ಶನಿವಾರ, ಅಕ್ಟೋಬರ್ 24, 2020
24 °C
ನಾಯ್ಕಲ್‌ನಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ

ಕೂಲಿ ಬಿಟ್ಟು 5 ಗಂಟೆಗಳ ಕಾಲ ಧರಣಿ ನಡೆಸಿದ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕುಡಿಯುವ ನೀರು ಪೂರಕೈಗಾಗಿ ಆಗ್ರಹಿಸಿ ಇಲ್ಲಿಗೆ ಸಮೀಪದ ನಾಯ್ಕಲ್ ಗ್ರಾಮ ಪಂಚಾಯಿತಿ ವಿವಿಧ ಬಡಾವಣೆಗಳ ನಿವಾಸಿಗಳು ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಚೇರಿ ಎದುರು ಖಾಲಿ ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.

ಗ್ರಾಮದ ಮೌಲಾಲಿ ಕಾಲೊನಿ, ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ಕಾಲೊನಿ, ಯುಕೆಪಿ ಕ್ಯಾಂಪ್, ಮಜೀದ್ ಕಾಲೊನಿ ಹೀಗೆ ಗ್ರಾಮದ ಹಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಇದೆ. ಹಲವು ವರ್ಷಗಳಿಂದ ವಿವಿಧ ಕಾಲೊನಿಗಳ ನಿವಾಸಿಗಳು ಕೊಡ ನೀರಿಗಾಗಿ ಹೆದ್ದಾರಿಯ ಮೇಲೆ ಜೀವ ಕೈಯಲ್ಲಿ ಹಿಡಿದುಕೊಂಡು ಕಿ.ಮೀ. ದೂರ ಕ್ರಮಿಸಿ ನೀರು ತರಬೇಕು. ನಿತ್ಯ ನೀರು ತರುವುದೇ ಕಾಯಕವಾಗಿದೆ ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ನಿವಾಸಿಗಳು ಕೊಡ ಕುಡಿವ ನೀರಿಗಾಗಿ ಪರದಾಡುವಂತಾಗಿದೆ ಎಂದು ನಿವಾಸಿ ಜಲಾಲಸಾಬ್ ತಂಬಾಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಬರುವವರೆಗೆ ಹಿಂಪಡಿಯುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದರು. ಇದರಿಂದ ಸ್ಥಳಕ್ಕೆ ಶಹಾಪುರ ತಾ.ಪಂ. ಇಒ ಜಗನ್ನಾಥಮೂರ್ತಿ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

2-3 ದಿನದೊಳಗೆ ತಾತ್ಕಾಲಿಕ ಕುಡಿವ ನೀರಿನ ವ್ಯವಸ್ಥೆ ಮಾಡುವುದಾಗಿ ತಾಪಂ ಇಒ ತಿಳಿಸಿದರು. ಆಗ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ರಸೂಲ್‍ಬೀ, ರಜೀಯಾಬೇಗಂ, ಶಾಹೀದ್‍ಬೇಗಂ, ಸಾಹೀಬಿ ಕುರುಕುಂದಿ, ರಜೀಯಾಬೇಗಂ, ಪ್ಯಾರಿಬೇಗಂ, ಗೂಡೂಮಾಬೇಗಂ, ಫಾತನಬೀ, ಚಾಂದಬೀ, ಸಾಬೀರ್ ಬೇಗಂ, ಅಬ್ದುಲ್ ರಜಾಕ್ ಚಟ್ನಳ್ಳಿ, ಖಾಜಾ ಮೈನೋದ್ಧೀನ್ ಜೇಮಶೇರಿ, ಜಾವೀದ್ ಕುರುಕುಂದಿ, ಭೀಮರಾಯ, ಮೈಹಿಮೂದಸಾಬ್ ಹೊನಗೇರಾ, ಸಲಿಂ ಗೋಡಿಕಾರ, ಮೀರಾಸಾ, ಅಬ್ದುಲ್‍ನಬೀ ಹೊಸಳ್ಳಿ, ಅಬ್ದುಲ್ ನಬೀ ಕುಂದೂರ, ಅಬ್ಬಾಸಲೀ ಹೊಸಳ್ಳಿ, ಬಾಷಾ ಬಲ್ಕಲ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು