ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ನಿಷೇಧಿತ ಬೆಳೆಯಾದ ಭತ್ತ ನಾಟಿ ಕಾರ್ಯ ಜನವರಿ ತಿಂಗಳು ಬಂದರು ಸಹ ಮುಂದುವರೆದಿದೆ. ಇದರಿಂದ ನಿಗದಿತ ಅವಧಿಯಲ್ಲಿ ಬಿತ್ತನೆ ಕಾರ್ಯ ನಡೆಸದಿದ್ದರೆ ಮತ್ತೆ ಬೆಳೆದು ನಿಂತ ಪೈರಿಗೆ ನೀರು ಹರಿಸಿ ಎಂಬ ಹೋರಾಟ ತಪ್ಪಿದ್ದಲ್ಲ ಎಂಬ ಕೂಗು ರೈತರಿಂದ ಕೇಳಿ ಬರುತ್ತಲಿದೆ.

ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಮೂಲಕ ಹಿಂಗಾರು ಹಂಗಾಮಿನ ಬೆಳೆಗೆ ವಾರಬಂದಿ ನಿಯಮದ ಪ್ರಕಾರ ಏಪ್ರಿಲ್ 3ವರೆಗೆ ನೀರು ಹರಿಸಲಾಗುವುದು ಎಂಬ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದರಂತೆ, ಈಗ ಕಾಲುವೆಗೆ ನೀರು ಹರಿದು ಬರುತ್ತಲಿದೆ. ಮುಂಗಾರು ಹಂಗಾಮಿನ ಬೆಳೆ ರಾಶಿ ಮಾಡಿಕೊಂಡು ಭೂಮಿ ಹದಗೊಳಿಸಿ ಮತ್ತೆ ರೈತರು ಭತ್ತ ನಾಟಿ ಮಾಡುತ್ತಿದ್ದಾರೆ.

‘ಬೆಳೆಗಾರರು ನೀರಾವರಿ ಪ್ರದೇಶದಲ್ಲಿನ ವಾಸ್ತವ ಪರಿಸ್ಥಿತಿ ಹಾಗೂ ಕಾನೂನು ಪಾಲನೆ ಎಂಬುವುದು ಮರೆತು ಬಿಟ್ಟಿದ್ದಾರೆ. ರಾಜಕೀಯ ತೊಳ್ಬಲ ಕೆಲ ರೈತ ಸಂಘಟನೆಯ ಹೋರಾಟದ ಮೂಲಕ ನೀರು ಪಡೆಯುತ್ತೇವೆ ಎಂಬ ದುಸ್ಸಾಹಸದಿಂದ ಪ್ರತಿ ವರ್ಷ ಇಂತಹ ಸಮಸ್ಯೆ ಹುಟ್ಟು ಹಾಕಿಕೊಂಡು ಬರುತ್ತಿದ್ದಾರೆ’ ಎಂಬ ಆರೋಪವನ್ನು ನೀರು ವಂಚಿತ ಕೆಳಭಾಗದ ರೈತ ನಿಂಗಣ್ಣ ಮಾಡುತ್ತಾರೆ.

‘ಮಾರ್ಚ್ ತಿಂಗಳು ಬಂತು ಎಂದರೆ ರೈತ ಸಂಘಟನೆಯ ಹೆಸರಿನ ಕೆಲ ಮುಖಂಡರು ಮುನ್ನೆಲೆಗೆ ಬರುತ್ತಾರೆ. ಆಂಧ್ರ ಭಾಗದ ವಲಸಿಗರ ಬೆಂಬಲದಿಂದ ಪ್ರತಿಭಟನೆ, ಧರಣಿ, ರಸ್ತೆ ತಡೆ ನಡೆಸುವುದು ಸಾಮಾನ್ಯವಾಗಿದೆ. ಆದರೆ, ಅದೇ ಕಾಲುವೆ ಜಾಲದ ರೈತರಿಗೆ ನೀರು ಹರಿಸುತ್ತಿಲ್ಲ ಎಂದು ರೈತ ಸಂಘಟನೆಯ ಮುಖಂಡರು ಮುಂದೆ ಬರುವುದಿಲ್ಲ. ಬಂದರು ಸಹ ಕಾಟಾಚಾರದ ಮನವಿ ಸಲ್ಲಿಸಿ ಕೈ ತೊಳೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ನೀರಿನ ಹೆಸರಿನಲ್ಲಿ ಕೆಲ ರಾಜಕೀಯ ಮುಖಂಡರು ಮೂಗು ತೋರಿಸುತ್ತಾರೆ. ವಾಸ್ತವ ಸ್ಥಿತಿ ಮತ್ತು ಬೆಳೆ ಪದ್ಧತಿ ನಿಯಮ ಪಾಲನೆ ಮಾಡಬೇಕು ಎಂಬ ಅರಿವು ಮೂಡಿಸದೆ ಇರುವುದು ಬೇಸರ ತರಿಸಿದೆ’ ಎನ್ನುತ್ತಾರೆ ಮತ್ತೊಬ್ಬ ರೈತ ಶರಣಪ್ಪ.

ಕಡ್ಡಾಯವಾಗಿ ನೀರಿನ ಕರ ಪಾವತಿಸಿ: ‘ನೀರಿನ ಕರ ವಸೂಲಿಗಾಗಿ ಕೆಬಿಜೆಎನ್ಎಲ್ ನಿಗಮವು ಪ್ರತ್ಯೇಕವಾದ ಸಿಬ್ಬಂದಿ ನೇಮಿಸಬೇಕು. ಕರ ವಸೂಲಿಯಲ್ಲಿ ಪಾರದರ್ಶಕತೆ ತರಬೇಕು. ಕಾಲುವೆ ಉಳಿಯಬೇಕು ಎಂದರೆ ರೈತರು ಕಡ್ಡಾಯವಾಗಿ ನೀರಿನ ಕರ ಪಾವತಿಸಲು ಮುಂದೆ ಬರಬೇಕು. ಇಲ್ಲದೆ ಹೋದರೆ ಮುಂದಿನ ದಿನದಲ್ಲಿ ಸಂಕಷ್ಟ ಎದುರಿಸುವುದು ಗ್ಯಾರಂಟಿ. ರೈತರು ವಾಸ್ತವ ಸ್ಥಿತಿ ಅರಿತುಕೊಳ್ಳಬೇಕು’ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ರೈತರಲ್ಲಿ ಮನವಿ ಮಾಡಿದ್ದಾರೆ.

ರೈತರು ನಿಗದಿತ ಅವಧಿಯಲ್ಲಿ ಹಾಗೂ ನೀರು ಲಭ್ಯತೆಯ ಆಧಾರದ ಮೇಲೆ ಹಿಂಗಾರು ಹಂಗಾಮಿನ ಬೆಳೆ ಬೆಳೆಯಬೇಕು. ಇದರಿಂದ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಅನವಶ್ಯಕವಾಗಿ ನೀರು ಪೋಲು ಮಾಡಬಾರದು
ಶರಣಬಸಪ್ಪ ದರ್ಶನಾಪುರ ಸಚಿವ

‘ಬಾರದ ನೀರಿನ ಕರ’

‘ಕಾಲುವೆ ಮೇಲ್ಭಾಗದ ರೈತರು ನಿರಂತರವಾಗಿ ಎರಡು ಹಂಗಾಮಿನ ಬೆಳೆಗೆ ನೀರು ತೆಗೆದುಕೊಳ್ಳುವುದರ ಜತೆಯಲ್ಲಿ ನಿಷೇಧಿತ ಬೆಳೆಯಾದ ಭತ್ತ ನಾಟಿ ಮಾಡುತ್ತಾರೆ. ನಿಗಮವು ದಂಡ ವಿಧಿಸಲು ಅವಕಾಶವಿದೆ. ಆದರೆ ರೈತರು ನೀರಿನ ಕರ ನೀಡುತ್ತಿಲ್ಲ. ಸುಮಾರು ₹ 25 ಕೋಟಿಗೂ ಅಧಿಕ ನೀರಿನ ಕರ ಬಾಕಿ ಇದೆ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಭೀಮರಾಯನಗುಡಿ ವೃತ್ತದ ಎಂಜಿನಿಯರ್. ‘ರೈತರು ನೀರಿನ ಕರ ಪಾವತಿಸಿದರೆ ಕಾಲುವೆ ಸ್ವಚ್ಛಗೊಳಿಸಲು ಹಾಗೂ ದುರಸ್ತಿಗೊಳಿಸಲು ಅನುಕೂಲವಾಗುತ್ತದೆ. ಪ್ರತಿಯೊಂದಕ್ಕೂ ಸರ್ಕಾರ ಹಾಗೂ ನಿಗಮದ ಕಡೆ ಆರ್ಥಿಕ ನೆರವು ನೀಡಿ ಎಂದು ಬೊಟ್ಟು ಮಾಡುವುದು ಸಲ್ಲದು. ತುಂಗಾಭಧ್ರ ವ್ಯಾಪ್ತಿಯಲ್ಲಿನ ರೈತರು ಕಡ್ಡಾಯವಾಗಿ ನೀರಿನ ಕರ ಪಾವತಿಸುತ್ತಾರೆ. ಇಲ್ಲಿ ಯಾಕೆ ಪಾವತಿಸುತ್ತಿಲ್ಲ’ ಎಂದು ಪ್ರಶ್ನಿಸುತ್ತಾರೆ ಮತ್ತೊಬ್ಬ ಎಂಜಿನಿಯರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.