ್ಷದ ಪುರುಷ, ಅರಕೇರಾ ಕೆ. ಗ್ರಾಮದ 35 ವರ್ಷದ ಮಹಿಳೆ, 40 ವರ್ಷದ ಪುರುಷ, ಗುರುಮಠಕಲ್‍ನ 44 ವರ್ಷದ ಪುರುಷ, ತಾಲ್ಲೂಕಿನ ಚಂಡ್ರಿಕಿ ಗ್ರಾಮದ 36 ವರ್ಷದ ಮಹಿಳೆ, ಪಡಪಲ್ಲಿ ಗ್ರಾಮದ 29 ವರ್ಷದ ಪುರುಷ, 20 ವರ್ಷದ ಯುವತಿ, 26 ವರ್ಷದ ಮಹಿಳೆ, 25 ವರ್ಷದ ಪುರುಷ, 27 ವರ್ಷದ ಪುರುಷ, ಚಪೆಟ್ಲಾ ಗ್ರಾಮದ 30 ವರ್ಷದ ಮಹಿಳೆ, ಸುರಪುರ ತಾಲ್ಲೂಕಿನ ದೇವಾಪುರದ 24 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗಿಲಿದೆ.

13 ಜನ ಸೋಂಕಿತರಲ್ಲಿ 6 ಮಹಿಳೆಯರು, 7 ಪುರುಷರಿದ್ದಾರೆ. ಸೋಂಕಿತರೆಲ್ಲರೂ ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ.

ಸೋಮವಾರ 44 ಜನ ಗುಣಮುಖ: ಜಿಲ್ಲೆಯಲ್ಲಿ ಕೋವಿಡ್-19 ದೃಡಪಟ್ಟ 822 ವ್ಯಕ್ತಿಗಳ ಪೈಕಿ ಸೋಮವಾರ ಮತ್ತೆ 44 ಜನ ಗುಣಮುಖರಾಗಿದ್ದು, ಜೂನ್ 15ರವರೆಗೆ ಒಟ್ಟು 373 ಜನ ಗುಣಮುಖರಾದಂತಾಗಿದೆ.

ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದ 448 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1,300 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,697 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 46 ಕಂಟೇನ್‍ಮೆಂಟ್ ಝೋನ್‍ಗಳನ್ನು ರಚಿಸಲಾಗಿದೆ. 

277 ವರದಿ ಬಾಕಿ: ಕೊರೊನಾ ವೈರಸ್ ಪತ್ತೆಗೆ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿ ಸೋಮವಾರ 814 ವರದಿಗಳು ನೆಗೆಟಿವ್ ಬಂದಿವೆ. ಇದರೊಂದಿಗೆ ಈವರೆಗೆ 19,912 ಮಾದರಿಗಳ ವರದಿ ನೆಗೆಟಿವ್ ಬಂದಂತಾಗಿದೆ. 277 ಮಾದರಿಗಳ ವರದಿ ಬರಬೇಕಿದೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 172, ಶಹಾಪುರ, ಸುರಪುರ, ಬಂದಳ್ಳಿ ಏಕಲವ್ಯ ಕೊರೊನಾ ಕೇರ್‌ ಸೆಂಟರ್‌ನಲ್ಲಿ 252 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 21 ಸಾಂಸ್ಥಿಕ ಕ್ವಾರಂಟೈನ್ ಸೆಂಟರ್‌ಗಳಲ್ಲಿ 1,321 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು