ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ: ಮಹಾಪ್ರಸಾದ ಸವಿದ ಭಕ್ತರು 

Last Updated 24 ಫೆಬ್ರುವರಿ 2021, 3:32 IST
ಅಕ್ಷರ ಗಾತ್ರ

ಕಕ್ಕೇರಾ: ಪಟ್ಟಣ ಸಮೀಪದ ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವದಲ್ಲಿ ಏಕಾದಶಿಯಂದು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.

ಮೌನೇಶ್ವರ ಜಾತ್ರೆಗೆ ಆಗಮಿಸುವ ಭಕ್ತರಿಗೆ ಮಾದಲಿ ಜೊತೆಗೆ ಜೋಳದ ಬಾನ ಪ್ರಸಾದ ವಿತರಿಸಿದ್ದು ಕಂಡು ಬಂತು. ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ವಿಶ್ವಕರ್ಮ ಸಮಾಜದ ಎಲ್ಲಾ ಪಂಗಡದ ಕುಲಬಾಂಧವರುದೇವಸ್ಥಾನದ ಒಳ ಮತ್ತು ಹೊರ ಭಾಗದಲ್ಲಿ ಒಟ್ಟಿಗೆ ಕುಳಿತು ಮೌನೇಶ್ವರನ ಮಹಾಪ್ರಸಾದ ಸವಿದು ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಮೌನೇಶ್ವರ ಸ್ವಾಮೀಜಿ, ಕುಮಾರಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಪ್ರಣವ ನಿರಂಜನಾನಂದ ಸ್ವಾಮೀಜಿಸೇರಿದಂತೆ ಗ್ರಾಮಸ್ಥರಾದ ಮಾನಯ್ಯಗೌಡ ದಳಪತಿ, ಗಂಗಾಧರನಾಯಕ, ದೇವಿಂದ್ರಪ್ಪ ಅಂಬಿಗೇರ, ಮಾನಯ್ಯ ಸಾಹುಕಾರ, ಚಿನ್ನಪ್ಪ ಗುಡಗುಂಟಿ, ಸಂಜೀವನಾಯಕ ಕವಾಲ್ದಾರ, ಮಲ್ಲಿಕಾರ್ಜುನಸಾಹು, ವೆಂಕೋಬ ಗುತ್ತೇದಾರ, ಮಲ್ಲಪ್ಪ ಕುಲಕರ್ಣಿ, ಸಲೀಂಸಾಬ ಕಂಬಾರ, ಮಲ್ಲಪ್ಪ ಬೇವಿನಾಳ, ಬಾಬು ಹೊಸಮನಿ, ಭೀಮಣ್ಣ ಕವಾಲ್ದಾರ, ಬಸವರಾಜ ಕವಾಲ್ದಾರ, ದೇವರಾಜ ಗಿರಣಿ, ಫಕ್ರುದ್ದೀನ್ ಹವಾಲ್ದಾರ್ ಸೇರಿದಂತೆ ಹಲವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT