ಯಾದಗಿರಿ: ಸುರಪುರ ನಗರದ ಲಾಡ್ಜ್ ಒಂದರ ಮಹಡಿ ಮೇಲೆ ಇಸ್ಪೀಟ್ ಆಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ 28 ಮಂದಿಯನ್ನು ವಶಕ್ಕೆ ಪಡೆದು, ₹ 2.83 ಲಕ್ಷ ಜಪ್ತಿ ಮಾಡಿದ್ದಾರೆ.

ಸುರಪುರ ಠಾಣೆಯ ಪೊಲೀಸರು ದಾಳಿ ಮಾಡಿದ್ದು, ಲಾಡ್ಜ್ ಮ್ಯಾನೇಜರ್ ಸೇರಿದಂತೆ ಇಸ್ಪೀಟ್ ಆಡುತ್ತಿದ್ದ ಭೀಮಪ್ಪ ಅಯ್ಯಪ್ಪ, ಬಸವರಾಜ ಹಣಮಂತ, ನಿಂಗಪ್ಪ ಶಿವಲಿಂಗಪ್ಪ, ವೆಂಕಟೇಶ ಈರಣ್ಣಗೌಡ, ರಾಮಣ್ಣ ಯಂಕಯ್ಯ, ರಾಜು ಭೀಮಣ್ಣ ಸೇರಿ 29 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಲಾಡ್ಜ್ ಮೇಲೆ ದುಂಡಾಗಿ ಕುಳಿತು ₹ 500ರಿಂದ ₹ 1,000 ವರೆಗೆ ಹಣ ಇರಿಸಿ ಇಸ್ಪೀಟ್ ಆಡುತ್ತಿದ್ದರು. ದಾಳಿ ಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.