ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನಾವು ನಿಸರ್ಗವನ್ನು ರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ’

Published : 24 ಸೆಪ್ಟೆಂಬರ್ 2024, 14:19 IST
Last Updated : 24 ಸೆಪ್ಟೆಂಬರ್ 2024, 14:19 IST
ಫಾಲೋ ಮಾಡಿ
Comments

ವಡಗೇರಾ: ‘ನಾವು ನಿಸರ್ಗವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಸಾಹು ಕರಣಗಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಪರಿಸರ ಪ್ರೇಮಿ ಜಗನ್ನಾಥರೆಡ್ಡಿ ಉಚಿತವಾಗಿ ನೀಡಿರುವ ಸಸಿಗಳನ್ನು ಪಟ್ಟಣದ ಪ್ರಮುಖ ರಸ್ತೆಯ ವಿಭಜಕದಲ್ಲಿ ನೆಟ್ಟು ಅವರು ಮಾತನಾಡಿದರು.

ತಾ.ಪಂ ಸಹಾಯಕ ನಿರ್ದೇಶಕ ಶರಣಗೌಡ ಬಿ.ಉಳ್ಳೆಸೂಗರು ಮಾತನಾಡಿ, ‘ಪಟ್ಟಣ ಸುಂದರವಾಗಿ ಕಾಣಲು, ಶುದ್ದ ಗಾಳಿಗೆ ಎಲ್ಲರೂ ಗಿಡ, ಮರಗಳನ್ನು ಎಲ್ಲರೂ ಬೆಳೆಸಬೇಕು. ರಸ್ತೆ ವಿಭಜಕದಲ್ಲಿ ನೆಟ್ಟಿರುವ ಸಸಿಗಳನ್ನು ಪ್ರತಿಯೊಬ್ಬರು ದತ್ತಕ್ಕೆ ಪಡೆದು ಅವುಗಳ ಪೋಷಣೆ ಮಾಡಬೇಕು’ ಎಂದು ಹೇಳಿದರು.

‘ಭೂಮಿಯ ಮೇಲೆ ಅಸಮತೋಲನವಾದಾಗ ಪ್ರಕೃತಿ ವಿಕೋಪವಾಗುತ್ತದೆ. ಹಲವು ದುರ್ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಅದಕ್ಕಾಗಿ ಪ್ರತಿಯೊಬ್ಬರು ಅರಣ್ಯವನ್ನು ಸಂರಕ್ಷಿಸಬೇಕು’ ಎಂದು ಪಿಎಸ್ಐ ಮೈಬೂಬ್ ಅಲಿ ಹೇಳಿದರು.

ಡಾ.ಖಂಡುರಾಜ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗಪ್ಪ ಬಸಂತಪುರ, ಶರಣು ಕುರಿ, ಮುಖಂಡರಾದ ಶರಣು ಇಟಗಿ, ಸೂಗರೆಡ್ಡಿಗೌಡ ಪೊಲೀಸ್ ಪಾಟೀಲ, ಶಿವರಾಜ ನಾಡಗೌಡ, ತಿಮ್ಮಣ್ಣ ಕಡೆಚೂರ, ಸಂತೋಷ ಬೊಜ್ಜಿ, ಮಹಮ್ಮದ್ ಖುರೇಷಿ, ಶರಣು ಜಡಿ, ಹಳ್ಳೆಪ್ಪ ತೇಜರ, ಶಿಕ್ಷಕ ದೇವರಾಜಗೌಡ ಬೆಳಗೇರಿ, ಹೊನ್ನಪ್ಪ ಕಡೇಚೂರ, ರಫಿ ದೇವದುರ್ಗ, ಸೈಯದ್ ಅಲಿ ಸಾಬ್, ಮರಿಲಿಂಗ ಗೋನಾಲ್, ಮಲ್ಲು ನಾಟೇಕಾರ, ದೇವಪ್ಪ ದೊರೆ, ಬಂದೆನವಾಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT