ಯಾದಗಿರಿ: ಗಣೇಶ ಚತುರ್ಥಿ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ತರಕಾರಿ ಬೆಲೆ ಕನಿಷ್ಠ ₹10ರಿಂದ ₹20 ಹೆಚ್ಚಳವಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.

ಟೊಮೆಟೊ, ಈರುಳ್ಳಿ, ಬದನೆಕಾಯಿ ದರದಲ್ಲಿ ಹೆಚ್ಚಳವಾಗಿದೆ. ಕಳೆದ ವಾರ ಬದನೆಕಾಯಿ ಬೆಲೆ ₹80 ಕೆ.ಜಿ ಇತ್ತು. ಈ ವಾರ ₹20 ಹೆಚ್ಚಳವಾಗಿ ₹100ಕ್ಕೆ ಕೆ.ಜಿ ಮಾರಾಟವಾಗುತ್ತಿದೆ. ಅದರಂತೆ ಈರುಳ್ಳಿ ಬೆಲೆಯೂ ₹20 ಹೆಚ್ಚಳವಾಗಿ ₹40ಕ್ಕೆ ಕೆ.ಜಿ ಮಾರಾಟವಾಗುತ್ತಿದೆ.ಮೆಣಸಿನಕಾಯಿಕಳೆದ ವಾರ ₹60ಇತ್ತು. ಈ ವಾರ ₹80 ಆಗಿ ₹20 ಹೆಚ್ಚಳವಾಗಿದೆ.

‘ಟೊಮೆಟೊ ಒಂದು ಕ್ಯಾನ್ ಬೆಲೆ ₹900 ಇದೆ. ಕಳೆದ ವಾರ ₹800 ದರವಿತ್ತು. ಅಲ್ಲದೆಈರುಳ್ಳಿ 40 ಕೆ.ಜಿಯ ಒಂದು ಚೀಲ ₹1,000 ಇದೆ. ಕಳೆದ ವಾರ ₹700 ಇತ್ತು. ಹೀಗಾಗಿ ನಾವು ದರ ಹೆಚ್ಚಿಸಿದ್ದೇವೆ’ ಎಂದು ತರಕಾರಿ ವ್ಯಾಪಾರಿ ಅಂಜಮ್ಮ ಮಂಜುಳಕರ್ ಹೇಳುತ್ತಾರೆ.

ಶ್ರಾವಣ ಮಾಸ ಮುಗಿಯಿತು. ತರಕಾರಿ ಬೆಲೆ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಿದವರಿಗೆ ಗಣೇಶ ಹಬ್ಬ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ.

ಈ ಬಾರಿ ಬದನೆಕಾಯಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹುಳು ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಮಾರುಕಟ್ಟೆಗೆ ಬರುವ ಪ್ರಮಾಣವೂ ಕಡಿಮೆ ಇದೆ. ಹೀಗಾಗಿ ದರದಲ್ಲೂ ಹೆಚ್ಚಳವಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಯೇ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.

ಬೀಟ್ ರೂಟ್,ಹೀರೆಕಾಯಿ,ಹಾಗಲಕಾಯಿ,ತೊಂಡೆಕಾಯಿ,ಚವಳೆಕಾಯಿ,ಬೀನ್ಸ್,ಗಜ್ಜರಿಇನ್ನಿತರ ತರಕಾರಿಗಳು ಸ್ಥಿರ ದರ ಕಾಪಾಡಿಕೊಂಡಿವೆ.

ಏರುಗತಿಯಲ್ಲಿ ಸೊಪ್ಪುಗಳ ಬೆಲೆ: ಕಳೆದ ವಾರ ಸೊಪ್ಪುಗಳ ಅಭಾವ ಎದುರಾಗಿತ್ತು. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೆಚ್ಚಿನ ದರವಿದೆ.

ಪಾಲಕ್₹10ಗೆ ಒಂದು ಕಟ್ಟು,ಮೆಂತ್ಯೆ ₹20 ಗೆ ಒಂದು ಕಟ್ಟು, ಪುಂಡಿಪಲ್ಯೆ₹20ಕ್ಕೆ 3 ಕಟ್ಟು ಮಾರಾಟ ಮಾಡಲಾಗುತ್ತಿದೆ.ರಾಜಗಿರಿ ಸೊಪ್ಪು10ಕ್ಕೆ 1,ಸಬ್ಬಸಿಗಿ ಒಂದು ಕಟ್ಟು ₹10,ಕೋತಂಬರಿ ಒಂದು ಕಟ್ಟು ಕಳೆದ ವಾರ ₹30 ಇತ್ತು. ಈ ವಾರ ₹20 ಹೆಚ್ಚಳವಾಗಿ₹50ಗೆ ಮಾರಾಟವಾಗುತ್ತಿದೆ.ಈರುಳ್ಳಿ ಸೊಪ್ಪು ಕೇಜಿಗೆ ₹60 ಇದೆ.ನುಗ್ಗೆಕಾಯಿದರ ಕಡಿಮೆಯಾಗಿದ್ದು ₹80ಕ್ಕೆ ಕೆ.ಜಿ ಮಾರಾಟವಾಗುತ್ತಿದೆ.

ಹಣ್ಣುಗಳ ಬೆಲೆ: ಗಣೇಶ ಚತುರ್ಥಿಗೆ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಮಧ್ಯಮ ಗಾತ್ರದ ಸೇಬು ಹಣ್ಣು ₹100ಕ್ಕೆ ಮೂರು, ಮೊಸಂಬಿ ₹20ಕ್ಕೆ ಒಂದು, ದಾಳಿಂಬೆ ₹10ಕ್ಕೆ ಒಂದು, ಬಾಳೆ ಡಜನ್ ₹40ಗೆ ಮಾರಾಟವಾಗುತ್ತಿದೆ.

ಅವರೆಕಾಯಿ, ಚವಳೆಕಾಯಿ, ಬೆಂಡೆಕಾಯಿಗೆ ಕಡಿಮೆ ಬೆಲೆ ಇದೆ. ವಾರಕೊಮ್ಮೆ ದರ ಏರಿಳಿಕೆಯಾಗುತ್ತಿದೆ. ಚೌತಿಗೆ ಬೆಲೆ ಹೆಚ್ಚಳವಾಗಿದೆ

-ಪದ್ಮಾ ಅಂಜನೇಯ, ತರಕಾರಿ ವ್ಯಾಪಾರಿ

ಮಳೆಗೆ ತರಕಾರಿ ಸೇರಿದಂತೆ ನಮ್ಮ ಬೆಳೆ ಎಲ್ಲ ನಾಶವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ

-ಬೋರೆಡ್ಡಿ ಮುದಿಗೌಡ, ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.