ಯಾದಗಿರಿ: ‘ವಿದ್ಯಾರ್ಥಿಗಳು ಓದಿನ ಜತೆ ಕ್ರೀಡೆಗಳಲ್ಲೂ ತೊಡಗಿಸಿಕೊಂಡು ಅದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢತೆ ಸಾಧಿಸಿ’ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧೀಕ್ಷಕ ಮನೋಹರ್ ರಾಠೋಡ ಸಲಹೆ ನೀಡಿದರು.

ನಗರದ ಖಂಡೇಲ್ ವಾಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಜರುಗಿದ ಶಾಲಾ ವಾರ್ಷಿಕ ಕ್ರೀಡಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಅತಿಯಾಗಿ ಮೊಬೈಲ್ ಬಳಸುತ್ತಿದ್ದು ಮನೆಯಲ್ಲಿ ಮಕ್ಕಳಲ್ಲೂ ಮೊಬೈಲ್ ಬಳಕೆ ಹೆಚ್ಚಿದೆ. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಿ’ ಎಂದು ಹೇಳಿದರು.

ಸಂಪಾದಕರ ಸಂಘದ ಅಧ್ಯಕ್ಷ ಸಿದ್ದಪ್ಪ ಲಿಂಗೇರಿ ಮಾತನಾಡಿ, ‘ಕ್ರೀಡೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಫಲಿತಾಂಶ ಏನಾದರೂ ಚಿಂತಿಸದೆ ಭಾಗವಹಿಸಿ. ಈಚೆಗೆ ನಗರ ಪ್ರದೇಶಗಳಲ್ಲಿ ಕ್ರೀಡಾ ಚಟುವಟಿಕೆ ಕ್ಷೀಣಿಸುತ್ತಿದೆ. ಕ್ರೀಡೆಗಳಿಂದ ಅನೇಕ ಆರೋಗ್ಯ ಲಾಭಗಳಿವೆ’ ಎಂದರು.

ಪಿಐ ಮಂಜುಳಾ ಸುರಪುರ ಮಾತನಾಡಿ, ‘ಜಗತ್ತಿನ ಹಲವು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ಅಂತೆಯೇ ವಿದ್ಯಾರ್ಥಿನಿಯರು ಕ್ರೀಡೆಗಳಲ್ಲಿ ಭಾಗವಹಿಸಿ, ಸಾಧಕರಾಗಿ ನಾಡಿಗೆ ಕೀರ್ತಿ ತರಬೇಕು’ ಎಂದರು.

ಅರುಣ ಮಾಸನ್ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥೆ ಸರಳಾ ಖಂಡೇಲ್ವಾಲ್, ಆಡಳಿತಾಧಿಕಾರಿ ಅವ್ಯಕ್ತ ಖಂಡೆಲ್ವಾಲ, ವಿಜಯಕುಮಾರ ಕುಲಕರ್ಣಿ ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.