ಸುರಪುರ: ‘ನಮ್ಮ ಸನಾತನ ಪರಂಪರೆಯಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಒಬ್ಬ ಅಧಿದೇವತೆಗಳಿದ್ದಾರೆ. ಸಂಪತ್ತಿಗೆ ಲಕ್ಷ್ಮೀಯ ಅನುಗ್ರಹ ಬೇಕು. ಲಕ್ಷ್ಮೀಪೂಜೆ ಭಕ್ತಿಯಿಂದ ಮಾಡಿದರೆ ಖಂಡಿತ ಅವಳ ಅನುಗ್ರಹ ದೊರಕುತ್ತದೆ’ ಎಂದು ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ರುಕ್ಮಾಪುರದ ಬನಶಂಕರಿ ದೇಗುಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಲಕ್ಷ್ಮೀ ಪೂಜೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಧರ್ಮಸ್ಥಳದ ಡಿ. ವಿರೇಂದ್ರ ಹೆಗ್ಗಡೆಯವರು ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಎಂಬ ಸಿದ್ಧಾಂತದಡಿ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿದ್ದಾರೆ. ಯೋಜನೆಯಡಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಸಂಘದ ಸದಸ್ಯರನ್ನು ಆರ್ಥಿಕವಾಗಿ ಸದೃಢ ಮಾಡುತ್ತಿರುವುದು ಪ್ರಶಂಶನೀಯ’ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ವಸಂತಗೌಡ ಮಾತನಾಡಿ, ‘ದೇವರ ಪೂಜೆಯಲ್ಲಿ ನಮ್ಮ ಜನ ಅಪಾರ ಶ್ರದ್ಧೆ ಹೊಂದಿದ್ದಾರೆ. ಹೀಗಾಗಿ ಆಗಾಗ ಸಾಮೂಹಿಕ ಲಕ್ಷ್ಮೀ ಮತ್ತು ಸತ್ಯನಾರಾಯಣ ಪೂಜೆಗಳನ್ನು ಏರ್ಪಡಿಸಿ ಜನರನ್ನು ಭಕ್ತಿಯ ಮಾರ್ಗದ ಮೂಲಕ ಸಂಘಟಿಸುತ್ತಿದ್ದೇವೆ’ ಎಂದರು.

‘ನಮ್ಮ ಯೋಜನೆಯ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ, ನಿರ್ಗತಿಕರಿಗೆ ಉಚಿತ ಮನೆ, ಜ್ಞಾನವಿಕಾಸ ಕಾರ್ಯಕ್ರಮ, ಕೆರೆ ಹೂಳು ಎತ್ತುವುದು. ದೇವಸ್ಥಾನದ ಅಭಿವೃದ್ಧಿಗೆ ಧನ ಸಹಾಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದು ಮಾಹಿತಿ ನೀಡಿದರು.

ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಪೂಜೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಕೆಂಗೂರಿ, ಮುಖಂಡರಾದ ಹಣಮಗೌಡ ದಳಪತಿ, ಸುರೇಂದ್ರನಾಯಕ, ಮಲ್ಲಯ್ಯ ಬಂಢಾರಿ, ಸುರೇಶ ಚೆಟ್ಟಿ, ಪೂಜಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ದೇವಮ್ಮ ದೊರೆ ಇತರರು ಭಾಗವಹಿಸಿದ್ದರು.

ತಾಲ್ಲೂಕು ಯೋಜನಾಧಿಕಾರಿ ನಾಗೇಶ್ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಜಯಶ್ರೀ ಅಂಗಡಿ ವಂದಿಸಿದರು. ಮೇಲ್ವಿಚಾರಕರಾದ ಅನಿತಾ, ವಿನೋದ, ಸಿದ್ದರಾಮ, ಅಶೋಕ, ದತ್ತಾತ್ರೇಯ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಪ್ರಗತಿ ಬಂಧು ಸಂಘದ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.