ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕರಡು ಮೀಸಲಾತಿ ಪ್ರಕಟ

ಆಕ್ಷೇಪಣೆ ಸಲ್ಲಿಕೆಗೆ ಜುಲೈ 8ರ ತನಕ ಅವಕಾಶ; ಜಿ.ಪಂ. ಕ್ಷೇತ್ರ ಹೆಚ್ಚಳ, ತಾ.ಪಂ ಕ್ಷೇತ್ರಗಳು ಇಳಿಕೆ
Last Updated 3 ಜುಲೈ 2021, 2:06 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿಗೆ ರಾಜ್ಯ ಚುನಾವಣಾ ಆಯೋಗ ‌ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಲೋಪದೋಷಗಳಿದ್ದರೆ ಜುಲೈ 8ರ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಸ್ಥಾನಗಳು ಹೆಚ್ಚಾಗಿದ್ದರೆ, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಇಳಿಕೆಯಾಗಿವೆ.

2016ರಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು 24 ಇದ್ದವು. ಆಗಿನ್ನೂ ಹುಣಸಗಿ, ವಡಗೇರಾ, ಗುರುಮಠಕಲ್‌ ತಾಲ್ಲೂಕುಗಳು ರಚನೆ ಆಗಿರಲಿಲ್ಲ. ಶಹಾಪುರ, ಸುರಪುರ, ಯಾದಗಿರಿ ತಲಾ 8 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಹೊಂದಿದ್ದವು. ಇದೀಗ 6 ಕ್ಷೇತ್ರಗಳು ಹೆಚ್ಚುವರಿಯಾಗಿವೆ.

ಯಾದಗಿರಿ ತಾ.ಪಂ ಕ್ಷೇತ್ರಗಳು 15, ಹುಣಸಗಿ 12, ಸುರಪುರ 13, ಶಹಾಪುರ 16, ವಡಗೇರಾ 09, ಗುರುಮಠಕಲ್ ತಾ.ಪಂ ಕ್ಷೇತ್ರಗಳು 10 ಸೇರಿದಂತೆ 75 ತಾ.ಪಂ ಕ್ಷೇತ್ರಗಳಿಗೆ ಇಳಿಕೆ ಆಗಿದೆ. ಈ ಮೊದಲು 90 ತಾ.ಪಂ ಕ್ಷೇತ್ರಗಳಿದ್ದವು.

ಯಾದಗಿರಿ ಮತಕ್ಷೇತ್ರದ ರಾಮಸಮುದ್ರ, ದೋರನಹಳ್ಳಿ, ವಡಗೇರಾ, ತುಮಕೂರು, ಮುಂಡರಗಿ, ನಾಯ್ಕಲ್‌, ತಡಿಬಿಡಿ, ಗುರುಮಠಕಲ್‌ ಮತಕ್ಷೇತ್ರದ ಯರಗೋಳ, ಹತ್ತಿಕುಣಿ, ಬಳಿಚಕ್ರ, ಸೈದಾಪುರ, ಗಾಜರಕೋಟ (ಪುಟಪಾಕ), ಎಲ್ಹೇರಿ (ಕಂದಕೂರು), ಬದ್ದೇಪಲ್ಲಿ, ಕೊಂಕಲ್‌, ಶಹಾಪುರ ಮತಕ್ಷೇತ್ರದ ಸಗರ, ರಸ್ತಾಪುರ, ಶಿರವಾಳ, ಗೋಗಿ (ಕೆ), ವನದುರ್ಗ, ನಗನೂರ, ಯಾಳಗಿ, ಸುರಪುರ ಮತಕ್ಷೇತ್ರದ ದೇವಾಪುರ, ಖಾನಾಪುರ ಎಸ್‌.ಎಚ್, ಪೇಠ ಅಮ್ಮಾಪುರ, ವಜ್ಜಲ್, ನಾರಾಯಣಪುರ, ಕೋಡೆಕಲ್‌, ರಾಜನಕೋಳೂರು, ಕನ್ನಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪುನರ್‌ ವಿಂಗಡಣೆ ಮಾಡಲಾಗಿದೆ.

ಯಾದಗಿರಿ ತಾ.ಪಂ:ಯರಗೋಳ–ಅನುಸೂಚಿತ ಜಾತಿ, ಅಲ್ಲಿಪುರ–ಅನುಸೂಚಿತ ಜಾತಿ(ಮಹಿಳೆ), ಮುದ್ನಾಳ–ಅನುಸೂಚಿತ ಜಾತಿ, ಬಂದಳ್ಳಿ–ಸಾಮಾನ್ಯ ಮಹಿಳೆ, ಮುಂಡರಗಿ–ಸಾಮಾನ್ಯ, ಹೊನಗೇರಾ–ಹಿಂದುಳಿದ ವರ್ಗ- ಅ(ಮಹಿಳೆ), ಹತ್ತಿಕುಣಿ–ಸಾಮಾನ್ಯ(ಮಹಿಳೆ), ರಾಮಸಮುದ್ರ–ಅನುಸೂಚಿತ ಜಾತಿ (ಮಹಿಳೆ), ಹಳಿಗೇರಾ (ವರ್ಕನಳ್ಳಿ)– ಅನುಸೂಚಿತ ಪಂಗಡ(ಮಹಿಳೆ), ಬಳಿಚಕ್ರ–ಸಾಮಾನ್ಯ (ಮಹಿಳೆ), ಜಿನಕೇರಾ (ಕೌಳೂರು)–ಸಾಮಾನ್ಯ, ಮಲ್ಹಾರ (ಕಿಲ್ಲನಕೇರಾ)– ಅನುಸೂಚಿತ ಪಂಗಡ, ಸೈದಾಪುರ–ಸಾಮಾನ್ಯ, ಬಾಡಿಯಾಳ–ಸಾಮಾನ್ಯ(ಮಹಿಳೆ), ಕಡೇಚೂರು ಸಾಮಾನ್ಯ.

ಹುಣಸಗಿ ತಾ.ಪಂ: ವಜ್ಜಲ್–ಅನುಸೂಚಿತ ಜಾತಿ(ಮಹಿಳೆ), ಕಾಮನಟಗಿ–ಸಾಮಾನ್ಯ(ಮಹಿಳೆ), ಗೆದ್ದಲಮರಿ (ಜೋಗುಂಡಬಾವಿ)–ಅನುಸೂಚಿತ ಪಂಗಡ, ನಾರಾಯಣಪುರ– ಅನುಸೂಚಿತ ಜಾತಿ (ಮಹಿಳೆ),
ಯಣ್ಣೆವಡಗೇರಾ (ಮಾರನಾಳ)–ಸಾಮಾನ್ಯ, ಕೊಡೆಕಲ್–ಅನುಸೂಚಿತ ಜಾತಿ, ಹಗರಟಗಿ–ಸಾಮಾನ್ಯ, ಬೈಲಕುಂಠಿ (ಗೆದ್ದಲಮರಿ) ಅನುಸೂಚಿತ ಪಂಗಡ(ಮಹಿಳೆ), ರಾಜನಕೊಳ್ಳೂರು ಸಾಮಾನ್ಯ, ರಾಮನಗರ (ಕೋಳಿಹಾಳ)–ಸಾಮಾನ್ಯ, ಮುದ್ನೂರು (ಕೆ) (ಅಗ್ನಿ)– ಸಾಮಾನ್ಯ(ಮಹಿಳೆ), ಕನ್ನಳ್ಳಿ (ಅರಕೇರಾ (ಜೆ) ಹಿಂದುಳಿದ ವರ್ಗ-ಅ(ಮಹಿಳೆ).

ಶಹಾಪುರ ತಾ.ಪಂ: ಉಕ್ಕಿನಾಳ–ಅನುಸೂಚಿತ ಜಾತಿ (ಮಹಿಳೆ), ಚಾಮನಾಳ–ಸಾಮಾನ್ಯ (ಮಹಿಳೆ), ವನದುರ್ಗ (ಕಕ್ಕೇಸಗೇರಾ)–ಅನುಸೂಚಿತ ಪಂಗಡ (ಮಹಿಳೆ), ಹೊಸಕೇರಾ– ಸಾಮಾನ್ಯ, ನಾಗನಟಗಿ– ಸಾಮಾನ್ಯ, ಸಗರ–ಸಾಮಾನ್ಯ (ಮಹಿಳೆ), ರಸ್ತಾಪುರ–ಅನುಸೂಚಿತ ಜಾತಿ, ಕೊಳ್ಳೂರು–ಅನುಸೂಚಿತ ಪಂಗಡ, ಕನ್ಯಾಕೊಳ್ಳುರ–ಸಾಮಾನ್ಯ, ದೋರನಹಳ್ಳಿ–ಸಾಮಾನ್ಯ (ಮಹಿಳೆ), ಚಟ್ನಳ್ಳಿ–ಅನುಸೂಚಿತ ಜಾತಿ, ಇಬ್ರಾಂಹಿಪುರ–ಸಾಮಾನ್ಯ, ಶಿರವಾಳ–ಸಾಮಾನ್ಯ (ಮಹಿಳೆ), ಹೊತಪೇಟ–ಅನುಸೂಚಿತ ಜಾತಿ (ಮಹಿಳೆ), ಮುಡಬೂಳ–ಹಿಂದುಳಿದ ವರ್ಗ ಅ, ಗೋಗಿ (ಕೆ)–ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.

ಸುರಪುರ ತಾ.ಪಂ: ಶಾಂತಾಪುರ–ಸಾಮಾನ್ಯ, ದೇವಾಪುರ–ಸಾಮಾನ್ಯ (ಮಹಿಳೆ), ದೇವತ್ಕಲ್‌–ಸಾಮಾನ್ಯ ಮಹಿಳೆ, ಹೆಮನೂರು (ಸೂಗುರು)–ಅನುಸೂಚಿತ ಪಂಗಡ (ಮಹಿಳೆ), ಖಾನಾಪುರ ಎಸ್‌.ಎಚ್‌.–ಅನುಸೂಚಿತ ಜಾತಿ, ಪೇಠಾ ಅಮ್ಮಾಪುರ–ಸಾಮಾನ್ಯ (ಮಹಿಳೆ), ವಗಣಗೇರಾ–ಅನುಸೂಚಿತ ಪಂಗಡ, ಅರಕೇರಾ (ಕೆ) (ಹೆಮನೂರು)–ಸಾಮಾನ್ಯ, ಗೌಡಗೇರಾ–ಅನುಸೂಚಿತ ಪಂಡಗ (ಮಹಿಳೆ), ಕರಡಕಲ್‌–ಸಾಮಾನ್ಯ, ನಗನೂರ–ಸಾಮಾನ್ಯ, ಯಾಳಗಿ (ಯಕ್ತಾಪುರ)–ಅನುಸೂಚಿತ ಜಾತಿ (ಮಹಿಳೆ), ಏವೂರು (ಮಲ್ಲಾ ಬಿ)–ಅನುಸೂಚಿತ ಜಾತಿ (ಮಹಿಳೆ)ಗೆ ಮೀಸಲಾತಿ ನಿಗದಿಯಾಗಿದೆ.

ವಡಗೇರಾ ತಾ.ಪಂ: ಬೆಂಡೆಬೆಂಬಳಿ–ಅನುಸೂಚಿತ ಜಾತಿ, ತುಮಕೂರು–ಹಿಂದುಳಿದ ವರ್ಗ ಅ (ಮಹಿಳೆ), ವಡಗೇರಾ–ಅನುಸೂಚಿತ ಪಂಗಡ (ಮಹಿಳೆ), ಉಳ್ಳೆಸೂಗುರ–ಸಾಮಾನ್ಯ (ಮಹಿಳೆ), ನಾಯ್ಕಲ್‌ (ಗುಲಂಸರಂ)–ಅನುಸೂಚಿತ ಜಾತಿ (ಮಹಿಳೆ), ಕುರಕುಂದ (ನಾಯ್ಕಲ್‌)–ಸಾಮಾನ್ಯ (ಮಹಿಳೆ), ಹೈಯಾಳ (ಬಿ) (ಐಕೂರು)–ಸಾಮಾನ್ಯ, ಟಿ.ವಡಗೇರಾ ಹೈಯಾಳ (ಬಿ)–ಸಾಮಾನ್ಯ.

ಗುರುಮಠಕಲ್‌: ಗಾಜರಕೋಟ–ಸಾಮಾನ್ಯ, ಚಪೆಟ್ಲಾ (ಕಾಕಲವಾರ)–ಅನುಸೂಚಿತ ಜಾತಿ (ಮಹಿಳೆ), ಚಂಡ್ರಿಕಿ (ಪುಟಪಾಕ)–ಸಾಮಾನ್ಯ, ಯಂಪಾಡ (ಕಂದಕೂರ)– ಅನುಸೂಚಿತ ಪಂಗಡ (ಮಹಿಳೆ), ಚಿಂತನಪಲ್ಲಿ (ಚಿನ್ನಾಕರ)–ಸಾಮಾನ್ಯ, ಎಲ್ಹೇರಿ–ಅನುಸೂಚಿತ ಜಾತಿ, ಮಧ್ವಾರ–ಹಿಂದುಳಿದ ವರ್ಗ ಅ (ಮಹಿಳೆ), ಬದ್ದೇಪಲ್ಲಿ (ಅಜಲಾಪುರ)–ಸಾಮಾನ್ಯ, ಕೊಂಕಲ್‌–ಸಾಮಾನ್ಯ (ಮಹಿಳೆ), ಪುಟಪಾಕ (ಮಿನಾಸಪುರ)–ಅನುಸೂಚಿತ ಜಾತಿ (ಮಹಿಳೆ)ಗೆ ಮೀಸಲಾತಿ
ನಿಗದಿಯಾಗಿದೆ.

***

ಯಾದಗಿರಿ ಜಿ.ಪಂ. ಮೀಸಲಾತಿ ವಿವರ

ಕ್ಷೇತ್ರದ ಹೆಸರು;ಮೀಸಲಾತಿ

ಯರಗೋಳ;ಸಾಮಾನ್ಯ
ಮುಂಡರಗಿ;ಅನುಸೂಚಿತ ಜಾತಿ (ಮಹಿಳೆ)
ಹತ್ತಿಕುಣಿ;ಸಾಮಾನ್ಯ (ಮಹಿಳೆ)
ರಾಮಸಮುದ್ರ;ಸಾಮಾನ್ಯ (ಮಹಿಳೆ)
ಬಳಿಚಕ್ರ;ಅನುಸೂಚಿತ ಜಾತಿ
ಸೈದಾಪುರ;ಸಾಮಾನ್ಯ
ಗಾಜರಕೋಟ (ಪುಟಪಾಕ);ಸಾಮಾನ್ಯ
ಎಲ್ಹೇರಿ (ಕಂದಕೂರ);ಸಾಮಾನ್ಯ
ಬದ್ದೇಪಲ್ಲಿ;ಅನುಸೂಚಿತ ಜಾತಿ
ಕೊಂಕಲ್ಅ;ನುಸೂಚಿತ ಪಂಗಡ
ವನದುರ್ಗಾ;ಅನುಸೂಚಿತ ಜಾತಿ (ಮಹಿಳೆ)
ಸಗರ; ಹಿಂದುಳಿದ ವರ್ಗ-ಬ
ರಸ್ತಾಪುರ;ಸಾಮಾನ್ಯ
ದೋರನಹಳ್ಳಿ;ಅನುಸೂಚಿತ ಜಾತಿ (ಮಹಿಳೆ)
ಶಿರವಾಳ;ಹಿಂದುಳಿದ ವರ್ಗ- ಅ (ಮಹಿಳೆ)
ಗೋಗಿ(ಕೆ);ಸಾಮಾನ್ಯ (ಮಹಿಳೆ)
ವಡಗೇರಾ; ಸಾಮಾನ್ಯ
ತುಮಕೂರ;ಅನುಸೂಚಿತ ಜಾತಿ
ನಾಯ್ಕಲ್‌;ಸಾಮಾನ್ಯ
ತಡಿಬಿಡಿ;ಅನುಸೂಚಿತ ಪಂಗಡ
ದೇವಾಪುರ;ಸಾಮಾನ್ಯ (ಮಹಿಳೆ)
ಖಾನಾಪುರ ಎಸ್‌.ಎಚ್ ;ಸಾಮಾನ್ಯ (ಮಹಿಳೆ)
ಪೇಠಅಮ್ಮಾಪುರ;ಹಿಂದುಳಿದ ವರ್ಗ-ಅ (ಮಹಿಳೆ)
ನಗನೂರು;ಅನುಸೂಚಿತ ಪಂಗಡ (ಮಹಿಳೆ)
ಯಾಳಗಿ;ಅನುಸೂಚಿತ ಜಾತಿ
ವಜ್ಜಲ್‌; ಸಾಮಾನ್ಯ
ನಾರಾಯಣಪುರ;ಅನುಸೂಚಿತ ಜಾತಿ (ಮಹಿಳೆ)
ಕೊಡೇಕಲ್‌;ಅನುಸೂಚಿತ ಪಂಗಡ (ಮಹಿಳೆ)
ರಾಜನಕೊಳೂರು;ಸಾಮಾನ್ಯ (ಮಹಿಳೆ)
ಕನ್ನಳ್ಳಿ;ಸಾಮಾನ್ಯ (ಮಹಿಳೆ)

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT