ಯಾದಗಿರಿ: ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬಹು ಬೇಡಿಕೆ ಇರುವ ‘ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್’ಗಳನ್ನು ಆರಂಭಿಸಲು ಇಲ್ಲಿನ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಯಿಮ್ಸ್) ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಅನುಮತಿ ನೀಡಿದೆ.

‘ಯಿಮ್ಸ್’ನಲ್ಲಿ ಪ್ರಸ್ತುತ ಎಂಬಿಬಿಎಸ್ನ 750 ವಿದ್ಯಾರ್ಥಿಗಳು, ನರ್ಸಿಂಗ್ ಕೋರ್ಸ್ಗಳ 200 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರೊಂದಿಗೆ ನಾಲ್ಕು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ಗಳಿಂದ 80 ವಿದ್ಯಾರ್ಥಿಗಳು ಹೊಸದಾಗಿ ಸೇರ್ಪಡೆಯಾಗುವರು. ಇದರೊಂದಿಗೆ ‘ಯಿಮ್ಸ್’ನ ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರ ಗಡಿ (1,030) ದಾಟಲಿದೆ.

ಬಿಎಸ್ಸಿ ಅರಿವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನ, ಬಿಎಸ್ಸಿ ವೈದ್ಯಕೀಯ ಇಮೇಜಿಂಗ್ ತಂತ್ರಜ್ಞಾನ, ಬಿಎಸ್ಸಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ಮತ್ತು ಬಿಎಸ್ಸಿ ಆಪ್ಟೋಮೆಟ್ರಿ ಕೋರ್ಸ್ಗಳನ್ನು 2025–26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಆರಂಭಿಸುವಂತೆ ‘ಯಿಮ್ಸ್’ ಆಡಳಿತ ಮಂಡಳಿ ಕೋರಿತ್ತು.

ರಾಜೀವ್ ಗಾಂಧಿ ಆರೋಗ್ಯ ವಿವಿಯ ತಂಡವು ಮಾರ್ಚ್ ತಿಂಗಳಲ್ಲಿ ‘ಯಿಮ್ಸ್’ಗೆ ಭೇಟಿ ನೀಡಿತ್ತು. ಸಂಸ್ಥೆಯಲ್ಲಿ ಮೂಲಸೌಕರ್ಯಗಳು, ಬೋಧನಾ ಸಾಮರ್ಥ್ಯವನ್ನು ಪರಿಶೀಲಿಸಿದ್ದು, ಈಗ ನಾಲ್ಕು ಕೋರ್ಸ್ಗಳನ್ನು ಆರಂಭಿಸಲು ಹಸಿರು ನಿಶಾನೆ ತೋರಿದೆ. ಆಡಳಿತ ಮಂಡಳಿಯು ಉತ್ಸಾಹದಿಂದ ಕೋರ್ಸ್ ಆರಂಭಿಸಲು ಸಜ್ಜಾಗಿದೆ.

ಈ ನಾಲ್ಕು ಕೋರ್ಸ್ಗಳಿಗೆ ತಲಾ 20 ಸೀಟುಗಳಂತೆ ಒಟ್ಟು 80 ವಿದ್ಯಾರ್ಥಿಗಳಿಗೆ ‘ಯಿಮ್ಸ್’ನಲ್ಲಿ ಕಲಿಯುವ ಅವಕಾಶ ಸಿಗಲಿದೆ. ಪ್ರವೇಶಾತಿ ಬಯಸುವವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಕೌನ್ಸಿಲಿಂಗ್ ಮುಖೇನ ಬರಬೇಕು ಎನ್ನುತ್ತಾರೆ ‘ಯಿಮ್ಸ್’ ಅಧಿಕಾರಿಗಳು.

‘ರೋಗ ಪತ್ತೆ ಹಚ್ಚುವುದರಿಂದ ಹಿಡಿದು ಶಸ್ತ್ರಚಿಕಿತ್ಸೆಯವರೆಗಿನ ಎಲ್ಲ ಕೆಲಸಗಳನ್ನು ವೈದ್ಯರಷ್ಟೇ ನಿರ್ವಹಿಸಲು ಸಾಧ್ಯವಿಲ್ಲ. ರೋಗ ನಿರ್ಣಯ ಮತ್ತು ಪತ್ತೆಯಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಓದಿದವರ ಅವಶ್ಯವಿದೆ. ಹೀಗಾಗಿ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಓದಿ ಪದವಿ ಗಳಿಸಿದವರಿಗೆ ಹಲವು ಅವಕಾಶಗಳಿದ್ದು, ದೇಶ ಮಾತ್ರವಲ್ಲದೆ ಜಗತ್ತಿನಲ್ಲಿ ಅವರಿಗೆ ಬಹಳಷ್ಟು ಬೇಡಿಕೆ ಇದೆ’ ಎಂದರು.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈ ಮೊದಲು ಡಿಎಂಎಲ್ಟಿ ಮಾಡಿದವರಿಗೆ ಸಾಕಷ್ಟು ಬೇಡಿಕೆ ಇತ್ತು. ಅದು ನಿಧಾನವಾಗಿ ಕಡಿಮೆಯಾಗಿದೆ. ಈಗ ಬಿಎಸ್ಎಸ್ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಮಾಡಿದವರನ್ನು ಕರೆದು ಕೆಲಸ ಕೊಡುತ್ತಿದ್ದಾರೆ. ವಿದೇಶಗಳಲ್ಲಿ ರೆಡಿಯೊಲಾಜಿಸ್ಟ್, ಲ್ಯಾಬ್ ಟೆಕ್ನಿಷಿಯನ್ಗಳಿಗೆ ಬಹಳ ಬೇಡಿಕೆ ಇದೆ. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿಯೂ ಬಿಎಸ್ಎಸ್ ಓದಿದವರಿಗೆ ಆದ್ಯತೆ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

‘2ನೇ ವರ್ಷದಿಂದಲೇ ಪ್ರಾಯೋಗಿಕ ಕಲಿಕೆ’

‘ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ನ ವಿದ್ಯಾರ್ಥಿಗಳಿಗೆ ಎರಡನೇ ವರ್ಷದಿಂದಲ್ಲೇ ಪ್ರಾಯೋಗಿಕ ಕಲಿಕೆ ಶುರುವಾಗುತ್ತದೆ. ಇದರಿಂದಾಗಿ ‘ಯಿಮ್ಸ್’ಗೆ ಹೆಚ್ಚುವರಿ ಮಾನವ ಸಂಪನ್ಮೂಲ ಸಿಕ್ಕಂತೆ ಆಗುತ್ತದೆ’ ಎಂದು ‘ಯಿಮ್ಸ್’ ಮುಖ್ಯಸ್ಥ ಡಾ. ಸಂದೀಪ್ ಹರಸಂಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕು ಕೋರ್ಸ್ಗಳಿಗೆ ಮೂರು ವರ್ಷದ ಅವಧಿ ಇದ್ದು ಮೊದಲ ವರ್ಷದ ಎರಡು ಸೆಮಿಸ್ಟರ್ಗಳಲ್ಲಿ ಥಿಯರಿ ಬೋಧನೆ ಇರಲಿದೆ. ನಂತರ ಥಿಯರಿ ಜೊತೆಗೆ ಪ್ರಾಯೋಗಿಕ ಕಲಿಕೆ ಇದ್ದು ರೋಗಿಗಳ ತಪಾಸಣೆಯೂ ಮಾಡಬೇಕಾಗುತ್ತದೆ. ಹೊಸ ಕೋರ್ಸ್ಗಳಿಂದ ನಮ್ಮ ಭಾಗದ ಹೆಲ್ತ್ ಸೈನ್ಸ್ ಓದುವ ಆಕಾಂಕ್ಷಿಗಳಿಗೆ ವರವಾಗಲಿದೆ’ ಎಂದರು.

‘ಪ್ರವೇಶಾತಿ ಪಡೆದ ವಿದ್ಯಾರ್ಥಿನಿಯರಿಗೆ ಯಿಮ್ಸ್ನಲ್ಲಿಯೇ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಲಾಗುವುದು. ಯುವಕರಿಗೆ ಹೊರಗಡೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.