ಯಾದಗಿರಿ ನಗರ ಗಾಂಧಿ ವೃತ್ತದಲ್ಲಿ ಮಂಗಳವಾರ ಕುಂಕುಮ ಖರೀದಿಸಿದ ಗ್ರಾಹಕರು
ಈ ಹಿಂದೆ ವಿಜಯದಶಮಿಯ ವ್ಯಾಪಾರ ಮೂರು ದಿನಗಳು ನಡೆಯುತ್ತಿದ್ದವು. ಮೊದಲನೇ ದಿನ ಗ್ರಾಮೀಣ ಭಾಗದವರು ಎರಡು ದಿನ ನಗರದವರು ಬರುತ್ತಿದ್ದರು. ಈಗ ಅಂತಹ ಸಂಭ್ರಮ ಇಲ್ಲವಾಗಿದೆ
ಮಹೇಶ ಯಾದಗಿರಿ ,ಕುಂಕುಮ ವ್ಯಾಪಾರಿ
ಹಳ್ಳಿಯಿಂದ ಜನರು ಬಂದು ಖರೀದಿ ಮಾಡಿದರೆ ಮಾತ್ರ ವ್ಯಾಪಾರ ಜೋರಾಗಿ ನಮ್ಮ ಜೇಬು ಸಹ ತುಂಬುತ್ತದೆ. ಮಳೆ ನೆರೆಯಿಂದ ಜನರು ಹಳ್ಳಿಯಿಂದ ಆಚನೇ ಬರುತ್ತಿಲ್ಲ
ಬಸವರಾಜ ಬೂದುಕುಂಬಳಕಾಯಿ, ವ್ಯಾಪಾರಿ
ಹಣ್ಣುಗಳ ದರ ಸ್ಥಿರ
ಹಬ್ಬದ ಋತುವಿನಲ್ಲಿ ಹಣ್ಣು ಹಂಪಲುಗಳ ದರ ಸ್ಥಿರವಾಗಿದೆ. ಆದರೆ ಖರೀದಿ ಮಾತ್ರ ಇಳಿಮುಖವಾಗಿದೆ. ಡಜನ್ ಬಾಳೆಹಣ್ಣು ₹ 50 ಡಜನ್ ಪಚ್ಚ ಬಾಳೆ ₹40 ದರ ಇತ್ತು. ಐದು ಪೇರಲ ಹಣ್ಣು ₹60 ಐದು ದಾಳಿಂಬೆ ₹100 ಐದು ಸೇಬು ₹100 ಐದು ಸೀತಾಫಲ ₹40 (ಗಾತ್ರ ಆಧರಿಸಿ) ಒಂದು ಕೆ.ಜಿ. ಸಪೋಟ ₹100 5 ಮೂಸಂಬಿ ₹100 ಒಂದು ಕೆ.ಜಿ. ದ್ರಾಕ್ಷಿ ₹100ಯಂತೆ ಖರೀದಿಯಾದವು.