ಶನಿವಾರ, ಜೂನ್ 25, 2022
28 °C

ಭಾರತ ಸರ್ಕಾರ | 7ನೇತರಗತಿ ಪಾಸ್‌:1080 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳಿಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋಲ್‌ ಇಂಡಿಯಾದ ಈಸ್ಟರ್ನ್‌ ವಿಭಾಗದಲ್ಲಿ ಖಾಲಿ ಇರುವ 1080 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತರು ನಿಗದಿತ ನಮೂನೆ ಮೂಲಕವೇ  ಅರ್ಜಿ ಸಲ್ಲಿಸಬಹುದು.

ಕೋಲ್ ಇಂಡಿಯಾದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು ಮಾತ್ರ ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ. ಇದು ಆಂತರಿಕ ನೇಮಕಾತಿಯಾಗಿರುತ್ತದೆ ಎಂದು ಕೋಲ್‌ ಇಂಡಿಯಾ ಪ್ರಕಟನೆಯಲ್ಲಿ ತಿಳಿಸಿದೆ.

ಹುದ್ದೆಗಳ ವಿವರ: ಸೆಕ್ಯೂರಿಟಿ ಗಾರ್ಡ್‌

ಒಟ್ಟು ಹುದ್ದೆಗಳ ಸಂಖ್ಯೆ: 1080

ಮೀಸಲಾತಿ: ಸಾಮಾನ್ಯ  –842, ಎಸ್‌ಸಿ –163,  ಎಸ್‌ಟಿ –81

ವಿದ್ಯಾರ್ಹತೆ: ಸರ್ಕಾರದ ಮಾನ್ಯತೆ ಪಡೆದ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು. 

ವಯೋಮಿತಿ ಸಡಿಲಿಕೆ: 09 ಜನವರಿ 2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18, ಗರಿಷ್ಠ 35 ವರ್ಷದರಾಗಿರಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ನೇಮಕಾತಿ ವಿಧಾನ: 7ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್‌ ಲಿಸ್ಟ್‌ ತಯಾರಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.  ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ನಮೂನೆ ಮೂಲಕವೇ ಸಲ್ಲಿಸಬೇಕು.  

ಅರ್ಜಿ ಸಲ್ಲಿಸಲು ಕೊನೆಯ ದಿನ: 15 ಜೂನ್‌, 2021

ನಿಗದಿತ  ಅರ್ಜಿ ನಮೂನೆ ಲಿಂಕ್‌:  http://www.easterncoal.gov.in/notices/recruitment/20210521internalnotifi...

ವೆಬ್‌ಸೈಟ್‌: http://www.easterncoal.gov.in/notices/recruitmentheader.aspx

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು