ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ತಡೆಗೆ 13 ತಂಡ

ಕೊರೊನಾ ನಿಗ್ರಹ ತಂಡಗಳಿಗೆ ತರಬೇತಿ ಕಾರ್ಯಾಗಾರ
Last Updated 9 ಜುಲೈ 2020, 8:18 IST
ಅಕ್ಷರ ಗಾತ್ರ

ಯಾದಗಿರಿ: ಪ್ರವಾಸದ ಹಿನ್ನೆಲೆ ಇಲ್ಲದಿದ್ದರೂ ಇತ್ತೀಚೆಗೆ ಕೆಲವರಿಗೆ ಕೊರೊನಾ ಸೋಂಕು ದೃಢಗೊಳ್ಳುತ್ತಿರುವುದರಿಂದ ವಿಷಮಶೀತ ಜ್ವರ ಹಾಗೂ ಉಸಿರಾಟ ಸಮಸ್ಯೆ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜರುಗಿದ ಕೋವಿಡ್-19 ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ರಚಿಸಿರುವ ಜಿಲ್ಲಾ ಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮಗಳ ಕಾರ್ಯ ತಂಡಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸೋಂಕು ಹರಡುವಿಕೆ ತಡೆಗೆ ಜಿಲ್ಲೆಯಲ್ಲಿ ಒಟ್ಟು 13 ತಂಡಗಳನ್ನು ರಚಿಸಿ ಆಯಾ ತಂಡಗಳಿಗೆ ಜವಾ ಬ್ದಾರಿ ನೀಡಲಾಗಿದೆ. ಅದರಂತೆ ಕಾರ್ಯನಿ ರ್ವಹಣೆ ಮಾಡಿ ವರದಿ ನೀಡಬೇಕು.

ಪರೀಕ್ಷಾ ತಂಡವು ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಪ್ರಾಥಮಿಕ ಸಂಪರ್ಕ, ವೈದ್ಯರು ನಿರ್ಧರಿಸಿದ ಶಂಕಿತ ಪ್ರಕರಣಗಳು, ಸಾರ್ವಜನಿಕರೊಡನೆ ಸಂಪರ್ಕ ಹೊಂದಿರುವ ಪೊಲೀಸ್, ವಾಚ್ ಮನ್, ತರಕಾರಿ ವ್ಯಾಪಾರಿ, ಹೋಟೆಲ್ ಕ್ಯಾಶಿಯರ್ ನಂತಹವರನ್ನು ಪರೀಕ್ಷಿಸಬೇಕು ಹಾಗೂ ಪರೀಕ್ಷೆಯ ವರದಿ ಬೇಗನೆ ಸಿಗುವಂತೆ ಮಾಡಲು ನಿರ್ದೇಶಿಸಿದರು.

ಸಂಪರ್ಕ ಪತ್ತೆ ತಂಡವು 24 ಗಂಟೆಗಳಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳ ಸಂಪರ್ಕ ಎಲ್ಲೆಲ್ಲಿದೆ? ಅಪಾಯದ ಸಂಪರ್ಕಗಳಾವುವು? ಹಾಗೂ ಮೊಬೈಲ್ ನಂಬರ್ ಖಚಿತಪಡಿಸಿಕೊಳ್ಳುವುದು ಮತ್ತು ಮಾಹಿತಿಯನ್ನು ಸಂಬಂಧಿತ ತಂತ್ರಾಂಶದಲ್ಲಿ ಹಂಚಿಕೊಳ್ಳಬೇಕು. ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಅವಶ್ಯಕ ಉಪಕರಣಗಳು, ಔಷಧ ಗಳು ಸೇರಿದಂತೆ ಸೌಲಭ್ಯಗಳನ್ನು ಸಿದ್ಧಗೊಳಿಸಿ ಕೊಳ್ಳಬೇಕು ಎಂದರು.

ಕಂಟೇನ್‌ಮೆಂಟ್ ವಲಯಗಳ ತಂಡ, ನಿಗಾವಣೆ ತಂಡ, ಜಿಲ್ಲಾ ನಿಯಂತ್ರಣ ಕೊಠಡಿ ತಂಡ, ಮೃತ ದೇಹದ ನಿರ್ವಹಣಾ ತಂಡ, ಅಂತರರಾಜ್ಯ ಪ್ರವಾಸಿಗರ ವೀಕ್ಷಣಾ ತಂಡ, ಮಾತೃ ಮತ್ತು ಮಗುವಿನ ಆರೋಗ್ಯ ಸೇವಾ ತಂಡಗಳು ಸೇರಿದಂತೆ ಎಲ್ಲಾ ತಂಡಗಳು ಜಿಲ್ಲಾಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಇಲ್ಲವಾದರೆ ವಿಪತ್ತು ನಿರ್ವಹಣಾ ಅಧಿನಿಯಮ 2005 ರಂತೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸರ್ಕಾರದ ನಿರ್ದೇಶನದಂತೆ ತಮ್ಮೊಡನೆ ವ್ಯವಹರಿಸಿದ ಹಾಗೂ ಸಂಪರ್ಕಕ್ಕೆ ಬಂದವರ ಕುರಿತು ಸಂಬಂಧಿತ ಆನ್ ಲೈನ್ ಪೋರ್ಟಲ್ ಮೂಲಕ ಮಾಹಿತಿ ಯನ್ನು ಹಂಚಿಕೊಳ್ಳದಿರುವ ಔಷಧ ದಂಗಡಿಗಳು, ಪ್ರಯೊಗಾಲಯಗಳು, ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಡಿವೈಎಸ್ಪಿ ಯು.ಶರಣಪ್ಪ, ವಿಶ್ವ ಆರೋಗ್ಯ ಸಂಸ್ಥೆಯ ಕಲಬುರಗಿ ವಿಭಾಗಮಟ್ಟದ ವೈದ್ಯಕೀಯ ಸರ್ವೇ ಕ್ಷಣಾಧಿಕಾರಿ ಡಾ.ಅನಿಲ್ ಕುಮಾರ್ ಎಸ್.ತಾಳಿಕೋಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಎಂ.ಎಸ್.ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT