ಯಾದಗಿರಿ: ‘ಪ್ರಜಾವಾಣಿ’ಯಲ್ಲಿ ನವೆಂಬರ್ 23ರಿಂದ ಡಿಸೆಂಬರ್9ರ ವರೆಗೆ ಶಾಲಾ–ಕಾಲೇಜು ಹಾಡು–ಪಾಡು ಸರಣಿ ಲೇಖನಗಳಿಗೆ ಪೋಷಕರು, ಶಿಕ್ಷಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಅಲ್ಲದೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮಸ್ಯೆಗಳಿಗೆ ಮುಕ್ತಿ ದೊರಕಿಸುವುದಾಗಿ ಭರವಸೆ ನೀಡಿದ್ದಾರೆ.

ನವೆಂಬರ್ 23ರಂದು ‘2, 265 ವಿದ್ಯಾರ್ಥಿನಿಯರಿಗೆ ಒಂದೇ ಕಟ್ಟಡ’ ಎನ್ನುವ ಶೀರ್ಷಿಕೆಯಲ್ಲಿ ಸರಣಿ ಲೇಖನ ಆರಂಭವಾಯಿತು. ಅಂದಿನಿಂದ ನಿರಂತರವಾಗಿ ಸರ್ಕಾರಿ ಶಾಲೆಗಳ ನೈಜ ಪರಿಸ್ಥಿತಿಯನ್ನು ಓದುಗರ ಮುಂದೆ ಇಡಲಾಯಿತು. ಶಾಲೆ–ಕಾಲೇಜಿಗೆ ‘ಪ್ರಜಾವಾಣಿ’ ಪ್ರತಿನಿಧಿಗಳು ಭೇಟಿ ನೀಡಿ ವಾಸ್ತವಾಂಶವನ್ನು ಜನತೆಯ ಮುಂದಿಟ್ಟು ಸರ್ಕಾರಿ ಶಾಲೆಗಳಿಗೆ ಧ್ವನಿಯಾಗಿ ನಿಂತಿತು.

‘ಸರಣಿ ಲೇಖನಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಶಿಕ್ಷಣಾಧಿಕಾರಿಗಳ ಜತೆ ಚರ್ಚಿಸಲಾಗಿದೆ. ಎಲ್ಲ ಸೌಲಭ್ಯವನ್ನು ಒಂದೇ ಬಾರಿ ಕಲ್ಪಿಸಲು ಸಾಧ್ಯವಿಲ್ಲ. ಹಂತಹಂತವಾಗಿ ಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಹೇಳುತ್ತಾರೆ.

ನಗರ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳ ಅಕ್ಕಪಕ್ಕದ ನಿವಾಸಿಗಳ ಸಹಕಾರ ಇಲ್ಲ ಎನ್ನುವ ವಿಷಯವನ್ನು ಶಿಕ್ಷಣ ಇಲಾಖೆ, ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ಈ ಸರಣಿ ಲೇಖನಗಳ ಮೂಲಕ ತೆರೆದಿಡಲಾಯಿತು.

ಸರ್ಕಾರಿ ಶಾಲೆಗಳಲ್ಲಿ ಶಿಥಿಲಗೊಂಡಿರುವ ಕಟ್ಟಡಗಳೇ ರಾರಾಜಿಸುತ್ತಿವೆ. ಶೌಚಾಲಯ, ಆಟದ ಮೈದಾನ, ಕಾಯಂ ಶಿಕ್ಷಕರ ಕೊರತೆ, ತ್ಯಾಜ್ಯ ತುಂಬಿದ ಮೈದಾನ, ಕುಸಿಯುವ ಭೀತಿಯಲ್ಲಿರುವ ಕಟ್ಟಡಗಳ ಕೆಳಗೆ ಬೋಧಕರು, ವಿದ್ಯಾರ್ಥಿಗಳು ಕಾಲ ಕಳೆಯುವ ಬಗ್ಗೆ ಎಳೆಎಳೆಯಾಗಿ ಸರ್ಕಾರದ ಮುಂದೆ ಇಡಲಾಯಿತು.

ಇದಕ್ಕೆ ಅನೇಕ ಓದುಗರು ಪ್ರತಿಕ್ರಿಯಿಸಿ ‘ಪ್ರಜಾವಾಣಿ’ ನೈಜ ಸಮಸ್ಯೆಗಳನ್ನು ಬಿಂಬಿಸಿದೆ. ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕು. ಕೇವಲ ಭಾಷಣಗಳಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಎನ್ನುವ ಬದಲು ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಎನ್ನುವ ಹಕ್ಕೋತ್ತಾಯ ಕೇಳಿ ಬಂದಿದೆ.

ಸರಣಿ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದ ನಂತರ ಆಯಾ ಭಾಗದವರು ಕರೆ ಮಾಡಿ, ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ನಮ್ಮ ಶಾಲೆಯ ದುಸ್ಥಿತಿ ಬಗ್ಗೆ ಬರೆಯಿರಿ ಎಂದು ವಿನಂತಿಸಿದ್ದಾರೆ. ವಾರಗಟ್ಟಲೇ ಬರೆದರೂ ಸರ್ಕಾರಿ ಶಾಲೆಗಳ ಸಮಸ್ಯೆಗಳು ತೀರಿಹೋಗುವುದಿಲ್ಲ. ಅಷ್ಟರಮಟ್ಟಿಗೆ ಶಾಲೆಗಳ ಪರಿಸ್ಥಿತಿ ಹದಗೆಟ್ಟಿದೆ.

‘ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸುವುದಕ್ಕಿಂತ ಮುಂಚೆ ಮೊದಲು ನೀರಿನ ವ್ಯವಸ್ಥೆ ಮಾಡಿ. ಇಲ್ಲದೆ ಹೋದರೆ ಬಿಲ್ ಪಡೆಯುವ ಉದ್ದೇಶಕ್ಕಾಗಿ ಯೋಜನೆ ನಿರ್ಮಿಸಿದಂತೆ ಆಗುತ್ತಿದೆ. ಈಗ ಹಾಳು ಬಿದ್ದಿರುವ ಶೌಚಾಲಯಗಳಿಗೆ ಸಾಕ್ಷಿಯಾಗಿವೆ’ ಎನ್ನುವುದು ವಿದ್ಯಾರ್ಥಿಗಳ ಪಾಲಕರು ಆರೋಪವಾಗಿದೆ.

‘ನಗರ ಪ್ರದೇಶದ ಶಾಲೆಗಳಲ್ಲಿ ಜಾಗದ ಸಮಸ್ಯೆ ಉಂಟಾಗಿ ಶೌಚಾಲಯ ನಿರ್ಮಾಣಕ್ಕೆ ತೊಡಕಾದರೆ, ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಸಾಕಷ್ಟು ಜಾಗವಿದ್ದರೂನಿರ್ವಹಣೆ ಹಾಗೂ ಅದರ ಸದ್ಭಳಕೆಯಾಗುತ್ತಿಲ್ಲ. ಮುಖ್ಯವಾಗಿ ನೀರಿನ ಸಮಸ್ಯೆ ಪ್ರಶ್ನೆಯಾಗಿ ಕಾಡುತ್ತಿದೆ. ಶಾಲೆಯ ಅಕ್ಕಪಕ್ಕದ ಜನತೆ ಶೌಚಾಲಯದ ಬಾಗಿಲು ಕಿತ್ತುವುದು, ಒಡೆದು ಹಾಕುವುದು ಸಾಮಾನ್ಯವಾಗಿದೆ. ಶೌಚಕ್ಕೆ ಸರಿಯಾಗಿ ನೀರು ಬಳಸದಿದ್ದರೆ ಹೆಚ್ಚು ಕೆಟ್ಟ ವಾಸನೆ ಬರುತ್ತದೆ. ದಿನಾಲು ಸ್ವಚ್ಛತೆ ಮಾಡಿದರೆ ಸಮಸ್ಯೆ ಕಾಡದು’ ಎನ್ನುತ್ತಾರೆ ಪಾಲಕ ನಿಂಗಣ್ಣ ದೋರನಹಳ್ಳಿ.

ಇನ್ನಾದರೂ ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕು ಎನ್ನುವುದು ಪೋಷಕರ ಆಗ್ರಹವಾಗಿದೆ.

‘ಮೇಲಾಧಿಕಾರಿಗಳ ಗಮನಕ್ಕೆ’
ಇದೇ ಸೋಮವಾರ ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸಭೆ ನಡೆದಿದ್ದು, ‘ಪ್ರಜಾವಾಣಿ’ ಶಾಲಾ–ಕಾಲೇಜು ಹಾಡು–ಪಾಡು ಸರಣಿ ಲೇಖನಗಳು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಲುಪಿವೆ.

ಈ ಕುರಿತು ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಅವರು, ‘ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿಗತಿ ಮತ್ತು ಅನುದಾನ ಸೇರಿದಂತೆ ಪತ್ರಿಕೆಯಲ್ಲಿ ಬಂದಿರುವ ವರದಿಗಳ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಿಕ್ಷಣ ಇಲಾಖೆಗೆ ಬೇಕಾಗುವ ಪಟ್ಟಿ ನೀಡಲಾಗಿದೆ. ಅವರು ಸೂಕ್ತ ಅನುದಾನದ ಭರವಸೆ ನೀಡಿದ್ದಾರೆ’ ಎಂದರು.

ಶೌಚಾಲಯ ಸಮಸ್ಯೆ ನಿವಾರಿಸುವ ಭರವಸೆ
'ಪ್ರಜಾವಾಣಿ' ಪತ್ರಿಕೆಯ ಶಾಲಾ- ಕಾಲೇಜು ಹಾಡು- ಪಾಡು ಸರಣಿಯಲ್ಲಿ ಕಳೆದ ನವೆಂಬರ್ 29 ರಂದು ವಡಗೇರಾ ತಾಲ್ಲೂಕಿನ ಸರ್ಕಾರಿ ಶಾಲೆಗಳ ಕುರಿತು ಸರ್ಕಾರಿ ಶಾಲೆಯಲ್ಲಿ ಸೌಲಭ್ಯ, ಶಿಕ್ಷಕರ ಕೊರತೆ ಎನ್ನುವ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿತ್ತು. ಇದನ್ನು ಮನಗಂಡು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಚನೂರ ಗ್ರಾಮದ ಶಾಲೆಯಲ್ಲಿ ಇರುವ ಶೌಚಾಲಯದ ಸಮಸ್ಯೆಯನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದಾರೆ. ಶಾಲೆಗೆ ಬೇಕಾಗಿರುವ ನೀರಿನ ಘಟಕ ಮತ್ತು ಶೌಚಾಲಯ ನಿರ್ಮಿಸುವುದಾಗಿ ಹೇಳಿದ್ದಾರೆ. ಇದರಿಂದ ನಮಗೆ ಸಂತೋಷವಾಗಿದೆ. ಸರ್ಕಾರಿ ಶಾಲೆಯ ಸಮಸ್ಯೆಗಳು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮನಗಂಡು ವಿಶೇಷವಾಗಿ ವರದಿಯನ್ನು ಪ್ರಕಟಿಸುತ್ತಿರುವ ‘ಪ್ರಜಾವಾಣಿ’ ಪತ್ರಿಕೆಗೆ ಧನ್ಯವಾದಗಳು ಎಂದು ಶಾಲೆಯ ಮುಖ್ಯಶಿಕ್ಷಕ ಮಲ್ಲನಗೌಡ ಪಾಟೀಲ ಹೇಳಿದರು.

‘ಕೊಳವೆಬಾವಿ ದುರಸ್ತಿ’
ಯಾದಗಿರಿ ತಾಲ್ಲೂಕಿನ ಚಾಮನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಳವೆಬಾವಿ ದುರಸ್ತಿ ಮಾಡಲಾಗಿದೆ.
ಈ ಕುರಿತು ಸೌಲಭ್ಯ ಕೊರತೆ; ಆಗದ ದುರಸ್ತಿ ಕುರಿತು ಸರಣಿ ಲೇಖನ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಶಿಕ್ಷಕರು ಕೊಳವೆಬಾವಿ ದುರಸ್ತಿ ಮಾಡಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ನೀರಿನ ಅನುಕೂಲವಾಗಿದೆ.

‘ಮೇಲಧಿಕಾರಿಗಳಿಗೆ ವರದಿ ಸಲ್ಲಿಕೆ’

‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ‘ಶಾಲಾ ಹಾಡುಪಾಡು’ ಸರಣಿ ಲೇಖನಗಳು ಅಧಿಕಾರಿಗಳ ಕಣ್ತೆರೆಸುವಂತೆ ಇದ್ದವು. ಸುರಪುರ ನಗರದ ಸರ್ಕಾರಿ ಬಾಲಕಿಯರ ಕನ್ಯಾ ಪ್ರೌಢಶಾಲೆ ಮತ್ತು ಧೂಳಪೇಟದ ಸರ್ಕಾರಿ ಕನ್ಯಾ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ ಕಟ್ಟಡ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ. ಈ ಶಾಲೆಗಳ ಬಗ್ಗೆ ಮತ್ತು ಇತರ ಇದೇ ರೀತಿ ಸಮಸ್ಯೆ ಇರುವ ಶಾಲೆಗಳ ಬಗ್ಗೆ ಪಟ್ಟಿ ಮಾಡಿ ಸಮಗ್ರ ವರದಿ ಮೇಲಧಿಕಾರಿಗಳಿಗೆ ಸಲ್ಲಿಸಿದ್ದೇನೆ. ಈ ಬಗ್ಗೆ ಕೆಕೆಆರ್ಡಿಬಿಗೂ ಮಾಹಿತಿ ನೀಡಿದ್ದೇನೆ. ಶೀಘ್ರದಲ್ಲಿ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ’ ಎನ್ನುತ್ತಾರೆ ಸುರಪುರ ಕ್ಷೇತ್ರಶಿಕ್ಷಣಾಧಿಕಾರಿ ಮಹಾದೇವರೆಡ್ಡಿ.

‘ಪ್ರಜಾವಾಣಿ’ಯಲ್ಲಿ ಬಂದಿರುವ ಸರಣಿ ಲೇಖನಗಳನ್ನು ಗಮನಿಸಿದ್ದೇನೆ. ಈಗಾಗಲೇ ವಿವಿಧ ಕಡೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ
ಶಾಂತಗೌಡ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಕೆಲವು ವರ್ಷಗಳಿಂದ ಕೊಳವೆ ಬಾವಿ ಕೆಟ್ಟು ಹೋಗಿತ್ತು. ‘ಪ್ರಜಾವಾಣಿ’ ವರದಿ ಪರಿಣಾಮ ಪಿಡಿಒಗಳು ದುರಸ್ತಿ ಕಾರ್ಯ ಮಾಡಿದ್ದಾರೆ
ಆಶಪ್ಪ ಗಾಜರಕೋಳ, ಚಾಮನಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ

‘ಪ್ರಜಾವಾಣಿಯ’ಲ್ಲಿ ಯಾದಗಿರಿ ಜಿಲ್ಲೆಯ ಶಾಲೆಗಳ ಬಗ್ಗೆ ಪ್ರಕಟಗೊಂಡ ಸರಣಿ ಲೇಖನ ಶಾಲೆಗಳ ವಸ್ತುಸ್ಥಿತಿಯನ್ನು ಬಿಂಬಿಸುತ್ತದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಶಿಕ್ಷಕರು, ಮೂಲಸೌಕರ್ಯಗಳನ್ನು ಒದಗಿಸಲಿ
ಛಾಯಾ ಕುಂಟೋಜಿ, ಪಾಲಕರು

ತಾಲ್ಲೂಕಿನ ಶಾಲೆಗಳ ಸಮಸ್ಯೆಯ ಬಗ್ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆದಿದೆ. ಪಿಡಿಒಗಳಿಗೆ ಆಯಾ ಗ್ರಾಮ ಶಾಲೆಯ ಮಕ್ಕಳಿಗೆ ಮೂಲ ಸೌಲಭ್ಯ ಒದಗಿಸುವಂತೆ ಸೂಚಿಸಲಾಗಿದೆ. ಎಸ್ಡಿಎಂಸಿ ಅಧ್ಯಕ್ಷರಿಗೂ ಕೈ ಜೋಡಿಸಲು ಕೋರಲಾಗಿದೆ
ರುದ್ರಗೌಡ ಪಾಟೀಲ,ಬಿಇಒ ಶಹಾಪುರ

ಶಿರವಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯಕ್ಕೆ ನೀರಿನ ಸಮಸ್ಯೆ ಪರಿಹರಿಸುವಂತೆ ಪಿಡಿಒ ಅವರಿಗೆ ಸೂಚಿಸಲಾಗಿದೆ. ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ
ಯಲ್ಲಪ್ಪ ಬೊಮ್ಮನಹಳ್ಳಿ,ಮುಖ್ಯಶಿಕ್ಷಕ ಶಿರವಾಳ

'ಪ್ರಜಾವಾಣಿ'ಯಲ್ಲಿ 'ವಿದ್ಯಾರ್ಥಿಗಳಿಗೆ ಶೌಚದ್ದೇ ಸಮಸ್ಯೆ' ವರದಿ ನಂತರ ಶೌಚಾಲಯವನ್ನು ಶುದ್ಧೀಕರಿಸಿದ್ದೇವೆ. ಕೊಳವೆಬಾವಿ ಸಮಸ್ಯೆ ಬಗ್ಗೆ ಪುರಸಭೆ ಅಧಿಕಾರಿಗಳು ಪರಿಶೀಲಿಸಿ ಬಂದು ಹೋಗಿದ್ದಾರೆ

ಬಸವರಾಜಪ್ಪ ಎನ್.ಕೆ, ಸೋಮನಾಥ ಗುಡಿ ಶಿಕ್ಷಕ ಕಕ್ಕೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.