ಭಾನುವಾರ, ಜನವರಿ 19, 2020
29 °C

ಮಾಲಾಧಾರಿಗಳಿಗೆ ಪ್ರಸಾದ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಆಧ್ಯಾತ್ಮದ ಗುರಿ ಸಾಧನೆಗಾಗಿ ಹಲವು ಮಾರ್ಗಗಳಿದ್ದರೂ ಆದರ್ಶವಾದಿಗಳ ಬೋಧನೆಗಳು ಸಕಲ ಜೀವಿಗಳಿಗೂ ಸನ್ಮಾರ್ಗದೆಡೆಗೆ ಕೊಂಡೊಯ್ಯುವುದೆ ಆಗಿರುತ್ತದೆ ಎಂದು ಪಟ್ಟಣದ ಅಯ್ಯಪ್ಪ ಸ್ವಾಮಿ ಪೀಠದ ಪ್ರಧಾನ ಅರ್ಚಕ ಗುರುಸ್ವಾಮಿ ಪ್ರಸಾದ ಹೇಳಿದರು.

ಪಟ್ಟಣದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಾನುವಾರ ಸ್ವಾಮಿಯ ವ್ರತ ನಿರತ ಮಾಲಾಧಾರಿಗಳಿಗೆ ಮುಸ್ಲಿಂ ಯುವ ಮಿತ್ರರು ಹಮ್ಮಿಕೊಂಡ ಪ್ರಸಾದ ಸೇವಾ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಭಗವಂತನಲ್ಲಿ ಭೇದವಿಲ್ಲ. ತಾರತಮ್ಯವೇನಿದ್ದರೂ ಸತ್ಯ ಸನ್ಮಾರ್ಗವರಿಯದ ಮೂಢ ಮನುಜರಲ್ಲಿ ಮಾತ್ರ ಎಂದ ಅವರು ಮುಸ್ಲಿಂ ಯುವ ಮಿತ್ರರು ಇಂದು ಮಾಲಾದಾರಿಗಳಿಗೆ ಪ್ರಸಾದ ಸೇವೆ ಮಾಡಿವುದರ ಮೂಲಕ ಭಾವೈಕ್ಯತೆ ಮೆರೆದು ಭಗವಂತನ ಕೃಪೆಗೆ ಪಾತ್ರರಾಗಿದ್ದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಂದೆನವಾಜ ನಾಲ್ತವಾಡ ಕೆ.ಬಿ.ನ್ ಹಾಗೂ ಶಿಕ್ಷಕ ಬಾಬು ಪಟೆಲ್ ಯಲಗೋಡ ಮಾತನಾಡಿದರು.

ಇದಕ್ಕೂ ಮುಂಚೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಸಂಚಾಲಕ ಮಲ್ಕಪ್ಪ ಅಂಗಡಿ, ಗುಂಡುಗೌಡ ಪಾಟೀಲ್ ಯಾಳಗಿ, ಎಸ್. ಕೆ, ಮಹಮದ್, ಇಸ್ಮಾಯಿಲ್ ಸಾಸನೂರ್, ಶಫಿಕ್ ದಪೇದಾರ, ಶಿವಕುಮಾರ ಬಂದೆ, ಬಂದೆನವಾಜ ನಾಲ್ತವಾಡ, ಹಮೀದ್ ಹುಣಚಾಳ್, ಹನೀಪ್ ಗುಂಡಕನಾಳ್, ಅಬ್ದುಲ್‍ಸಾಬ ಸಾಸನೂರ್, ಅಯ್ಯೂಬ್ ಹವಲ್ದಾರ್, ಶಂಕರ್ ಬಿರಾದಾರ್, ಆರಿಫ್ ಸಾಸನೂರ್, ಇಲಿಯಾಸ ನಾಲ್ತವಾಡ, ಸಂಗಪ್ಪ ಮಾಲಗತ್ತಿ, ಇಸ್ಮಾಯಿಲ್ ಮದ್ರಕಿ ಸೇರಿದಂತೆ ವ್ರತನಿರತ ಮಾಲಾಧಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು