ಸುರಪುರ: ‘ಇಲ್ಲಿಯ ಅಂಬೇಡ್ಕರ್ ವೃತ್ತದ ಅಭಿವೃದ್ಧಿಗಾಗಿ ಸರ್ಕಾರ ಭೂಮಿ ಮಂಜೂರು ಮಾಡಬೇಕು’ ಎಂದು ಭಂತೇಜಿ ಥೇರೋ ಆಗ್ರಹಿಸಿದರು.

ದಲಿತ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ನಿರಂತರ ಧರಣಿ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಖಾರಿಜ್ ಖಾತಾ ಸರ್ವೆ ನಂ.7/1 ರಲ್ಲಿ ಒತ್ತುವರಿ ಆಗಿರುವ 2.26 ಗುಂಟೆ ಭೂಮಿಯಲ್ಲಿ ಭೂಮಿ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿ ಸಂಘಟನೆಗಳ ಒಕ್ಕೂಟದ ಮುಖಂಡರು ಆಗಸ್ಟ್ 20ರಿಂದ ನಿರಂತರ ಧರಣಿ ಮುಂದುವರಿಸಿದ್ದಾರೆ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಜಿಲ್ಲಾಡಳಿತಕ್ಕೆ ಭೂಮಿ ಮಂಜೂರಾತಿ ಮಾಡುವಂತೆ ತಿಳಿಸಬೇಕು. ಸರ್ಕಾರ ಹೋರಾಟಗಾರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಹೇಳಿದರು.

ಮುಖಂಡರಾದ ಮಾನಪ್ಪ ಕಟ್ಟಿಮನಿ, ರಾಹುಲ ಹುಲಿಮನಿ, ವೆಂಕಟೇಶ ಹೊಸಮನಿ, ಬಸವರಾಜ ಶೆಳ್ಳಗಿ, ತಿಪ್ಪಣ್ಣ ಶೆಳ್ಳಗಿ, ವೀರಭದ್ರ ತಳವಾರಗೇರಾ, ಚನ್ನಪ್ಪ ದೇವಾಪುರ, ಮರಲಿಂಗ ಗುಡಿಮನಿ, ಶರಣಪ್ಪ ವಾಗಣಗೇರಾ, ರಾಜು ಕಟ್ಟಿಮನಿ, ಆಕಾಶ ಕಟ್ಟಿಮನಿ, ಶೇಖರ ಮಂಗಳೂರು, ವೈಜನಾಥ ಹೊಸಮನಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.