ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಪಿಯು ಪರೀಕ್ಷೆ ಸುಸೂತ್ರ

13 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ, ಅಗತ್ಯ ಕ್ರಮ ಕೈಗೊಂಡ ಶಿಕ್ಷಣ ಇಲಾಖೆ
Last Updated 18 ಜೂನ್ 2020, 15:54 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌–19ನಿಂದ ಮುಂದೂಡಲ್ಪಟ್ಟಿದ್ದ ಪಿಯು ಇಂಗ್ಲಿಷ್‌ ಪರೀಕ್ಷೆ ಗುರುವಾರ ಜಿಲ್ಲೆಯಾದ್ಯಂತ ಸುಸೂತ್ರವಾಗಿ ನಡೆಯಿತು. ಬೆಳಿಗ್ಗೆ 10.15ಕ್ಕೆ ಆರಂಭವಾಗಿ 1.30ಕ್ಕೆ ಮುಗಿಯಿತು.

ಯಾದಗಿರಿ ತಾಲ್ಲೂಕಿನ 4, ಗುರುಮಠಕಲ್ ತಾಲ್ಲೂಕಿನ 1, ಶಹಾಪುರ ತಾಲ್ಲೂಕಿನ 3, ಸುರಪುರ ತಾಲ್ಲೂಕಿನ 4, ಹುಣಸಗಿ ತಾಲ್ಲೂಕಿನ 1 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಥರ್ಮಲ್‌ ಸ್ಕ್ರಿನಿಂಗ್‌ , ಮಾಸ್ಕ್‌, ಸ್ಯಾನಿಟೈಸರ್ ಸಿಂಪರಣೆ ಮಾಡಬೇಕಾಗಿದ್ದರಿಂದ 2 ಗಂಟೆ ಮುಂಚಿತವಾಗಿ ಕೇಂದ್ರಗಳಿಗೆ ತಿಳಿಸಲಾಗಿತ್ತು. ಆದರಂತೆ ಶಿಕ್ಷಣ ಇಲಾಖೆ ವತಿಯಿಂದಲೇ ಮಾಸ್ಕ್‌ಗಳನ್ನು ವಿತರಿಸಲಾಯಿತು.

ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳು ಸ್ಕ್ರೀನಿಂಗ್‌ಗೆ ಒಳಗಾದರು. ಕೆಲ ಕಡೆ ವೃತ್ತಗಳನ್ನು ನಿರ್ಮಿಸಿ ಒಬ್ಬೊಬ್ಬ ವಿದ್ಯಾರ್ಥಿಯನ್ನು ತಪಾಸಣೆಗೆ ಒಳಪಡಿಸಿದರು.

ವಿದ್ಯಾರ್ಥಿಗಳ ಜೊತೆಗೆ ಪೋಷಕರು ಬಂದಿದ್ದರು.ಕೆಲ ಕಡೆ ಅಂತರ ಮಾಯಾವಾಗಿತ್ತು. ನೋಟಿಸ್‌ ಬೋರ್ಡ್‌ನಲ್ಲಿ ತಮ್ಮ ಕೋಣೆ ಸಂಖ್ಯೆ ಪರಿಶೀಲಿಸುವ ವೇಳೆ ಗುಂಪುಗೂಡಿದ್ದರು. ಕೆಲವರು ಮಾಸ್ಕ್‌ ಧರಿಸಿರಲಿಲ್ಲ. ಸರ್ಕಾರಿ ಬಸ್, ಖಾಸಗಿ ವಾಹನಗಳು ಪರೀಕ್ಷಾ ಕೇಂದ್ರದ ಸುತ್ತಮುತ್ತ ಜಮಾಯಿಸಿದ್ದವು.

ಮಕ್ಕಳಿಗಾಗಿ ಕಾದ ಪೋಷಕರು:

ವಿದ್ಯಾರ್ಥಿಗಳ ಜೊತೆಯಲ್ಲಿ ಪೋಷಕರು ಕೇಂದ್ರಕ್ಕೆ ಬಂದಿದ್ದರು. ಮಕ್ಕಳು ಕೊಠಡಿಗೆ ತೆರಳಿದ ನಂತರ ಪಾಲಕರು ಕಾಯುತ್ತ ಕುಳಿತಿದ್ದರು. ಮಧ್ಯಾಹ್ನ 1 ಗಂಟೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು.ಅಂತರ ಮರೆತುಪೋಷಕರು ಎಲ್ಲೆಂದರಲ್ಲೆ ಗುಂಪುಗೂಡಿದ್ದರು. ಮಾಸ್ಕ್ ಇಲ್ಲ, ನಿಮಯ ಪಾಲನೆ ಇಲ್ಲ ಮಾಡದೆ ಇರುವುದು ಕಂಡು ಬಂತು.

ಪರೀಕ್ಷೆ ಮುಗಿದ ನಂತರ ಕೇಂದ್ರದ ಬಳಿ ವಾಹನಗಳ ದಟ್ಟಣೆ ಉಂಟಾಯಿತು.

***

ಮಾರ್ಚ್‌ ತಿಂಗಳಲ್ಲೇಪರೀಕ್ಷೆ ನಡೆದಿದ್ದರೆ, ಚೆನ್ನಾಗಿತ್ತು. ಇಷ್ಟು ದಿನ ಕಾಯಬೇಕಾಗಿರಲಿಲ್ಲ. ಇದು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ
ಉಮಾಕಾಂತ ಕಟ್ಟಿಮನಿ ಸೈದಾಪುರ, ಪೋಷಕರು

***

ಮಾಸ್ಕ್‌ ಧರಿಸಿ ಪರೀಕ್ಷೆ ಬರೆದು ಅಭ್ಯಾಸ ಇಲ್ಲದ ಕಾರಣ ಸಮಸ್ಯೆ ಉಂಟಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗಿತ್ತು
ವಿಕಾಸ ಹಿರೇಮಠ, ವಿದ್ಯಾರ್ಥಿ

***

ಪ್ರಶ್ನೆ ಪತ್ರಿಕೆ ಸುಲಭವಾಗಿತ್ತು. ಒಂದೇ ಪತ್ರಿಕೆಗೆ ಹಲವಾರು ದಿನಗಳಿಂದ ಅಭ್ಯಾಸ ಮಾಡಿದ್ದರಿಂದ ಕಷ್ಟವೆನಿಸಲಿಲ್ಲ. ಚೆನ್ನಾಗಿ ಬರಿದಿದ್ದೇನೆ
ಶ್ರೀಗೌರಿ ಮಹೇಂದ್ರಗೌಡ ಆಳ್ಳಳ್ಳಿ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT