ಗುರುವಾರ , ಜೂನ್ 30, 2022
23 °C

ಭೂ ಸಂರಕ್ಷಣೆಯ ಜಾಗೃತಿ ಮೂಡಿಸಿ; ಚಿದಾನಂದ ಬಡಿಗೇರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಜಾಗತಿಕ ತಾಪಮಾನ ಏರಿಕೆ, ಮಾಲಿನ್ಯ ಹೆಚ್ಚಳ, ಅರಣ್ಯ ನಾಶ, ಜಲಮೂಲಗಳ ಹಾನಿಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಜನ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ನ್ಯಾಯಾಧೀಶ ಚಿದಾನಂದ ಬಡಿಗೇರ ಹೇಳಿದರು.

ಇಲ್ಲಿಯ ಜೆಎಂಎಫ್‍ಸಿ ಕೋರ್ಟ್‍ನಲ್ಲಿ ಶನಿವಾರ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಭೂದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಭೂ ದಿನದಂದು ಈ ಕುರಿತು ಚರ್ಚೆ ನಡೆಯಬೇಕು. ಜನರಿಗೆ ಶಿಕ್ಷಣ ನೀಡಲು ಹಾಗೂ ಪರಿಸರ ಸಾಕ್ಷರತೆ ಮೂಡಿಸಲು ಭೂಮಿ ದಿನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಭೂಮಿಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರು.

ಪ್ರತಿಯೊಬ್ಬರು ಒಂದು ಸಸಿ ನೆಟ್ಟು ಅದನ್ನು ಬೆಳೆಸುವ ಸಂಕಲ್ಪದೊಂದಿಗೆ ಭೂಮಿಗೆ ಹಸಿರು ಹೊದಿಕೆ ಹಾಕುವ ಕೆಲಸ ಮಾಡಬೇಕಾಗಿದೆ. ಭೂಮಿ ನಮ್ಮನ್ನು ರಕ್ಷಿಸುತ್ತದೆ. ನಾವು ಅದನ್ನು ರಕ್ಷಿಸಬೇಕು ಎಂದು ಅವರು
ತಿಳಿಸಿದರು.

ಭೂಮಿಯನ್ನು ಆರೈಕೆ ಮಾಡಿ ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ಹಸ್ತಾಂತ ರಿಸುವ ಅಗತ್ಯವಿದೆ. ಕೈಗಾರಿಕರಣ, ಅರಣ್ಯ ನಾಶ, ಗಣಿಗಾರಿಕೆಯಿಂದಾಗಿ ಭೂಮಿಯ ತಾಪಮಾನ ಮಾನವ ಸಹಿಸಲಾರದಷ್ಟು ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮ ದುರಾಸೆ ಪರಿಸರ ಅಸಮ ತೋಲನಕ್ಕೆ ಕಾರಣವಾಗಿದೆ. ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಗಿಡ-ಮರ ಬೆಳೆಸಬೇಕು ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಮಾನಪ್ಪ ಕವಡಿಮಟ್ಟಿ, ಎಪಿಪಿ ರಾಘವೇಂದ್ರ ಜಹಗೀರದಾರ, ಪ್ಯಾನಲ್ ವಕೀಲರಾದ ಸಂತೋಷ್ ಗಾರಂಪಳ್ಳಿ, ಮಧುಸೂಧನ್ ಮುಂದಡಾ, ಮಲ್ಲಣ್ಣ ಭೋವಿ, ಸಿಬ್ಬಂದಿ ಇತರರು
ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು