ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ₹ 100ರ ಗಡಿ ದಾಟಿದ ಪೆಟ್ರೋಲ್ ದರ

Last Updated 19 ಜೂನ್ 2021, 4:31 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ಪೆಟ್ರೋಲ್ ದರ ₹ 100ರ ಗಡಿ ದಾಟಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ₹ 100.49, ಭಾರತ ಪೆಟ್ರೋಲಿಯಂ (ಬಿಪಿ) ₹ 100.53, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) ₹ 100.52 ದರ ಏರಿಕೆಯಾಗಿದೆ.

ಕಳೆದ ಮೂರು ದಿನಗಳಿಂದ ಏರುಮುಖದಲ್ಲಿರುವ ಪೆಟ್ರೋಲ್ ದರ ₹ 100 ಗಡಿ ದಾಟಿದೆ.

ಡೀಸೆಲ್ ದರ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ₹ 93.29, ಭಾರತ ಪೆಟ್ರೋಲಿಯಂ (ಬಿಪಿ) ₹ 93.33, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) ₹ 93.32 ಇದೆ.

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಆಟೊ ಚಾರ್ಚ್‌ ಹೆಚ್ಚಳ ಮಾಡಲಾಗಿದೆ. ಯಾದಗಿರಿ ರೈಲ್ವೆ ನಿಲ್ದಾಣದಿಂದ ಹೊಸ ಬಸ್‌ ನಿಲ್ದಾಣದವರೆಗೆ ಈ ಮುಂಚೆ ₹ 10 ದರ ಇತ್ತು. ಈಗ ₹ 15ರಿಂದ ₹ 20ಗೆ ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ನಾವು ದರ ಹೆಚ್ಚು ಮಾಡಿದ್ದೇವೆ ಎಂದು ಆಟೊ ಚಾಲಕರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT