ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗೆ: ತಿಂಗಳಲ್ಲಿ ಮೂರು ಬಲಿ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಿಜಾಪುರ: ಶಂಕಿತ ಡೆಂಗೆಗೆ ಒಂದು ತಿಂಗಳ ಅವಧಿಯಲ್ಲಿ ಮೂವರು ಮಕ್ಕಳು ಮೃತಪಟ್ಟಿರುವ ಇಂಡಿ ತಾಲ್ಲೂಕು ತಡವಲಗಾ ಗ್ರಾಮದಲ್ಲೆಗ ಆತಂಕದ ಕಾರ್ಮೋಡ. ಮೃತ ಮಕ್ಕಳ ಮನೆಯಲ್ಲಿ ನಿಲ್ಲದ ರೋದನ.

`ಒಂದು ತಿಂಗಳ ಅವಧಿಯಲ್ಲಿ ನಮ್ಮೂರಲ್ಲಿ ಮೂರು ಮಕ್ಕಳು ಡೆಂಗೆಗೆ ಬಲಿಯಾಗಿವೆ. 10 ತಿಂಗಳ ಸುಶ್ಮಿತಾ ಶರಣಪ್ಪ ಇಂಡಿ, ಆಕೆಯ ಸಹೋದರಿ ಒಂಬತ್ತು ತಿಂಗಳ ಗೀತಾ ಸಾಹೇಬಗೌಡ ಇಂಡಿ, ಎರಡು ವರ್ಷದ ದಾಕ್ಷಾಯಿಣಿ ಬಿರಾದಾರ ಡೆಂಗೆಗೆ ಬಲಿಯಾಗಿದ್ದಾರೆ. ಇನ್ನೂ ಕೆಲ ಮಕ್ಕಳು ಜ್ವರದಿಂದ ಬಳಲುತ್ತಿವೆ~ ಎಂದು ಗ್ರಾಮದ ಕೆಲವರು ಗೋಳಿಟ್ಟರು. ಗ್ರಾಮದಲ್ಲಿ ನೈರ್ಮಲ್ಯ ಎಂಬುದೇ ಇಲ್ಲ. ಈ ಮಕ್ಕಳು ಶಂಕಿತ ಡೆಂಗೆಗೆ ಬಲಿಯಾಗಿದ್ದಾರೆ ಎಂಬ ಸುದ್ದಿ ಪ್ರಕಟವಾದ ನಂತರ ಗ್ರಾಮ ಪಂಚಾಯ್ತಿಯವರು ರಸ್ತೆಯಲ್ಲಿ ಸ್ವಲ್ಪ ಮಣ್ಣು ಎಸೆದಿದ್ದಾರೆ.

`ಈ ಪ್ರದೇಶವನ್ನು ಡೆಂಗೆಪೀಡಿತ ಎಂದು ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಶುದ್ಧ ಕುಡಿಯುವ ನೀರು ಪೂರೈಸಿ ಸ್ವಚ್ಛತೆ ಕಾಪಾಡುವಂತೆ ಗ್ರಾಮ ಪಂಚಾಯ್ತಿಗೆ ತಿಳಿಸಿದ್ದೇವೆ~ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಗಲಗಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT