ಮಂಗಳವಾರ, ಜನವರಿ 28, 2020
29 °C
ಇಸ್ಪೀಟ್ ಅಡ್ಡೆ ಮೇಲೆ ದಾಳಿ

ಶಹಾಪುರ: 17 ದ್ವಿಚಕ್ರ ವಾಹನ, ₹88 ಸಾವಿರ ನಗದು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ತಾಲ್ಲೂಕಿನ ಗೋಗಿ ಗ್ರಾಮದ ಚಂದಾಪುರ ತಾಂಡಾದ ಹತ್ತಿರ  ಶನಿವಾರ ಇಸ್ಪೀಟ್ ಆಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ 17 ದ್ವಿಚಕ್ರ ವಾಹನ ಮತ್ತು ₹88 ಸಾವಿರ  ಜಪ್ತಿ ಮಾಡಿದ್ದಾರೆ.

ಗೋಗಿ ಠಾಣೆಯ ಪಿಎಸ್ಐ ಸೋಮಲಿಂಗಪ್ಪ ಒಡೆಯರ ನೇತೃತ್ವದಲ್ಲಿ ತಾಲ್ಲೂಕಿನ ಚಂದಾಪುರ ತಾಂಡಾದಲ್ಲಿ ದಾಳಿ ನಡೆಸಿದಾಗ ಆಟ ಆಡುತ್ತಿದ್ದವರು ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ವಾಹನ ಮಾಲೀಕರು ವಾಹನ ಬಿಡಿಸಿಕೊಳ್ಳಲು ಆಗಮಿಸಿದಾಗ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು