ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಸಾಮಾನ್ಯ ಅಧ್ಯಯನ

Last Updated 2 ಜೂನ್ 2021, 19:30 IST
ಅಕ್ಷರ ಗಾತ್ರ

60. ಭಾರತದ ಜಿ.ಡಿ.ಪಿ.ಯನ್ನು ಅಳೆದ ಮೊದಲ ಭಾರತೀಯ ಯಾರು?

ಎ) ದಾದಾಬಾಯಿ ನವರೋಜಿ ಬಿ) ಡಾ. ಅಂಬೇಡ್ಕರ್

ಸಿ) ಕೆ.ಟಿ. ಶಾ ಡಿ) ಮೇಲಿನ ಯಾರೂ ಅಲ್ಲ

ಉತ್ತರ : (ಎ)

ವಿವರಣೆ : ದಾದಾಬಾಯಿ ನವರೋಜಿಯವರು ಭಾರತದ ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯವನ್ನು ಅಳೆದ ಮೊದಲ ಭಾರತೀಯರು.

61. ಕೃಷ್ಣಾ ನದಿಯ ಅತೀ ದೊಡ್ಡ ಉಪನದಿ ಯಾವುದು?

ಎ) ಭೀಮಾ ಬಿ) ತುಂಗಭದ್ರಾ

ಸಿ) ಘಟಪ್ರಭ ಡಿ) ಮಲಪ್ರಭ

ಉತ್ತರ : (ಬಿ)

ವಿವರಣೆ : ಕೃಷ್ಣಾ ನದಿಯ ಮುಖ್ಯ ಉಪನದಿಗಳೆಂದರೆ: ಭೀಮಾ, ಕೊಯ್ನಾ, ಪಂಚಗಂಗಾ, ಧೂದ್‌ಗಂಗಾ, ತುಂಗಭದ್ರಾ, ಹಿರಣ್ಯಕೇಶಿ, ಘಟಪ್ರಭ, ಮಲಪ್ರಭ ಮುಂತಾದವು. ಇವುಗಳಲ್ಲಿ ತುಂಗಭದ್ರಾ ನದಿಯು ಇದರ ಅತ್ಯಂತ ಮುಖ್ಯ ಹಾಗೂ ಅತಿ ದೊಡ್ಡ ಉಪನದಿಯಾಗಿದೆ.

62. ‘ಕಾರಂಜಾ ನದಿ’ಯು ಯಾವ ನದಿಯ ಉಪ ನದಿಯಾಗಿದೆ?

ಎ) ಕೃಷ್ಣಾ ನದಿ ಬಿ) ಕಬಿನಿ ನದಿ

ಸಿ) ಮಂಜ್ರಾ ನದಿ ಡಿ) ತುಂಗಭದ್ರಾ ನದಿ

ಉತ್ತರ : (ಸಿ)

ವಿವರಣೆ: ಮಂಜ್ರಾ ನದಿಯು ಕರ್ನಾಟಕದ ಅತ್ಯಂತ ಉತ್ತರ ಭಾಗದ ನೀರಾವರಿ ಯೋಜನೆಯಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕು ಬ್ಯಾಲಹಳ್ಳಿಯ ಬಳಿ ಮಂಜ್ರಾ ನದಿಯ ಉಪನದಿಯಾದ ಕಾರಂಜಾ ನದಿಗೆ ಜಲಾಶಯ ನಿರ್ಮಿಸಲಾಗಿದೆ.

63. ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಇರುವ ಭೂ ಗಡಿರೇಖೆ ಯಾವುದು?

ಎ) ಮ್ಯಾಕ್ ಮೋಹನ್ ರೇಖೆ ಬಿ) ರ‍್ಯಾಡ್‌ಕ್ಲಿಫ್ ರೇಖೆ

ಸಿ) ಡ್ಯುರೆಂಡ್ ರೇಖೆ ಡಿ) ಪಾಕ್ ಜಲಸಂಧಿ

ಉತ್ತರ : (ಸಿ)

ವಿವರಣೆ : ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಇರುವ ಭೂ ಗಡಿರೇಖೆ ಡ್ಯುರೆಂಡ್ ರೇಖೆಯಾಗಿದೆ. ಇತರೆ ಗಡಿರೇಖೆಗಳು ಈ ಕೆಳಗಿನಂತಿವೆ.

• ಭಾರತ ಮತ್ತು ಚೀನಾ – ಮ್ಯಾಕ್ ಮೋಹನ್ ರೇಖೆ

• ಭಾರತ ಮತ್ತು ಪಾಕಿಸ್ತಾನ - ರ‍್ಯಾಡ್‌ಕ್ಲಿಫ್ ರೇಖೆ

• ಭಾರತ ಮತ್ತು ಅಫ್ಘಾನಿಸ್ತಾನ – ಡ್ಯುರೆಂಡ್ ರೇಖೆ

• ಭಾರತ ಮತ್ತು ಶ್ರೀಲಂಕಾ - ಪಾಕ್ ಜಲಸಂಧಿ

64. ಮಧ್ಯ ಹಿಮಾಲಯ ಸರಣಿಯು ಗಿರಿಧಾಮಗಳಿಗೆ ಪ್ರಸಿದ್ಧವಾಗಿದೆ. ಕೆಳಗಿನ ಯಾವ ಗಿರಿಧಾಮಗಳು ಇಲ್ಲಿ ಕಂಡು ಬರುತ್ತವೆ?

1. ರಾಣಿಖೇತ್‌ 2. ಮಸ್ಸೋರಿ

3. ಡಾರ್ಜಿಲಿಂಗ್ 4. ಚಕ್ರತಾ

ಉತ್ತರ ಸಂಕೇತಗಳು:

ಎ) 1 ಮತ್ತು 3 ಬಿ) 1 ಮತ್ತು 2

ಸಿ) 1, 2, 3 ಮತ್ತು 4 ಡಿ) 1 ಮತ್ತು 4

ಉತ್ತರ : (ಸಿ)

ವಿವರಣೆ : ಮಧ್ಯ ಹಿಮಾಲಯ ಸರಣಿಯು ಹಲವಾರು ಗಿರಿಧಾಮಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿಯ ಅನೇಕ ಪರ್ವತ ಶಿಖರಗಳು ಹಿಮಾಚ್ಛಾದಿವಾಗಿದೆ. ಶಿಮ್ಲಾ, ರಾಣಿಖೇತ್‌, ಚಕ್ರತಾ, ಮಸ್ಸೋರಿ, ನೈನಿತಾಲ್, ಡಾರ್ಜಿಲಿಂಗ್ ಇಲ್ಲಿಯ ಪ್ರಸಿದ್ಧ ಗಿರಿಧಾಮಗಳು.

65. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಎಷ್ಟು ರಾಜ್ಯಗಳಿವೆ?

ಎ) 28 ಬಿ) 49 ಸಿ) 50 ಡಿ) 52

ಉತ್ತರ : (ಸಿ)

ವಿವರಣೆ : ಅಮೆರಿಕದಲ್ಲಿ 50 ರಾಜ್ಯಗಳಿವೆ, ಇದರ ರಾಜಧಾನಿ ವಾಷಿಂಗ್ಟನ್ ಡಿಸಿ. ಡಿಸಿ ಎಂದರೆ ಡಿಸ್ಟ್ರಿಕ್ಟ್‌ ಆಫ್ ಕೊಲಂಬಿಯಾ ಎಂದರ್ಥ. ಇದು ಪೊಟೋಮ್ಯಕ್ ನದಿಯ ತೀರದಲ್ಲಿದೆ. ಈ ನಗರವನ್ನು ಮೇರಿಲ್ಯಾಂಡ್ ಮತ್ತು ವರ್ಜಿನಿಯಾ ರಾಜ್ಯಗಳು ಸುತ್ತುವರೆದಿದೆ.

66. ಈ ಕೆಳಗಿನ ಯಾವ ನದಿ ‘ಏಂಜಲ್ ಜಲಪಾತ' ಹೊಂದಿದೆ?

ಎ) ಅಮೆಜಾನ್ ಬಿ) ಮಿಸಿಸಿಪ್ಪಿ

ಸಿ) ಚೂರನ್ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ : (ಸಿ)

ವಿವರಣೆ : ಓರಿನೊಕೊ ನದಿಯ ಉಪನದಿಯಾದ ಚೂರನ್ ವಿಶ್ವದ ಅತ್ಯಂತ ಎತ್ತರವಾದ ಏಂಜಲ್ ಜಲಪಾತವನ್ನು (974 ಮೀ.) ಗಯಾನ ಭೂಫಲಕದಲ್ಲಿ ನಿರ್ಮಾಣ ಮಾಡಿದೆ. ಇದು ದಕ್ಷಿಣ ಅಮೆರಿಕದ ವೆನಿಜುವೆಲಾದಲ್ಲಿದೆ.

67. ಸಮಭಾಜಕ ವೃತ್ತವನ್ನು ಈ ಕೆಳಗಿನವುಗಳಲ್ಲಿ 2 ಬಾರಿ ಹಾಯ್ದು ಹೋಗುವ ನದಿ ಯಾವುದು?

ಎ) ನೈಜರ್ ನದಿ ಬಿ) ಜಾಂಬೆಜಿ ನದಿ

ಸಿ) ಕಾಂಗೊ ನದಿ ಡಿ) ಆರೆಂಜ್ ನದಿ

ಉತ್ತರ : (ಸಿ)

ವಿವರಣೆ : ಕಾಂಗೊ ನದಿ. ಇದು ಮಧ್ಯ ಆಫ್ರಿಕಾದ ಅತಿಮುಖ್ಯ ನದಿ. ಈ ನದಿಯು ಉತ್ತರದ ಜಾಂಬಿಯಾದಲ್ಲಿ ಉಗಮಿಸಿ ಸುಮಾರು 4670 ಕಿ. ಮೀ. ಉದ್ದವಾಗಿ ಪಶ್ಚಿಮದ ಕಡೆಗೆ ಹರಿದು ಅಟ್ಲಾಂಟಿಕ್ ಸಾಗರವನ್ನು ಸೇರುವುದು. ಇದು ಸಮಭಾಜಕ ವೃತ್ತವನ್ನು 2 ಬಾರಿ ಹಾಯ್ದು ಹೋಗಿದೆ.

68. ‘ಆರ್ಟಿಸಿಯೆನ್ ಬಾವಿಗಳು’ ಈ ಕೆಳಗಿನ ಯಾವ ದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ?

ಎ) ಬ್ರೆಜಿಲ್ ಬಿ) ರಷ್ಯಾ

ಸಿ) ಆಸ್ಟ್ರೇಲಿಯಾ ಡಿ) ಆಫ್ರಿಕಾ

ಉತ್ತರ : (ಸಿ)

ವಿವರಣೆ : ಕೆಲವು ಕಡೆಗಳಲ್ಲಿ ಶಿಲಾಪದರುಗಳು ಬೋಗುಣಿಯಾಕಾರದಲ್ಲಿ ರಚನೆಯಾಗಿ ಒಂದು ಪ್ರವೇಶ್ಯ ಶಿಲಾ ಪದರಿನ ಮೇಲೆ ಹಾಗೂ ಕೆಳಗೆ ಅಪ್ರವೇಶ್ಯ ಶಿಲಾಪದರುಗಳಿರುತ್ತವೆ. ಇಂತಹ ಶಿಲಾಪದರಗಳಲ್ಲಿ ಸಂಗ್ರಹವಾದ ಅಂತರ್ಜಲವು ಸ್ವಾಭಾವಿಕವಾಗಿ ಹೊರಬೀಳಲಾರದು. ಇಂತಹ ಕಡೆ ಪ್ರವೇಶ್ಯ ಶಿಲೆಯವರೆಗೆ ರಂಧ್ರವನ್ನು ಕೊರೆದಾಗ ನೀರು ಹೊರಚಿಮ್ಮುವುದು. ಇವುಗಳನ್ನು ಆರ್ಟಿಸಿಯನ್ ಬಾವಿಗಳೆನ್ನುವರು.

69. ಏಷ್ಯಾದ ಅತ್ಯಂತ ಆಳವಾದ ಬಿಂದು ಯಾವುದು?

ಎ) ಮರಿಯಾನಾ ಕಂದಕ ಬಿ) ಡೆಡ್ ಸೀ (ಮೃತ್ಯು ಸಮುದ್ರ)

ಸಿ) ಟಿಬೆಟ್ ಡಿ) ಇಂಡೋನೇಷ್ಯಾ

ಉತ್ತರ: (ಬಿ)

ವಿವರಣೆ: ಸಮುದ್ರ ಮಟ್ಟಕ್ಕಿಂತ 1,401 ಅಡಿ ಎತ್ತರದಲ್ಲಿರುವ ಮೃತ್ಯು ಸಮುದ್ರ ಭೂಮಿಯ ಮೇಲಿನ ಆಳವಾದ ಪ್ರದೇಶಗಳಲ್ಲಿ ಒಂದಾಗಿದೆ. ಇದರ ಮೇಲ್ಮೈ ಮತ್ತು ಕರಾವಳಿಯ ಗಡಿ ಪೂರ್ವಕ್ಕೆ ಜೋರ್ಡಾನ್ ಮತ್ತು ಪಶ್ಚಿಮಕ್ಕೆ ಇಸ್ರೇಲ್ ದೇಶಗಳಿವೆ.

(ಪ್ರಶ್ನೋತ್ತರ ಸಂಯೋಜನೆ: www.iasjnana.com ಸಂಪರ್ಕಕ್ಕೆ: 9916399276)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT