ಮೈಸೂರು: ಹೆಸರಾಂತ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಅವರಿಗೆ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕ ನೀಡುವ ಅಂತರರಾಷ್ಟ್ರೀಯ ಮಟ್ಟದ ಎಫ್ಪಿಎಸ್ಎ (ಫೆಲೋಶಿಪ್) ದೊರೆತಿದೆ. ಈ ಮನ್ನಣೆಯು ವನ್ಯಜೀವಿ ವಿಭಾಗಕ್ಕೆ ಲಭಿಸಿದೆ.
ತಿಪ್ಪೇಸ್ವಾಮಿ ಅವರು ಛಾಯಾಗ್ರಾಹಕ, ಉಪನ್ಯಾಸಕ ಹಾಗೂ ವಿವಿಧ ಛಾಯಾಚಿತ್ರ ಪ್ರದರ್ಶನಗಳ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ.
ಇವರು ಛಾಯಾಗ್ರಾಹಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗೆ ಈ ಮನ್ನಣೆ ಲಭಿಸಿದೆ. ಇವರಿಗೆ ಶೇ 75ರಷ್ಟು ಮತಗಳು ದೊರೆತು, ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ತಿಪ್ಪೇಸ್ವಾಮಿ ಸೆ.24ರಂದು ಅಮೆರಿಕದ ಕೊಲರಾಡೊ ಸ್ಪ್ರಿಂಗ್ಸ್ನಲ್ಲಿ ಫೆಲೋಶಿಪ್ ಸ್ವೀಕರಿಸಲಿದ್ದಾರೆ.