ಯಾದಗಿರಿ: ಹೈದರಾಬಾದ್ಗೆ ಒಂದು ಬಸ್ ಸಂಚಾರ ಆರಂಭ
ಯಾದಗಿರಿ: ಸೋಮವಾರ ಬೆಳಿಗ್ಗೆ ಯಾದಗಿರಿ ಬಸ್ ಘಟಕದಿಂದ ಹೈದರಾಬಾದ್ ಗೆ ಒಂದು ಬಸ್ ಕಾರ್ಯಾಚರಣೆ ಆರಂಭಿಸಿತು.
ಚಾಲಕ, ನಿರ್ವಾಹಕ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದ ನಂತರ ಅಧಿಕಾರಿಗಳು ಅವರನ್ನು ಹೈದರಾಬಾದ್ ಬಸ್ ಕಾರ್ಯಾಚರಣೆ ಮಾಡಲು ತಿಳಿಸಿದರು.
'ಸೋಮವಾರ ಸರ್ಕಾರಿ ನೌಕರರು ಸೇರಿದಂತೆ ಇನ್ನಿತರರಿಗೆ ತೊಂದರೆಯಾಗಬಾರದು ಎಂದು ಚಾಲಕ, ನಿರ್ವಾಹಕರಿಗೆ ಕರೆ ಮಾಡಿ ಕರೆಸುತ್ತಿದ್ದೇವೆ. 11 ಗಂಟೆಗೆಲ್ಲ ಬರುವ ನಿರೀಕ್ಷೆ ಇದೆ' ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.
'ಈಗಾಗಲೇ ನಮ್ಮ ಹಲವು ಬೇಡಿಕೆಗಳನ್ನು ಪೂರೈಸಲು ಸರ್ಕಾರ ಒಪ್ಪಿಕೊಂಡಿದೆ. ಬಸ್ ಕಾರ್ಯಾಚರಣೆ ಕುರಿತು ಬೆಳಿಗ್ಗೆ 11 ಗಂಟೆ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ' ಎಂದು ನೌಕರರೊಬ್ಬರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.