ಬೆಂಗಳೂರು: ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿನ (Central Silk Board) 'ಬಿ' ವೃಂದದ 122 ವಿಜ್ಞಾನಿಗಳ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಸೆಪ್ಟೆಂಬರ್ 5 ಅರ್ಜಿ ಸಲ್ಲಿಸಲು ಕಡೆಯ ದಿನ. ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ₹1,000. ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲರಿಗೆ ಶುಲ್ಕ ವಿನಾಯಿತಿ ಇದೆ.
ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಐಸಿಎಆರ್‌ನ ಎಐಸಿಇ ಜೆಆರ್‌ಎಫ್/ಎಸ್‌ಆರ್‌ಎಫ್ ತೇರ್ಗಡೆ ಹೊಂದಿರಬೇಕು. ಜೊತೆಗೆ ಪಿಎಚ್‌ಡಿ ಹೊಂದಿರಬೇಕು.
ಈ ಎಲ್ಲ ಶೈಕ್ಷಣಿಕ ಅರ್ಹತೆಯ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಸಿದ್ದಪಡಿಸಿ, ಮೀಸಲು ವರ್ಗವಾರು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ ಮೂರು ವರ್ಷ ರೇಷ್ಮೆ ಮಂಡಳಿಯ ನಿಗದಿತ ಹುದ್ದೆಯಲ್ಲಿ (Scientist- B, Pre Cocoon Sector) ಸೇವೆ ಸಲ್ಲಿಸುವುದು ಕಡ್ಡಾಯ. ಮಂಡಳಿಯ ದೇಶದ ಬೇರೆ ಬೇರೆ ಕಡೆಗೆ ಇರುವ ಕಚೇರಿಯಲ್ಲಿ ಕೆಲಸ ಮಾಡಲು ಸಿದ್ದರಿರಬೇಕು.
ಅಧಿಸೂಚನೆ ಹಾಗೂ ಹೆಚ್ಚಿನ ಮಾಹಿತಿಗೆ ಆಸಕ್ತ ಅಭ್ಯರ್ಥಿಗಳು www.csb.gov.in ಪರಿಶೀಲಿಸಬಹುದು. ರೇಷ್ಮೆ ಮಂಡಳಿ ಭಾರತ ಸರ್ಕಾರದ ಟೆಕ್ಸ್‌ಟೈಲ್ ಸಚಿವಾಲಯದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.