ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ತತ್ವಾದರ್ಶ ಪಾಲಿಸಿ: ಬಿ. ಬಿ. ವಡವಟ್

ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ
Published 12 ಜನವರಿ 2024, 14:19 IST
Last Updated 12 ಜನವರಿ 2024, 14:19 IST
ಅಕ್ಷರ ಗಾತ್ರ

ಸೈದಾಪುರ: ಸ್ವಾಮಿ ವಿವೇಕಾನಂದರ ಜೀವನದ ತತ್ವಾದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಭಾರತದ ನಿರ್ಮಾಣಕ್ಕೆ ಭಾರತೀಯರು ಸಿದ್ಧರಾಗಬೇಕು ಎಂದು ಮುಖ್ಯಶಿಕ್ಷಕ ಬಿ. ಬಿ. ವಡವಟ್ ಹೇಳಿದರು.

ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೊದಲು ಪ್ರತಿಯೊಬ್ಬರು ಉತ್ತಮ ಮಾರ್ಗಗಳಿಂದ ಸಾಮಾಜಿಕವಾಗಿ, ಶೈಕ್ಷಣಿಕ, ಆರ್ಥಿಕವಾಗಿ ಸದೃಢವಾಗಬೇಕು. ಮಹಾನ್ ಪುಣ್ಯ ಪುರುಷ ವಿವೇಕಾನಂದರ ಜೀವನ ಚರಿತ್ರೆಯನ್ನು ಮುಂದಿಟ್ಟುಕೊಂಡು ನಿಮ್ಮ ದೃಢ ನಿಶ್ಚಯದಂತೆ ಉತ್ತಮ ಕಾರ್ಯಗಳನ್ನು ಮಾಡಿದರೆ ಜಗತ್ತು ನಿಮ್ಮ ಕಾಲಿಗೆ ಬೀಳುವುದರಲ್ಲಿ ಯಾವುದೆ ಸಂದೇಹ ಬೇಡ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ರಾಧ ಸಂಗೋಳಿಗಿ, ಕಾಸಿಂಬಿ ಐ ಕೋನಂಪಲ್ಲಿ, ಸಂತೋಷ ದೇಸಾಯಿ, ಮಹೇಶ ಕೊಂಡಾಪುರ, ದೇವೇಂದ್ರಕುಮಾರ ಬಾಗ್ಲಿ ಮುನಗಾಲ, ಚಂದ್ರಕಲಾ , ಸೃತಿ ಜಾರ್ಜ್ ಕೇರಳ, ಬಸಮ್ಮ ಕಲಬುರಗಿ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT