ನೈಜ ಇತಿಹಾಸಕಾರರಿಗೆ ಬಿಕ್ಕಟ್ಟು
ಇಂದು ಸಂಶೋಧನೇತರವಾದ ಅಧ್ಯಯನೇತರವಾದ ಶಕ್ತಿಗಳು ಚರಿತ್ರೆ ಕ್ಷೇತ್ರಕ್ಕೆ ಪ್ರವೇಶಿಸಿ ಅಂತಿಮ ತೀರ್ಪುಗಳನ್ನು ಕೊಡುತ್ತಿವೆ. ಹೀಗಾಗಿ ನಿಜವಾದ ಇತಿಹಾಸ ತಜ್ಞರು ಸಂಶೋಧಕರು ದೊಡ್ಡ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಸಾಹಿತ್ಯ ಚರಿತ್ರೆಗಳ ವಿಷಯದಲ್ಲಿ ಯಾವುದು ನಿಜ ಯಾವುದು ಅಪವ್ಯಾಖ್ಯಾನ ಅನ್ನುವ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.