ಶಹಾಪುರ: ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನಸ್ಟೆಬಲ್ ಆಗಿ ನಿವೃತ್ತಿ ಹೊಂದಿರುವ ಕಲಬುರಗಿಯ ನಿವಾಸಿ ಖಾಜಾ ಫರಿದುದ್ದೀನ ಅವರು ಕಲ್ಯಾಣ ಕರ್ನಾಟಕದ ಶಾಲಾ ಕಾಲೇಜುಗಳಿಗೆ ಹಾಗೂ ವಕೀಲರ ಸಂಘಗಳಿಗೆ ತಮಗೆ ಬರುವ ಪಿಂಚಣಿ ಹಣದಲ್ಲಿ ಪುಸ್ತಕಗಳನ್ನು ಖರೀದಿಸಿ ಸದ್ದು ಗದ್ದಲವಿಲ್ಲದೆ ಜ್ಞಾನ ದಾಸೋಹದ ಬೆಳಕು ಹಂಚುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಶಹಾಪುರದ ವಕೀಲರ ಸಂಘಕ್ಕೆ ಭೇಟಿ ನೀಡಿ ಕಾನೂನು ಪುಸ್ತಕಗಳನ್ನು ವಿತರಿಸಿ ಗಮನ ಸೆಳೆದರು.

‘ನಾನು 1988ರಿಂದ 1992ರವರೆಗೆ ಶಹಾಪುರ ಠಾಣೆಯಲ್ಲಿ ಪೊಲೀಸ್ ಕಾನಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದೆ. ರಸ್ತೆ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿರುವೆ. ನಿವೃತ್ತಿ ಹೊಂದಿದ ಮೇಲೆ ನನಗೆ ₹36 ಸಾವಿರ ಪಿಂಚಣಿ(ಪನೆಶನ್) ಬರುತ್ತಲಿದೆ. ಅದರಲ್ಲಿ ಒಂದಿಷ್ಟು ನನ್ನ ಖರ್ಚಿಗೆ ಉಪಯೋಗಿಸಿಕೊಂಡು ಉಳಿದ ಹಣವನ್ನು ಪುಸ್ತಕಗಳನ್ನು ಖರೀದಿಸುತ್ತೇನೆ’ ಎನ್ನುತ್ತಾರೆ ಅವರು.

‘ನಾನು ಶಾಲಾ ಕಾಲೇಜುಗಳಿಗೆ ಹಾಗೂ ಗ್ರಂಥಾಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸ್ಪರ್ಧಾತ್ಮಕ ವಿಷಯಗಳ ಪುಸ್ತಕಗಳನ್ನು ಹಂಚಿಕೆ ಮಾಡಿರುವೆ. ಇಲ್ಲಿಯವರೆಗೆ ಸುಮಾರು 2000ಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಿರುವೆ. ನನಗೆ ಯಾವುದೇ ಚಟವಿಲ್ಲ. ಬಂದ ಹಣದಲ್ಲಿ ಒಂದಿಷ್ಟು ಪುಸ್ತಗಳನ್ನು ಖರೀದಿಸುವ ಹವ್ಯಾಸವಿದೆ. ಇದು ವಿದ್ಯಾರ್ಥಿಗಳಿಗೆ ಹಾಗೂ ಯುವ ವಕೀಲರಿಗೆ ನೆರವಾಗಲಿ ಎನ್ನುವ ಬಯಕೆ ನನ್ನದು’ ಎಂದು ಅವರು ನುಡಿದರು.

‘ನಮ್ಮ ವಕೀಲರ ಗ್ರಂಥಾಲಯಕ್ಕೆ ಉಪಯುಕ್ತವಾದ ಕಾನೂನು ಪುಸ್ತಕಗಳನ್ನು ನೀಡಿದ್ದಾರೆ. ಯುವ ವಕೀಲರಿಗೆ ಅಭ್ಯಾಸ ಮಾಡಲು ಅನುಕೂಲವಾಗುತ್ತದೆ. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ತೆಗೆದುಕೊಂಡು ಹೋಗುವ ಇಂತಹ ವಿಷಮ ವಾತಾವರಣದಲ್ಲಿ ಉಚಿತವಾಗಿ ಪುಸ್ತಕಗಳನ್ನು ಹಂಚಿರುವ ಅವರ ಹವ್ಯಾಸವು ಉಳಿದ ಜನತೆಗೆ ಮಾದರಿಯಾಗಿ ನಿಲ್ಲುತ್ತಾರೆ’ ಎನ್ನುತ್ತಾರೆ ವಕೀಲರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ.

ಇದೇ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ ಹಾಗೂ ಹಿರಿಯ ವಕೀಲರಾದ ಎಸ್.ಶೇಖರ ಸಾಹು, ವಿಶ್ವನಾಥರಡ್ಡಿ ಕೊಡಮನಹಳ್ಳಿ ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಖಾಜಾ ಫರದುದ್ದೀನ ಅವರು ತಮ್ಮ ಪಿಂಚಣಿಯ ಹಣದಲ್ಲಿ ಪುಸ್ತಕ ಖರೀದಿ ಹಂಚಿಕೆ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ
-ಎಸ್.ಶೇಖರ ಸಾಹು, ಹಿರಿಯ ವಕೀಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.