ವಡಗೇರಾ(ಯಾದಗಿರಿ): ತಾಲ್ಲೂಕಿನ ಐಕೂರು ಗ್ರಾಮದ ಅನತಿ ದೂರದಲ್ಲಿ ಸೋಮವಾರ ಮಧ್ಯರಾತ್ರಿ ಸಿಡಿಲು ಬಡಿದು ಸುಮಾರು ಹತ್ತು ಕುರಿಗಳು ಮೃತಪಟ್ಟಿವೆ.

ಕುರಿಗಾಹಿ ಹಣಮಂತ ಭೀಮಪ್ಪ ಮುಂಡರಗಿ ಅವರಿಗೆ ಸೇರಿದ 5 ಕುರಿ, ಮರೆಪ್ಪ ಗೌಡಯ್ಯ ಮೇಲಿಗಿರಿ ಅವರ 3 ಕುರಿ, ಮಲ್ಲಪ್ಪ ಬೂಸಯ್ಯ ಕುಂಬಿ ಅವರ 2 ಕುರಿಗಳು ಮೃತಪಟ್ಟಿವೆ. ಕುರಿಗಳ ಬೆಲೆ ಸುಮಾರು ₹15 ಸಾವಿರ ಇದೆ.

ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಇನ್ನೂ ಭೇಟಿ ನೀಡಿಲ್ಲ.

'ಬದುಕು ಕಟ್ಟಿ ಕೊಳ್ಳಲು ಸುರಪುರ ಸಂತೆ ಮಾರುಕಟ್ಟೆಯಲ್ಲಿ ತಂದಿದ್ದ ಕುರಿಮರಿಗಳನ್ನು ಜವಾರಯ ಕಿತ್ತು ಕೊಂಡಿದ್ದಾನೆ. ಯಾದಗಿರಿ ಮತ ಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಸರ್ಕಾರದಿಂದ ಸಹಾಯ ಮಾಡಬೇಕು' ಎಂದು ವರ್ತೂರು ಪ್ರಕಾಶ ಯುವ ಘರ್ಜನೆ ಸಂಘಟನೆಯ ಯಾದಗಿರಿ ಜಿಲ್ಲಾಧ್ಯಕ್ಷ ಐಕೂರು ಅಶೋಕ ಮನವಿ ಮಾಡಿಕೊಂಡಿದ್ದಾರೆ.
.ಶಹಾಪುರ | ಸಿಡಿಲು ಬಡಿದು ವ್ಯಕ್ತಿ, ಏಳು ಕುರಿಗಳು ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.