ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಪಿ ಆ್ಯಂಡ್ ಐಆರ್‌ಬಿ ಮತ್ತು ಕೆಐಎಸ್‌ಎಫ್ ಪರೀಕ್ಷೆ ಮಾದರಿ ಪ್ರಶ್ನೋತ್ತರ

ಕೆಎಸ್‌ಆರ್‌ಪಿ ಆ್ಯಂಡ್ ಐಆರ್‌ಬಿ ಮತ್ತು ಕೆಐಎಸ್‌ಎಫ್ ಪರೀಕ್ಷೆ
Last Updated 16 ಮಾರ್ಚ್ 2022, 16:16 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಎರಡೂ ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

ಭಾಗ – 13

1) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಪಶ್ಚಿಮ ಆಫ್ರಿಕಾದಲ್ಲಿರುವ ಸಿಯಾರೋಲಿಯೋನ್ ಎಂಬ ದೇಶದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ನಾಗರಿಕ ಯುದ್ಧ (ಸಿವಿಲ್ ವಾರ್) ನಡೆದಿತ್ತು. 2000ರಲ್ಲಿ ಆ ದೇಶಕ್ಕೆ ವಿಶ್ವ ಸಂಸ್ಥೆಯು ಶಾಂತಿ ಪಾಲನಾ ಪಡೆಯನ್ನು ಕಳುಹಿಸಿತ್ತು ಅದಕ್ಕೆ `ಆಪರೇಷನ್ ಕುಕ್ರಿ’ ಎಂದೂ ಕರೆಯಲಾಗಿತ್ತು.

2) ಹೈಟಿ ಬಂಡಾಯಗಾರ ಉಪಟಳಕ್ಕೆ ‘ಯೆಮನ್’ ದೇಶ ಸಿಲುಕಿದಾಗ ಆ ದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸಾವಿರಾರು ಭಾರತೀಯರನ್ನು (2015ರಲ್ಲಿ)`ಆಪರೇಷನ್ ರಾಹತ್’ ಮೂಲಕ ಸ್ವದೇಶಕ್ಕೆ ಕರೆ ತರಲಾಗಿತ್ತು.

3) ಆಪರೇಷನ್ ಗಂಗಾ ಮೂಲಕ 18 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತಕ್ಕೆ ಕರೆತರಲಾಯಿತು.

4) ನಾಲ್ವರು ಕೇಂದ್ರ ಸಚಿವರಾದ ಹರ್ದಿಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿ.ಕೆ. ಸಿಂಗ್ ಅವರನ್ನು ಸಮನ್ವಯಕ್ಕೆ ಸಹಾಯ ಮಾಡಲು ಉಕ್ರೇನ್‌ ಆಸುಪಾಸಿನ ರಾಷ್ಟ್ರಗಳಿಗೆ ಕಳುಹಿಸಲಾಗಿತ್ತು.

ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿದ್ದಾವೆ?
ಎ) ಹೇಳಿಕೆ 1, 2, 3 ಮಾತ್ರ ಸರಿಯಾಗಿದೆ.
ಬಿ) ಹೇಳಿಕೆ 1, 2, 3, ಮತ್ತು 4 ಸರಿಯಾಗಿದೆ
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ) ಹೇಳಿಕೆ 1, 2, 4 ಮಾತ್ರ ಸರಿಯಾಗಿವೆ.

ಉತ್ತರ: ಬಿ

2) ಈ ಕೆಳಗೆ ಉಲ್ಲೇಖಿಸಿರುವ ಉಕ್ರೇನ್ ದೇಶದ ಯಾವ ನಗರಗಳಲ್ಲಿ ಅಣು ರಿಯಾಕ್ಟರ್‌ಗಳಿವೆ?

1) ರಿವ್ನೆ 2) ಖ್ಮೆಲ್ನಿಟೇಸ್ಕಿ 3) ಜಿಪೋರೆಝಿಯಾ 4)ಕೀವ್

ಉತ್ತರ ಸಂಕೇತಗಳು
ಎ) 1, 2, 3 ಬಿ) 1, 2, 3, ಮತ್ತು 4
ಸಿ) 1, 2, 4. ಡಿ) 2, 3 4

ಉತ್ತರ:

3) ಪಾಕಿಸ್ತಾನದಲ್ಲಿನ ಪಂಜಾಬ್ ಪ್ರಾಂತ್ಯದ ‘ಮಿಯಾನ್ ಚುನ್ನು’ ಇತ್ತೀಚೆಗೆ ಏಕೆ ಸುದ್ದಿಯಲ್ಲಿತ್ತು?

ಎ) ಭಾರತೀಯ ಸೇನೆಯ ಕ್ಷಿಪಣಿಯು ಪಾಕಿಸ್ತಾನದ ಗಡಿಯೊಳಗೆ 124 ಕಿ.ಮೀ. ದೂರದಲ್ಲಿರುವ ಈ ಪ್ರದೇಶದಲ್ಲಿ ಬಿದ್ದಿದೆ.
ಬಿ) ಪ್ರಾಚೀನ ಕಾಲದ ಹರಪ್ಪಾ ಸಂಸ್ಕೃತಿಯ ನಿವೇಶನವೊಂದು ಪತ್ತೆಯಾಗಿದೆ.
ಸಿ) ಅಮೆರಿಕದ ಬಾಂಬ್ ಒಂದು ಪತ್ತೆಯಾಗಿದೆ
ಡಿ) ಅಲ್‌ಖೈದಾ ಭಯೋತ್ಪಾದಕನೊಬ್ಬನನ್ನು ಸ್ಥಳೀಯ ಜನರೇ ಸೇರಿ ಹತ್ಯೆ ಮಾಡಿದ್ದಾರೆ.

ಉತ್ತರ:

4) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಪ್ರತಿವರ್ಷ ಮಾ 8 ರಂದು ಮಹಿಳಾ ದಿನ ಆಚರಿಸಲಾಗುತ್ತದೆ. 2022ರಲ್ಲಿ ‘ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ‘(Gender equality today for a sustainable tomorrow) ಎನ್ನುವ ಧ್ಯೇಯವಾಕ್ಯದೊಂದಗೆ ಮಹಿಳಾ ದಿನವನ್ನು ಆಚರಿಸಲಾಯಿತು.

2) ಮಹಿಳಾ ಉದ್ಯೋಗಿಗಳೇ ಪ್ರತಿಯೊಂದು ಕೆಲಸ ನಿರ್ವಹಿಸುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ರೈಲು ನಿಲ್ದಾಣವು 'ದಕ್ಷಿಣ ಭಾರತದ ಮೊದಲ ಮಹಿಳಾ ರೈಲು ನಿಲ್ದಾಣ' ಎಂದು ಘೋಷಿಸಲ್ಪಟ್ಟಿದೆ.

3) ಭಾರತದ ಮೊದಲ ಸಂಪೂರ್ಣ ಮಹಿಳಾ ಸ್ವಾಮ್ಯದ ಕೈಗಾರಿಕಾ ವಸಾಹತು ಹೈದರಾಬಾದ್‌ನಲ್ಲಿ ಕಾರ್ಯಾರಂಭ ಮಾಡಿದೆ.

4) 1975ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ಮಾರ್ಚ್‌ 8 ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆಗೆ ತಂದಿತು. ಅದರೆ. 1908ರ ಫೆಬ್ರವರಿಯಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸಲಾಗಿತ್ತು.

ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1, 2, 3 ಮಾತ್ರ ಸರಿಯಾಗಿದೆ.
ಬಿ) ಹೇಳಿಕೆ 1, 2, 3, ಮತ್ತು 4 ಸರಿಯಾಗಿದೆ
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ) ಹೇಳಿಕೆ 1, 2, 4 ಮಾತ್ರ ಸರಿಯಾಗಿವೆ.

ಉತ್ತರ: ಬಿ

5) ಈಜಿಫ್ಟ್‌ನ ಲಕ್ಸರ್‌ ನಗರದ ಪಶ್ಚಿಮ ದಂಡೆಯಲ್ಲಿ 3 ಸಾವಿರ ವರ್ಷಗಳಷ್ಟು ಹಳೆಯದಾದ ನಗರವೊಂದು ಪತ್ತೆಯಾಗಿದೆ. ಅದರ ಹೆಸರೇನು?

ಎ)ಫೆರೊಬಿ)ಎಟನ್ (ATEN) ಸಿ) ಕೈರೊ ಡಿ)ಮೈಘರ್

ಉತ್ತರ:

6) ಈ ಕೆಳಗಿನ ಯಾವ ದೇಶದಲ್ಲಿ ಕೈದಿಗಳ ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರ ಅವರು ತಮ್ಮ ಜೀವನ ಮುನ್ನಡೆಸಲು ಹಾಗೂ ಭವಿಷ್ಯದಲ್ಲಿ ಅಪರಾಧಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಉದ್ದೇಶಕ್ಕಾಗಿ ಇತ್ತೀಚೆಗೆ ಸ್ಮಾರ್ಟ್‌ ಜೈಲನ್ನು ನಿರ್ಮಾಣ ಮಾಡಲಾಗಿದೆ?

ಎ) ಯಮನ್ ಬಿ) ಈಜಿಫ್ಟ್‌ ಸಿ) ಬ್ರಿಟನ್ ಡಿ) ಭಾರತ

ಉತ್ತರ: ಸಿ

7) ವಿತ್ತೀಯ ಹೊಣೆಗಾರಿಕೆ ನಿಯಮಗಳನ್ನು ಅಳವಡಿಸಿಕೊಂಡ ದೇಶದ ಮೊದಲ ಸ್ಥಳೀಯ ಆಡಳಿತ ಸಂಸ್ಥೆ ಯಾವುದು?

ಎ) ಕಲಬುರ್ಗಿ ಮಹಾನಗರ ಪಾಲಿಕೆ ಬಿ) ಮುಂಬೈ ಮಹಾನಗರ ಪಾಲಿಕೆ

ಸಿ) ಅಹಮದಾಬಾದ್ ಮಹಾನಗರ ಪಾಲಿಕೆ ಡಿ) ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ

ಉತ್ತರ: ಡಿ

8) ಯೂನ್ ಸುಕ್-ಯೋಲ್ ಯಾವ ದೇಶದ ಅಧ್ಯಕ್ಷರು ?

ಎ) ಉತ್ತರ ಕೊರಿಯಾ ಬಿ) ಥಾಯ್ಲೆಂಡ್‌

ಸಿ) ಜಪಾನ್ ಡಿ) ದಕ್ಷಿಣ ಕೊರಿಯಾ

ಉತ್ತರ: ಡಿ

9) ಭಗವಾನ್ ಬುದ್ಧ ಒರಗಿಕೊಂಡಿರುವ ಭಂಗಿಯ ಬೃಹತ್‌ ಪ್ರತಿಮೆಯನ್ನು ಎಲ್ಲಿ ನಿರ್ಮಿಸಲಾಗುತ್ತಿದೆ?

ಎ) ಬೋಧ್‌ಗಯಾ ಬಿ) ವಾರಣಾಸಿ ಸಿ) ಜೈಪುರ ಡಿ) ಮಾಧೇರ

ಉತ್ತರ:

***
ನಿಮಗಿದು ಗೊತ್ತೇ?

ಈಜಿಫ್ಟ್‌ನ ಸ್ಪಿಂಕ್ಸ್‌

ಕೈರೊದಿಂದ ಸುಮಾರು 12 ಕಿ.ಮೀ ದೂರದಲ್ಲಿ ಈಜಿಫ್ಟ್‌ ಮರುಭೂಮಿಯ ಮಧ್ಯೆ ದೊಡ್ಡ ಸ್ಪಿಂಕ್ಸ್‌ (Sphinx) ಇದೆ. ಇದು ಗಿಜಾ(Giza)ದಲ್ಲಿರುವ ಮೂರು ದೊಡ್ಡ ಪಿರಮಿಡ್‌ಗಳನ್ನು ಕಾಯುತ್ತಿರುವ ನಂಬಿಕೆ ಅಲ್ಲಿಯ ಜನರದ್ದು. ಈಜಿಫ್ಟ್‌ನ ಮಹಾನ್ ಪಿರಮಿಡ್‌ಗಳ ನಿರ್ಮಾಣದ ನಂತರ, ಉಳಿದ ಬೆಟ್ಟಗಳ ಬಂಡೆಗಳಿಂದ ಸ್ಪಿಂಕ್ಸ್‌ ಕೆತ್ತಲಾಯಿತು. ಇದು ಸಿಂಹದ ದೇಹ ಮತ್ತು ಮಾನವ ತಲೆಯನ್ನು ಹೊಂದಿದೆ. ಈ ಸ್ಪಿಂಕ್ಸ್‌ನ ಮುಖ ಮತ್ತು ಕಣ್ಣುಗಳಲ್ಲಿ ಒಂದು ನಿಗೂಢ ಭಾವನೆ ವ್ಯಕ್ತವಾಗುತ್ತದೆ. ಅದು ಹೆಗ್ಗಳಿಕೆಯ ಭಾವನೆಯನ್ನು ಹೊರಸೂಸುತ್ತಾ ಮರುಭೂಮಿಯನ್ನು ದಿಟ್ಟಿಸಿ ನೋಡುತ್ತಿದೆ.

ಈ ಸ್ಫಿಂಕ್ಸ್‌ನ ಎತ್ತರ 20 ಮೀಟರ್‌ಗಳು. ಅದರ ಉದ್ದ 70 ಮಿಟರ್‌ಗಳು. ಸುಮಾರು 5000 ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಯಿತೆಂದು ಹೇಳಲಾಗುತ್ತದೆ. ನಾಲ್ಕನೇ ಈಜಿಫ್ಟಿಯನ್ವ ವಂಶದ ದೊರೆ ಚೆಫ್ರೆನ್ ( chephren) ಮುಖವನ್ನು ಹೋಲುವಂತೆ ಈ ಸ್ಪಿಂಕ್ಸ್‌ ಅನ್ನು ಕೆತ್ತಾಲಾಗಿದೆಯೆಂದು ಊಹಿಸಲಾಗಿದೆ.

ಈ ಸ್ಪಿಂಕ್ಸ್‌ ನಿರ್ಮಿಸಿದ್ದು ಏಕೆ?

ವಿಕಿಪಿಡಿಯಾ ಪ್ರಕಾರ ಸ್ಪಿಂಕ್ಸ್‌ ಎಂದರೆ ಸಿಂಹನಾರಿ. ಇದೊಂದು ಕಾಲ್ಪನಿಕ ರೂಪ. ಸ್ಪಿಂಕ್ಸ್ ಒಬ್ಬಳು ರಕ್ಕಸಿಯೆಂದು ಪ್ರಾಚೀನ ಕಾಲದ ಜನರು ನಂಬಿದ್ದರು. ಈ ರಕ್ಕಸಿಗೆ, ಸಿಂಹದ ದೇಹ. ಎರಡು ರೆಕ್ಕೆಗಳು ಹಾಗೂ ಮಹಿಳೆಯ ತಲೆ ಇತ್ತೆಂದು ಗ್ರೀಕರು ಭಾವಿಸಿದ್ದರು. ಆದರೆ ಈಜಿಪ್ಟಿಯನ್ನರ ಕಲ್ಪನೆಯೇ ಬೇರೆಯಾಗಿತ್ತು. ಸ್ಪಿಂಕ್ಸ್, ಸಿಂಹದ ದೇಹ ಮತ್ತು ಗಂಡಸಿನ ಎದೆ ಮತ್ತು ತಲೆಯನ್ನು ಹೊಂದಿತ್ತೆಂದು ನಂಬಿದ್ದರು. ಆದರೆ ಸ್ಪಿಂಕ್ಸ್‌ಗೆ ರೆಕ್ಕೆಗಳಿರಲಿಲ್ಲ ಎಂದಿದ್ದರು. ಪಿರಮಿಡ್‌ಗಳ ಸುತ್ತಮುತ್ತಲಿನ ಸಮಾಧಿ ಭೂಮಿಯಿಂದ ಭೂತ-ಪ್ರೇತಗಳ ಬಾಧೆ ಉಂಟಾಗದಂತೆ ಈ ಸ್ಪಿಂಕ್ಸ್ ನೋಡಿಕೊಳ್ಳುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು.

ಗಿಜಾದಲ್ಲಿರುವ ದೊಡ್ಡ ಸ್ಪಿಂಕ್ಸ್ ಅಲ್ಲದೇ ಈಜಿಫ್ಟ್‌ನಲ್ಲಿರುವ ಇತರ ಸ್ಪಿಂಕ್ಸ್‌ಗಳ ತಲೆಗಳು, ಈಜಿಫ್ಟ್‌ ಅನ್ನು ಆಳಿದ ವಿವಿಧ ದೊರೆಗಳ ತಲೆಗಳನ್ನು ಹೋಲುತ್ತವೆ. ದೊರೆಗಳನ್ನು ಸೂರ್ಯದೇವನ ವಂಶದಿಂದ ಬಂದವರೆಂದು ಪ್ರಾಚೀನ ಈಜಿಫ್ಟ್‌ ನವರು ಹೇಳುತ್ತಿದ್ದರು. ಒಬ್ಬ ದೊರೆ ಸತ್ತರೆ ಆತನೇ ಸೂರ್ಯನ ಸ್ಥಾನ ಪಡೆಯುವನೆಂಬ ನಂಬಿಕೆ ಇತ್ತು. ದೊರೆಗಳಿಗೆ ನಾನಾ ಕಾಡು ಮೃಗಗಳಿಗೆ ಇರುವಷ್ಟು ಶಕ್ತಿ ಇತ್ತೆಂದು ಈಜಿಫ್ಟ್‌ನ ಪ್ರಾಚೀನ ಜನರು ಭಾವಿಸಿದ್ದರು. ಆದ್ದರಿಂದ ಅರ್ಧ ಮಾನವ ಮತ್ತು ಅರ್ಧ ಮೃಗದ ಆಕೃತಿಯಲ್ಲಿ ಅವರ ಪ್ರತಿಮೆಗಳನ್ನು ಕೆತ್ತಲಾಗುತ್ತಿತ್ತು.

ಮಹಿಳೆಯ ಮುಖವನ್ನು ಹೊಂದಿರುವ ಒಂದು ಸ್ಪಿಂಕ್ಸ್ ಕೂಡಾ ಈಜಿಫ್ಟ್‌ನಲ್ಲಿದೆ. ಸಿಂಹಾಸನವನ್ನು ವಶಪಡಿಸಿಕೊಂಡು ರಾಜ್ಯಭಾರ ಮಾಡಿದ ಹ್ಯಾಟ್ಶೆಪ್ಸಟ್‌ (Hatshepsut) ಎಂಬ ರಾಣಿಗಾಗಿ ಈ ಸ್ಪಿಂಕ್ಸ್ ಅನ್ನು ಕೆತ್ತಲಾಗಿತ್ತು. ಈ ಸ್ಪಿಂಕ್ಸ್‌ ಮುಖಕ್ಕೆ ಒಂದು ಗಡ್ಡವಿದೆ. ರಾಣಿಯು ಹೊಂದಿದ್ದ ಪುರುಷ ಶಕ್ತಿಯ ಸಂಕೇತವಾಗಿ ಈ ಸ್ಪಿಂಕ್ಸ್ ಗಡ್ಡವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT