ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಕನಳ್ಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

Last Updated 10 ಡಿಸೆಂಬರ್ 2019, 10:30 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ವರ್ಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ತುಂಬಿದ್ದು, ಹದೆಗೆಟ್ಟ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಕರವೇ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಈ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ‘ವರ್ಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ತಗ್ಗು ತುಂಬಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ದಾರಿ ಯಾವುದು ಎಂಬುದನ್ನು ಗುರುತಿಸದಂತಹ ಸ್ಥಿತಿ ಇದೆ’ ಎಂದರು.

‘ಈ ರಸ್ತೆ ಕ್ಷೇತ್ರ ಮೈಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಮಸ್ಕನಳ್ಳಿ, ಹಳಿಗೇರಾ, ವರ್ಕನಳ್ಳಿ, ತಾಂಡಾ, ಆರ್.ಹೊಸಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಸಂಪರ್ಕಿಸುತ್ತದೆ. ಮೈಲಾಪುರ ಜಾತ್ರೆ ಸಂದರ್ಭದಲ್ಲಿ ಭಕ್ತರು ವಾಹನಗಳೊಂದಿಗೆ ಸಂಚರಿಸುತ್ತಾರೆ. ಆದರೆ, ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ’ ಎಂದು ಆರೋಪಿಸಿದರು.

‘ರಸ್ತೆ ದುರಸ್ತಿಗೊಳಿಸುವಂತೆ ಹಲವು ದಿನಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ತಹಶೀಲ್ದಾರ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಮಿಸಿ ತಕ್ಷಣ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಭರವಸೆ ನೀಡಿದರು.

ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಶಿವಕುಮಾರ ವಡಗೇರಾ, ಹಣಮಂತ ಖಾನಳ್ಳಿ, ವೆಂಕಟೇಶ ರಾಠೋಡ, ಅರ್ಜುನ ಪವಾರ, ಸಾಹೇಬಗೌಡ ನಾಯಕ, ಸಿದ್ದಪ್ಪ ಕೊಲೂರು, ಭೀಮು ಮಡ್ಡಿ, ರಿಯಾಜ್ ಪಟೇಲ್, ಮಲ್ಲು ದೇವಕರ್, ಯಮುನಯ್ಯ ಗುತ್ತೇದಾರ, ರಾಜುಗೌಡ ಪಗಲಾಪುರ, ದೀಪಕ ಒಡೆಯರ್, ಭೀಮು ಬಸವಂತಪುರ, ರವಿ ನಾಯಕ, ನಾಗಪ್ಪ ಗೋಪಾಳಪುರ, ಸೈದಪ್ಪ ಗೌಡಗೇರಾ, ಮಹೇಶ ಠಾಣಗುಂದಿ, ಮಲ್ಲಿಕಾರ್ಜುನ ಕನ್ನಡಿ, ವೆಂಕಟೇಶ ಕೌಳೂರು, ಹಣಮಂತ ಯಡ್ಡಳ್ಳಿ, ಭೀಮಣ್ಣ ಶೇಟ್ಟಿಗೇರ, ಯಲ್ಲಾಲಿಂಗಹತ್ತಿಕುಣಿ, ಭೀಮು, ಶರಣು ಮಡಿವಾಳ, ವಿಜಯಕುಮಾರ ರಾಠೋಡ, ದೇವು ಹತ್ತಿಕುಣಿ, ಈಶಪ್ಪ ಠಾಣಗುಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT