ಭಾರತೀಯ ರೈಲ್ವೆಯ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಲೆವೆಲ್–1 (ಡಿ–ಗ್ರೂಪ್) ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಮಂಡಳಿಗಳಿಂದ ಆನ್ಲೈನ್ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.

ಒಟ್ಟು ಹುದ್ದೆಗಳು 32,438.10ನೇ ತರಗತಿ ತೇರ್ಗಡೆ ಹೊಂದಿದವರು ಅಥವಾ ಐಟಿಐ ಪಾಸಾದವರು ಅಥವಾ ಎನ್ಸಿವಿಟಿಯಿಂದ (National Council for Vocational Education and Training) ನ್ಯಾಷನಲ್ ಅಪ್ರೆಂಟಿಸ್ ತರಬೇತಿ ಪಡೆದ 18ರಿಂದ 36ರ ವಯೋಮಾನದ ಅರ್ಹ ಪುರುಷ, ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಮೀಸಲು ವರ್ಗಗಳಿಗೆ ವಯೋಮಾನದಲ್ಲಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ ಸಾಮಾನ್ಯ, ಒಬಿಸಿ ವರ್ಗದವರಿಗೆ ₹500, ಎಸ್.ಸಿ/ ಎಸ್ಟಿ ಇತರೆ, ಇಡಬ್ಲೂಎಸ್, ಮಾಜಿ ಸೈನಿಕರಿಗೆ, ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ₹250. ಆನ್ಲೈನ್ ಅರ್ಜಿ ಸಲ್ಲಿಸಲು ಕಡೆಯ ದಿನ ಇದೇ ಫೆಬ್ರುವರಿ 22.

ರೈಲ್ವೆಯ ಲೆವೆಲ್–1 ರ ಅಂದರೆ ಡಿ- ಗ್ರೂಪ್ ವಿಭಾಗದ 14 ವಿವಿಧ ಬಗೆಯ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಗಳು ಕೇಂದ್ರದ 7ನೇ ವೇತನ ಆಯೋಗದ ಲೆವಲ್ 1 ರ ಅಡಿ ಬರುತ್ತವೆ.

ಯಶಸ್ವಿಯಾಗಿ ಅರ್ಜಿ ಸಲ್ಲಿಸಿದವರಿಗೆ ನಾಲ್ಕು ಹಂತಗಳಲ್ಲಿ ನೇಮಕಾತಿ ನಡೆಯಲಿದೆ. ಮೊದಲಿಗೆ ಕಂಪ್ಯೂಟರ್ (ಸಿಬಿಟಿ) ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಸಿಬಿಟಿ ಪರೀಕ್ಷೆಯಲ್ಲಿ ಮೆರಿಟ್ ಗಳಿಸಿದವರಿಗೆ (1:3) ದೈಹಿಕ ಅರ್ಹತೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ (ಇಟಿ–ಪಿಎಸ್ಟಿ) ನಡೆಯಲಿದೆ. ದೈಹಿಕ ಪರೀಕ್ಷೆ ಪೂರ್ಣಗೊಳಿಸಿದವರಿಗೆ ವೈದ್ಯಕೀಯ (ಎಂಇ) ಪರೀಕ್ಷೆ ಇರಲಿದೆ. ಅದಾದ ಬಳಿಕ ಕೊನೆಯ ಹಂತ (ಡಿವಿ) ದಾಖಲೆಗಳ ತಪಾಸಣೆ. ಸಿಬಿಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿ ಮೂರು ತಪ್ಪು ಉತ್ತರಗಳಿಗೆ 1 ನೆಗಟಿವ್ ಮಾರ್ಕಿಂಗ್ ಇರುತ್ತೆ.

ಸ್ಪರ್ಧಾತ್ಮಕ ಸಿಬಿಟಿ ಪರೀಕ್ಷೆಯು 100 ಅಂಕಗಳಿಗೆ ಒಂದೇ ಹಂತದಲ್ಲಿ ನಡೆಯಲಿದೆ. ಬಹುಆಯ್ಕೆಯ 100 ಪ್ರಶ್ನೆಗಳಿರುತ್ತವೆ. ಉತ್ತರಿಸುವ ಅವಧಿ 90 ನಿಮಿಷ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆದ್ಯತೆಯ ಅನುಸಾರ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಭಾರತೀಯ ರೈಲ್ವೆಯ 17 ವಲಯಗಳಲ್ಲಿ ಬೆಂಗಳೂರು ಸೇರಿದಂತೆ ಒಟ್ಟು 21 ರೈಲ್ವೆ ನೇಮಕಾತಿ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ವ್ಯಾಪ್ತಿಯಲ್ಲಿ ಇರುವ ನೈರುತ್ಯ ರೈಲ್ವೆ ಹಾಗೂ ರೈಲ್ ವೀಲ್ ಫ್ಯಾಕ್ಟರಿಗೆ ಸಂಬಂಧಿಸಿದಂತೆ 503 ಗ್ರೂಪ್- ಡಿ ಹುದ್ದೆಗಳಿವೆ. ವಿವರವಾದ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸಲು ವೆಬ್ಸೈಟ್ www.rrbbnc.gov.in. ಪರಿಶೀಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.