ಶನಿವಾರ, ಜೂನ್ 25, 2022
26 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ–1

ಈಗಾಗಲೇ ತಿಳಿದಿರುವಂತೆ 3533 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (ಪುರುಷ/ಮಹಿಳೆ) ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ 100 ಪ್ರಶ್ನೆಗಳು ಇರಲಿದ್ದು, ಒಂದು ಸರಿ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. 1 ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಪರೀಕ್ಷೆಯ ಅವಧಿ 1 ಗಂಟೆ 30 ನಿಮಿಷ ಇರುತ್ತದೆ.

ಪರೀಕ್ಷೆಯು ಸಾಮಾನ್ಯ ಜ್ಞಾನ, ಭಾರತ ಸಂವಿಧಾನ, ಇತಿಹಾಸ (ಭಾರತ ಮತ್ತು ಕರ್ನಾಟಕ), ಭೂಗೋಳ (ಭಾರತ ಮತ್ತು ಕರ್ನಾಟಕ), ವಿಜ್ಞಾನ ಮತ್ತು ತಂತ್ರಜ್ಞಾನ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತದ ಆಡಳಿತ, ಕರ್ನಾಟಕ ಸರ್ಕಾರ ಮತ್ತು ರಾಜಕೀಯ, ಅರ್ಥಶಾಸ್ತ್ರ, ನೀತಿ ಶಿಕ್ಷಣ, ಪ್ರಚಲಿತ ವಿದ್ಯಮಾನಗಳು, ಮಾನಸಿಕ ಸಾಮರ್ಥ್ಯಕ್ಕೆ ಲೆಕ್ಕಗಳನ್ನು ಆಧರಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಈ ನಿಟ್ಟಿನಲ್ಲಿ ಈ ಮೇಲ್ಕಂಡ ವಿಷಯಗಳನ್ನು ಆಧರಿಸಿ, ಮಾದರಿ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದ್ದು, ಮರುದಿನ ಆ ಪ್ರಶ್ನೆಗಳ ಕೀ ಉತ್ತರಗಳನ್ನು ಪ್ರಕಟಿಸಲಾಗುವುದು.

1.‘ಕಳಸಾ ಬಂಡೂರಿ’ ವಿವಾದ ಯಾವ ರಾಜ್ಯಗಳ ನಡುವೆ ನಡೆಯುತ್ತಿದೆ?

ಎ) ಕರ್ನಾಟಕ, ಗೋವಾ ಮತ್ತು ಕೇರಳ

ಬಿ) ಕರ್ನಾಟಕ,ಮಹಾರಾಷ್ಟ್ರ ಮತ್ತು ಗೋವಾ

ಸಿ) ಕರ್ನಾಟಕ, ಗೋವಾ ಮತ್ತು ತಮಿಳುನಾಡು

ಡಿ) ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ

2. ಮಹಾತ್ಮಗಾಂಧೀಜಿ ಅವರ ‘ರಾಜಕೀಯ ಗುರು’ ಎಂದು ಪ್ರಸಿದ್ಧರಾದವರು ಯಾರು?

ಎ) ಗೋಪಾಲಕೃಷ್ಣ ಗೋಖಲೆ

ಬಿ) ದಾದಾಭಾಯಿ ನವರೋಜಿ

ಸಿ) ಬಾಲಗಂಗಾಧರ ತಿಲಕ್

ಡಿ) ರವೀಂದ್ರನಾಥ ಟ್ಯಾಗೋರ

3. ‘ಹಂದಿ ಜ್ವರ’ಕ್ಕೆ ಕಾರಣವಾಗುವ ವೈರಸ್ ಯಾವುದು?

ಎ) H1N1 ವೈರಸ್

ಬಿ) ಎಂಟಿರೊ ವೈರಸ್

ಸಿ) ಮೈಕ್ಲೊ ವೈರಸ್

ಡಿ) ವರಿಸ್ಸೆಲ್ಲಾ ವೈರಸ್

4.ಕರ್ನಾಟಕ ಸಂಗೀತದ ಪಿತಾಮಹ ಎಂದು ಪ್ರಸಿದ್ಧರಾದವರು ಯಾರು?

ಎ) ಕನಕದಾಸರು

ಬಿ) ಪುರಂದರದಾಸರು

ಸಿ) ತುಳಸಿದಾಸರು

ಡಿ)ರಾಮದಾಸರು

5.ಈ ಕೆಳಗಿನವುಗಳಲ್ಲಿ ಯಾವುದು ಕಲ್ಲಿದ್ದಲಿನ ವಿಧ ಅಲ್ಲ?

ಎ) ಅಂತ್ರಾಸೈಟ್

ಬಿ) ಬಿಟುಮಿನಸ್

ಸಿ) ಲಿಗ್ನೈಟ್

ಡಿ) ಹೆಮಟೈಟ್

6. ‘ಆದಿಗ್ರಂಥ’ವನ್ನು ರಚಿಸಿದವರು?

ಎ) ಗುರುನಾನಕ್

ಬಿ) ಗುರು ಅಮರದಾಸ್

ಸಿ) ಗುರು ರಾಮದಾಸ್

ಡಿ) ಗುರು ಅರ್ಜುನ್‌ದೇವ್

7.ಜೈನಧರ್ಮದ ಕೊನೆಯ ತೀರ್ಥಂಕರ ಯಾರು?

ಎ) ಅರಿಷ್ಟನೇಮಿ

ಬಿ) ವೃಷಭನಾಥ

ಸಿ) ಪಾರ್ಶ್ವನಾಥ

ಡಿ) ಮಹಾವೀರ

8. ನೆಫ್ರಾನ್‌ಗಳು ಈ ಕೆಳಗಿನ ಯಾವ ಅಂಗಕ್ಕೆ ಸಂಬಂಧಿಸಿವೆ?

ಎ) ಹೃದಯ

ಬಿ) ಮೂತ್ರಕೋಶ

ಸಿ) ಪಿತ್ತಕೋಶ

ಡಿ) ಮೆದುಳು

9. ಕರ್ನಾಟಕವು ಒಟ್ಟು ಎಷ್ಟು ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿದೆ?

ಎ) 4 ಬಿ) 5

ಸಿ) 6 ಡಿ) 7

10. ‘ಕರ್ನಾಟಕದಲ್ಲಿ ಸಮಗ್ರ ಪಂಚಾಯತ್ ರಾಜ್  ಕಾಯ್ದೆ’ ಜಾರಿಯಾಗಿದ್ದು ಯಾವ ವರ್ಷದಲ್ಲಿ?

ಎ) 1993 ಬಿ) 1995

ಸಿ) 2005 ಡಿ) 2010

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು