ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಪೊಲೀಸ್‌ನಲ್ಲಿ 7547 ಕಾನ್‌ಸ್ಟೆಬಲ್‌ ಹುದ್ದೆಗಳು

Published 6 ಸೆಪ್ಟೆಂಬರ್ 2023, 23:32 IST
Last Updated 6 ಸೆಪ್ಟೆಂಬರ್ 2023, 23:32 IST
ಅಕ್ಷರ ಗಾತ್ರ

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ದೆಹಲಿ ಪೊಲೀಸ್‌ನಲ್ಲಿ ಖಾಲಿಯಿರುವ 7547 ಎಕ್ಸಿಕ್ಯೂಟಿವ್‌ ಕಾನ್‌ಸ್ಟೆಬಲ್‌(ಪುರುಷ 5056ಮತ್ತು ಮಹಿಳೆ – 2491) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಸೆಪ್ಟೆಂಬರ್ 30, 2023 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ, ಅಧಿಸೂಚನೆ ಮತ್ತು ಹೆಚ್ಚಿನ ವಿವರಗಳಿಗೆ www.ssckkr.kar.nic.in ಮತ್ತು www.ssc.nic.in ಜಾಲತಾಣಕ್ಕೆ ಭೇಟಿ ನೀಡಬಹುದು. ಈ ಜಾಲತಾಣದಲ್ಲಿ ಲಭ್ಯವಿರುವ ಅಧಿಸೂಚನೆಯ ಅನುಬಂಧ –I ಮತ್ತು ಅನುಬಂಧ XIV ಅನ್ನು ನೋಡಿ.

ಶೈಕ್ಷಣಿಕ ಅರ್ಹತೆ: ಪಿಯುಸಿ ಅಥವಾ 10+2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಲಘು ಮೋಟಾರು ವಾಹನಗಳ ಚಾಲನಾ ಪರವಾನಗಿ(LMV Driving Licence) ಹೊಂದಿರಬೇಕು. ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಕ್ಷಮತೆ ಮತ್ತು ಮಾಪನ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷಗಳು, ಗರಿಷ್ಠ 25 ವರ್ಷಗಳು (1 ಜುಲೈ 2023ಕ್ಕೆ ಅನ್ವಯವಾಗುವಂತೆ). ಎಸ್‌ಸಿ/ಎಸ್‌ಟಿ/ಒಬಿಸಿ/ಇಎಸ್‌ಎಂ/ಇತರೆ ನಿರ್ದಿಷ್ಟ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಈ ಕುರಿತು ವಿವರಕ್ಕಾಗಿ ಅಧಿಸೂಚನೆಯ ಪ್ಯಾರಾ 5.1 ಅನ್ನು ನೋಡಿ.

ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹100. ಮಹಿಳಾ ಅಭ್ಯರ್ಥಿಗಳು ಮತ್ತು ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪರೀಕ್ಷಾ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಮೂರು ವಿಷಯಗಳಿರುತ್ತವೆ. ಅವು ಹೀಗಿವೆ; i) ಸಾಮಾನ್ಯ ಜ್ಞಾನ ii)ರೀಸನಿಂಗ್‌ iii) ಸಂಖ್ಯಾತ್ಮಕ ಸಾಮರ್ಥ್ಯ iv) ಕಂಪ್ಯೂಟರ್ ಫಂಡಮೆಟಲ್ಸ್‌(ಎಂಎಸ್‌ ವರ್ಡ್‌, ಎಕ್ಸೆಲ್‌, ಇಂಟರ್ನೆಟ್‌ ಇತ್ಯಾದಿ). ಇದೇ ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ನಿಖರ ದಿನಾಂಕವನ್ನು ಸಿಬ್ಬಂದಿ ನೇಮಕಾತಿ ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.

ಪರೀಕ್ಷೆ ನಂತರ ದೈಹಿಕ ಕ್ಷಮತೆ ಮತ್ತು ಮಾಪನ ಪರೀಕ್ಷೆಗಳಿರುತ್ತವೆ. ಹೆಚ್ಚಿನವಿವರಗಳಿಗೆ ಅಧಿಸೂಚನೆಯ ಪ್ಯಾರಾ 12 ಅನ್ನು ನೋಡಿ. ಎನ್‌ಸಿಸಿ ಪ್ರಮಾಣ ಪತ್ರ ಹೊಂದಿರುವವರು ಮತ್ತು ಆರ್‌ ಆರ್‌ಯು ಪದವಿ /ಪಿಜಿ ಡಿಪ್ಲೊಮಾ ಪ್ರಮಾಣ ಪತ್ರ ಹೊಂದಿರುವವರಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ www.ssckkr.kar.nic.in ಮತ್ತು www.ssc.nic.in ಜಾಲತಾಣಕ್ಕೆ ಭೇಟಿ ನೀಡಿ.

ಮಾಹಿತಿ: ಸಿಬ್ಬಂದಿ ನೇಮಕಾತಿ ಆಯೋಗ, (ಕರ್ನಾಟಕ, ಕೇರಳ ಪ್ರದೇಶ), ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT