ಗೋಪುನಾಯ್ಕ ತಾಂಡಾ (ಯರಗೋಳ): ಹತ್ತಿಕುಣಿ ಗ್ರಾಮದಿಂದ ಹೋಗುವ ಗೋಪುನಾಯ್ಕ ತಾಂಡಾ ಮತ್ತು ದುಗನೂರ ಕ್ಯಾಂಪ್ಗೆ ಸಂಪರ್ಕ ಇರುವ ರಸ್ತೆ ಸಂಪೂರ್ಣ ಹಾಲಾಗಿದೆ. ಮಳೆಯಿಂದ ರಸ್ತೆ ಕೊಚ್ಚಿ ಹೋದರೂ ಈವರೆಗೂ ದುರಸ್ತಿ ಮಾಡಿಲ್ಲ, ಗ್ರಾಮಸ್ಥರು ತೊಂದರೆಗೆ ಒಳಗಾಗಿದ್ದಾರೆ ಎಂದು ಹೋರಾಟಗಾರ ಉಮೇಶ ಕೆ.ಮುದ್ನಾಳ ಆರೋಪಿಸಿದ್ದಾರೆ.

ಹದಗೆಟ್ಟ ರಸ್ತೆಯನ್ನು ಪರಿಶೀಲಿಸಿ ಬಳಿಕ ಮಾತನಾಡಿದ ಅವರು, ‘ರಸ್ತೆ ದುರಸ್ತಿ ಮಾಡದೇ ಇರುವುದರಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷವೇ ಎದ್ದು ಕಾಣುತ್ತಿದೆ’ ಎಂದರು.

‘ಈ ಭಾಗದಲ್ಲಿ ಗುಡ್ಡಗಾಡು ಪ್ರದೇಶ, ಜಾಲಿಮುಳ್ಳು ಕಂಟಿಗಳು ಬೆಳೆದರಿರುವದರಿಂದ ಚಿರತೆಯ ವಾಸಸ್ಥಳವಾಗಿ ಮಾರ್ಪಡುತ್ತಿದೆ. ಚಿರತೆಯ ಭಯದಿಂದ ಈ ರಸ್ತೆಯಲ್ಲಿ ರೈತರು ಜಮೀನಿಗೆ ಹೋಗಲು, ಶಾಲಾ ಮಕ್ಕಳು, ಸಾರ್ವಜನಿಕರು ಈ ರಸ್ತೆಯಲ್ಲಿ ಭಯದ ವಾತವರಣದಲ್ಲಿ ಈಡಾಡುವ ಪರಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದರು.

ರಾತ್ರಿ ಹೊತ್ತು ಹೊಸಬರು ಈ ರಸ್ತೆಗೆ ಬಂದರೆ ಅಪಘಾತವಾಗಿ ಕೈ–ಕಾಲು ಮುರಿದುಕೊಳ್ಳುವುದು ಖಚಿತ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಒಂದು ವಾರದ ಒಳಗಡೆ ರಸ್ತೆ ಸರಿಪಡಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ ಮುದ್ನಾಳ್ ಎಚ್ಚರಿಕೆ ನೀಡಿದರು.

ಪ್ರಭು ಪವನ, ತಾಯಪ್ಪ ಭೀಮರತ್, ಹಣಮಂತ, ದೊಡ್ಡ ಸಾಬಣ್ಣ, ಶರಣಪ್ಪ, ಅಯ್ಯಪ್ಪ, ಆಶಪ್ಪ, ಚನ್ನಬಸಪ್ಪ, ಭೀಮರಾಯ, ಬಸವರಾಜ, ಮುರಗೇಂದ್ರ, ಸಣ್ಣ ಮೀರಾ, ನರಸಪ್ಪ, ಪೂನ್ಯಾ, ಹರ್ಯಾ, ಸೋಮು, ಚಂದ್ರಕಾಂತ, ಹೀರಿಬಾಯಿ, ಸಕ್ರಿಬಾಯಿ, ಆನಂದ, ಬಸು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.