ಸೋಮವಾರ, ಫೆಬ್ರವರಿ 24, 2020
19 °C
ಅಧಿಕಾರಿಗಳ ಮೌಖಿಕ ಭರವಸೆ ತಿರಸ್ಕರಿಸಿದ ಸ್ಲಂ ಜನಾಂದೋಲನ

ಯಾದಗಿರಿ: 6ನೇ ದಿನಕ್ಕೆ ಕಾಲಿಟ್ಟ ಸ್ಲಂ ಜನರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪರಿಚಯ ಪತ್ರ ನೀಡುವುದು, ಸ್ಲಂ ಘೋಷಣೆ ಮಾಡುವುದು, ಮನೆಗಳನ್ನು ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾವಿತ್ರಿಬಾಯಿ ಫುಲೆ ಹಾಗೂ ಸ್ಲಂ ಜನಾಂದೋಲನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಭಾನುವಾರ 5ನೇ ದಿನ ಪೂರೈಸಿ ಆರನೇ ದಿನಕ್ಕೆ ಕಾಲಿಟ್ಟಿದೆ.

ಜಿಲ್ಲಾಡಳಿತ ಮೌಖಿಕ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯದೇ ಧರಣಿ ಮುಂದುವರಿಸಲಾಗಿದೆ ಎಂದು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಹಾಗೂ ಸ್ಲಂ ಜನಾಂದೋಲನ ಮುಖಂಡರಾದ ರೇಣುಕಾ ಸರಡಗಿ, ಹಣಮಂತ ಶಹಾಪುರಕರ್ ತಿಳಿಸಿದ್ದಾರೆ.

ಧರಣಿಯ 4ನೇ ದಿನದ ಅಂತ್ಯಕ್ಕೆ ಜಿಲ್ಲಾಡಳಿತದ ಪರವಾಗಿ ನಡೆದ ಸಂಧಾನ ಮಾತುಕತೆ ವಿಫಲವಾಗಿದ್ದು, ಹೋರಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಪರಿಚಯ ಪತ್ರ ನೀಡಲಾಗುವುದು ಮತ್ತು ಸ್ಲಂ ಘೋಷಣೆ ಮಾಡಲಾಗುವುದು ಎಂದು ಕೇವಲ ಮೌಖಿಕ ಭರವಸೆ ನೀಡಿದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಕೇವಲ ಹಾರಿಕೆ ಉತ್ತರ ನೀಡಿದ್ದರಿಂದ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದರು.

ಧರಣಿಯಲ್ಲಿ ಸಂಗೀತಾ ಹಪ್ಪಳ, ಯಂಕಮ್ಮ ಮಾಳಿಕೇರಿ, ಈರಮ್ಮ ಕೌಳೂರು, ಸಂಗೀತಾ ಅರಿಕೇರಿ, ಆನಂದ ಚಟ್ಟೆರಕರ್, ನಿರ್ಮಲಾ ಸುಂಗಲ್ಕರ್, ನಿರ್ಮಲಾ ನಾಟೇಕರ್, ಬಾಬುಮಿಯಾ, ಸ್ವಾಮಿನಾಥನ್, ಗಫೂರ ಸಾಬ, ಆನಂದ, ಗೌರಮ್ಮ, ಶ್ರೀಮತಿ ರುದ್ರಯ್ಯಸ್ವಾಮಿ, ಮಹಮ್ಮದ್, ಅಕ್ಬರ್ ಸೇರಿದಂತೆ ವಿವಿಧ ಸ್ಲಂ ನಿವಾಸಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು