ಸುರಪುರ: ‘ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಡಿ. 21 ರಿಂದ 24 ರವರೆಗೆ ಹಮ್ಮಿಕೊಂಡಿದ್ದು ಪೋಲಿಯೊ ಗುರಿ ತಲುಪಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು’ ಎಂದು ತಹಶೀಲ್ದಾರ್ ಎಚ್.ಎ.ಸರಕಾವಸ್ ಸೂಚಿಸಿದರು.

ಇಲ್ಲಿಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲು ಎಲ್ಲಾ ಗ್ರಾಮಗಳಲ್ಲಿ ಡಂಗೂರ ಹಾಕಿಸಬೇಕು. ನಗರ ಪ್ರದೇಶದಲ್ಲಿ ನಗರಸಭೆಯವರು ಆಟೋ ರಿಕ್ಷಾದಲ್ಲಿ ಮೈಕಿಂಗ್ ಮಾಡಿಸಬೇಕು. ಶಿಕ್ಷಣ ಇಲಾಖೆಯವರು ಎಲ್ಲ ಶಾಲೆಗಳಲ್ಲಿ ಮಕ್ಕಳಿಂದ ಪ್ರಭಾತ್ ಪೇರಿ ಮಾಡಿಸಬೇಕು. ಜೆಸ್ಕಾಂನವರು 4 ದಿನಗಳವರೆಗೆ ತಡೆ ರಹಿತ ದಿನದ 24 ಗಂಟೆಗೆ ಕಾಲ ವಿದ್ಯುತ್ ಸರಬರಾಜು ಮಾಡಬೇಕು’ ಎಂದು ತಿಳಿಸಿದರು.

‘ಯಾವುದೇ ಮಗು ಲಸಿಕೆಯಿಂದ ಹೊರಗುಳಿಯಬಾರದು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೊಲಗಳಲ್ಲಿ ವಾಸಿಸುತ್ತಿರುವ ಮಕ್ಕಳು, ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರ ಮಕ್ಕಳಿಗೂ ಗಮನಹರಿಸಿ ಪೋಲಿಯೋ ಲಸಿಕೆ ನೀಡಬೇಕು’ ಎಂದರು.

ತಾಲ್ಲೂಕು ಆರೊಗ್ಯಾಧಿಕಾರಿ ಡಾ. ಆರ್.ವಿ.ನಾಯಕ ಮಾತನಾಡಿ, ‘0-5 ವರ್ಷದ ಮಕ್ಕಳ ನಗರ ಪ್ರದೇಶದಲ್ಲಿ 7035, ಗ್ರಾಮೀಣ ಪ್ರದೇಶದಲ್ಲಿ 50,766 ಸೇರಿ 57, 801 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 248 ತಂಡಗಳು ಕಾರ್ಯ ನಿರ್ವಹಿಸಲಿವೆ. 496 ಜನರು ವ್ಯಾಕ್ಸಿನೆಟರ್, 47 ಜನರು ಮೇಲ್ವಿಚಾರಕರಿರುತ್ತಾರೆ. 11 ಟ್ರಾಂಜಿಟ್ ಪಾಯಿಂಟ್ ಇರುತ್ತದೆ. ಲಸಿಕಾಕರಣದ ಯಶಸ್ವಿಗೆ’ ಎಲ್ಲರು ಸಹಕರಿಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ಜೆಸ್ಕಾಂ ಎಇಇ ಮೊಹ್ಮದ್ ರಫೀಕ್, ಶಿಕ್ಷಣ ಇಲಾಖೆಯ ಇಸಿಒ ಶರಣಬಸವ ಗಚ್ಚಿನಮನಿ, ನಗರಸಭೆಯ ಆರೋಗ್ಯ ನಿರೀಕ್ಷಕ ಗುರುಸ್ವಾಮಿ, ಸಿಡಿಪಿಒ ಇಲಾಖೆಯ ಪವನಕುಮಾರ, ಕೆಕೆಆರ್ಟಿಸಿಯ ಜಾಕೀರ್ ಹುಸೇನ್ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.