ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3,484 DR ಹಾಗೂ CAR ಕಾನ್‌ಸ್ಟೇಬಲ್‌ಗಳ ನೇಮಕಾತಿ: ತೃತೀಯ ಲಿಂಗಿಗಳಿಗೂ ಅವಕಾಶ

Last Updated 13 ಸೆಪ್ಟೆಂಬರ್ 2022, 4:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3,484ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪೇದೆ (ಡಿಆರ್) ಹಾಗೂ ನಗರಸಶಸ್ತ್ರ ಮೀಸಲು ಪೊಲೀಸ್ (ಸಿಎಆರ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಸೋಮವಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪೊಲೀಸ್ ಇಲಾಖೆನೋಟಿಫಿಕೇಶನ್‌ನ್ನು ಪ್ರಕಟಿಸಲಿದೆ.

ಅರ್ಹ ಅಭ್ಯರ್ಥಿಗಳು ಇದೇ ತಿಂಗಳು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 31ರವರರೆಗೆ Ksp-recruitment.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯದ ಎಲ್ಲ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಯಲ್ಲಿ 2,996 ಸಾಮಾನ್ಯ ಪುರುಷ ಡಿಆರ್ ಹಾಗೂ ಸಿಎಆರ್ ಹುದ್ದೆಗಳಿವೆ. ಇದರೊಂದಿಗೆ ತೃತೀಯ ಲಿಂಗಿಗಳಿಗೂ (ಪುರುಷ)ಹೆಚ್ಚುವರಿಯಾಗಿ 68 ಹುದ್ದೆಗಳಿವೆ. ಯುವತಿಯರಿಗೆ ಅಥವಾ ಮಹಿಳೆಯರಿಗೆ ಹುದ್ದೆಗಳಿಲ್ಲ. ಹೈದರಾಬಾದ್ ಕರ್ನಾಟಕ ವಿಭಾಗದ 420 ಡಿಆರ್ ಹಾಗೂ ಸಿಎಆರ್ ಹುದ್ದೆಗಳಿವೆ.

ಎಸ್.ಎಸ್‌.ಎಲ್‌.ಸಿ ಅಥವಾ ತತ್ಸಮಾನ ಕನಿಷ್ಠ ಶೈಕ್ಷಣಿಕ ವಿದ್ಯಾಹರ್ತೆಯನ್ನು ಈ ಹುದ್ದೆಗಳಿಗೆ ನಿಗದಿಗೊಳಿಸಲಾಗಿದೆ. ಕನಿಷ್ಠ 18 ವರ್ಷ ವಯಸ್ಸು ಮೀರಿದವರು ಅರ್ಜಿ ಸಲ್ಲಿಸಬಹುದು. ಎಸ್‌ಸಿ, ಎಸ್‌ಟಿ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 27, ಸಾಮಾನ್ಯ ಅಭ್ಯರ್ಥಿಗಳಿಗೆ 25 ವಯಸ್ಸನ್ನು ನಿಗದಿಗೊಳಿಸಲಾಗಿದೆ.

ವೇತನ ಶ್ರೇಣಿಯೂ 23,500–47650 ಇರಲಿದೆ.

ಲಿಖಿತ ಪರೀಕ್ಷೆ ನಂತರ, ದೇಹದಾರ್ಢ್ಯತೆ ಪರೀಕ್ಷೆ ಇರುತ್ತದೆ. ಆ ನಂತರ ಮೆರಿಟ್ ಆಧಾರ ಹಾಗೂ ಮೀಸಲಾತಿ ಅನುಗುಣವಾಗಿ ಆಯ್ಕೆ ಪಟ್ಟಿ ‍ಪ್ರಕಟವಾಗುತ್ತದೆ.

ಯಾವ ಜಿಲ್ಲೆಗೆ ಹಾಗೂ ಕಮಿಷನರೇಟ್‌ಗೆ ಎಷ್ಟು ಹುದ್ದೆಗಳು ಮೀಸಲಿವೆ ಮತ್ತು ಇನ್ನಿತರ ಹೆಚ್ಚಿನ ಮಾಹಿತಿಗಳಿಗೆ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್https://recruitment.ksp.gov.in ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT