ಮಂಗಳವಾರ, ಮೇ 11, 2021
26 °C

ಸಿಡಿಲು ಬಡಿದು ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುನಗಾಲ (ಸೈದಾಪುರ): ಮುನಗಾಲ ಗ್ರಾಮದಲ್ಲಿ ಮಂಗಳವಾರ ಸಿಡಿಲು ಬಡಿದು ಸಿದ್ದಮ್ಮ ಭೀಮಪ್ಪ ಕೌಳೂರು (45) ಎಂಬುವರು ಮೃತಪಟ್ಟಿದ್ದಾರೆ.

ಗ್ರಾಮದ ಬಳಿ ಹೊಲದಲ್ಲಿ ಸಿದ್ದಮ್ಮ ಶೇಂಗಾ ಕೀಳಲು ಹೋಗಿದ್ದರು. ಮಳೆ ಬರುವ ವಾತಾವರಣ ಕಂಡು ಕೂಲಿಕಾರ್ಮಿಕರು ಮನೆಗಳಿಗೆ ಮರಳಿದ್ದಾರೆ. ಆದರೆ, ಮಳೆ ನಿಂತ ಬಳಿಕ ಮನೆಗೆ ಹೋಗಬೇಕೆಂದು ಅವರು ಮರದ ಕೆಳಗೆ ಕೂತಿದ್ದ ವೇಳೆ ಸಿಡಿಲು ಬಡಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.