ಸೋಮವಾರ, ಜೂನ್ 21, 2021
21 °C

ಪ್ರಶ್ನೋತ್ತರ: ಸಾಮಾನ್ಯ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

41) ‘ಭಾರತೀಯ ಪುನರುಜ್ಜೀವನದ ಧ್ರುವತಾರೆ’ ಎಂದು ಯಾರನ್ನು ಕರೆಯುತ್ತಾರೆ?

ಎ) ರಾನಡೆ ಬಿ) ರಾಜಾರಾಮ್ ಮೋಹನ್ ರಾಯ್‌

ಸಿ) ಜ್ಯೋತಿಬಾ ಫುಲೆ ಡಿ) ದಯಾನಂದ ಸರಸ್ವತಿ

ಉತ್ತರ: (ಬಿ)

ವಿವರಣೆ: ರಾಜಾರಾಮ್‌ ಮೋಹನ್ ರಾಯರನ್ನು ಭಾರತೀಯ ಪುನರುಜ್ಜೀವನದ ಪಿತಾಮಹ ಮತ್ತು ಭಾರತೀಯ ಪುನರುಜ್ಜೀವನದ ಧ್ರುವತಾರೆ ಎಂದು ಕರೆಯುತ್ತಾರೆ.

42) ಸ್ವಾಮಿ ದಯಾನಂದ ಸರಸ್ವತಿಯವರು ಎಲ್ಲಿ ಜನಿಸಿದರು?

ಎ) ಒರಿಸ್ಸಾ ಬಿ) ಬಿಹಾರ

ಸಿ) ಗುಜರಾತ್ ಡಿ) ಪಶ್ಚಿಮ ಬಂಗಾಳ

ಉತ್ತರ : (ಸಿ)

ವಿವರಣೆ : ದಯಾನಂದ ಸರಸ್ವತಿಯವರು ಗುಜರಾತ್‌ನ ತಂಕರಾ ಎಂಬಲ್ಲಿ 1824ರಲ್ಲಿ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. 1875ರಲ್ಲಿ ದಯಾನಂದ ಸರಸ್ವತಿಯವರು ಆರ್ಯ ಸಮಾಜವನ್ನು ಮುಂಬೈಯಲ್ಲಿ ಸ್ಥಾಪಿಸಿದರು.

43) ಭಾರತದ ಸ್ಥಳೀಯ ಸರ್ಕಾರಗಳ ಪಿತಾಮಹ ಯಾರು ?

ಎ) ಲಾರ್ಡ್ ರಿಪ್ಪನ್ ಬಿ) ಲಾರ್ಡ್ ಲಿಟ್ಟನ್

ಸಿ) ವಾರನ್ ಹೇಸ್ಟಿಂಗ್ಸ್ ಡಿ) ಲಾರ್ಡ್ ಕಾರ್ನ್‌ವಾಲೀಸ್

ಉತ್ತರ : (ಎ)

ವಿವರಣೆ : 1882ರ ಲಾರ್ಡ್ ರಿಪ್ಪನ್ ನಿರ್ಣಯ ಭಾರತದ ಸ್ಥಳೀಯ ಸರ್ಕಾರಗಳಿಗೆ ಬಹಳಷ್ಟು ಪ್ರೋತ್ಸಾಹ ನೀಡಿತ್ತು. ಅದನ್ನು ಮ್ಯಾಗ್ನಕಾರ್ಟ್ ಸನ್ನದು ಎಂದು ಕರೆಯಲಾಗಿದ್ದು, ಸ್ಥಳೀಯ ಸರ್ಕಾರದ ಬೆಳವಣಿಗೆಯಲ್ಲಿ ಒಂದು ಮೈಲಿಗಲ್ಲಾಗಿದೆ. ಲಾರ್ಡ್ ರಿಪ್ಪನ್ ತಾಲ್ಲೂಕು ಮತ್ತು ಜಿಲ್ಲಾ ಬೋರ್ಡ್‌ಗಳನ್ನು ಸ್ಥಾಪಿಸುವಂತೆ ತಿಳಿಸಿದರು. ಅಲ್ಲಿ ಚುನಾಯಿತ ಪ್ರತಿನಿಧಿಗಳು ಬಹುಸಂಖ್ಯಾತರಾಗಿರಬೇಕೆಂದು 1/3 ಭಾಗಕ್ಕಿಂತ ಹೆಚ್ಚಾಗಿ ಅಧಿಕಾರೇತರರು ಮೀರಬಾರದೆಂದು ಹೇಳಿದರು. ಪ್ರಾಂತೀಯ ಸರ್ಕಾರಗಳು ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸು ನೆರವು ಕೊಡುವಂತೆ ಆದೇಶಿಸಿದರು.

44) ಭಾರತದಲ್ಲಿ ಯಾವ ವೈಸ್‌ರಾಯ್‌ ಕಾಲದಲ್ಲಿ ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ಅನ್ನು ಸ್ಥಾಪಿಸಲಾಯಿತು?

ಎ) ಲಾರ್ಡ್ ಡಫರಿನ್ ಬಿ) ಲಾರ್ಡ್ ರಿಪ್ಪನ್‌

ಸಿ) ಲಾರ್ಡ್ ಕ್ಯಾನಿಂಗ್ ಡಿ) ಲಾರ್ಡ್ ಹಾರ್ಡಿಂಜ್ I

ಉತ್ತರ : (ಎ)

ವಿವರಣೆ : ಭಾರತದಲ್ಲಿ ವೈಸ್‌ರಾಯ್‌ರಾಗಿದ್ದ ಲಾರ್ಡ್ ಡಫರಿನ್‌ನ ಕಾಲದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಯಿತು. 27-12-1885ರಂದು ಬಾಂಬೆ (ಈಗಿನ ಮುಂಬೈ)ಯಲ್ಲಿ ಮೊದಲ ಕಾಂಗ್ರೆಸ್ ಅಧಿವೇಶನ ನಡೆಯಿತು. ಉಮೇಶ್ ಚಂದ್ರ ಬ್ಯಾನರ್ಜಿಯವರನ್ನು ಮೊದಲ ಅಧ್ಯಕ್ಷರನ್ನಾಗಿ ಆರಿಸಲಾಯಿತು.

45) ಸಮಾಜದ ವ್ಯವಸ್ಥೆಯ ಸುಧಾರಣೆಗಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪ್ರತಿಪಾದಿಸಿದ ಸಮಾಜ ಯಾವುದು?

ಎ) ಬ್ರಹ್ಮೊ ಸಮಾಜ ಬಿ) ಸತ್ಯಶೋಧಕ ಸಮಾಜ
ಸಿ) ಆರ್ಯ ಸಮಾಜ ಡಿ) ರಾಮಕೃಷ್ಣ ಮಿಷನ್

ಉತ್ತರ : (ಬಿ)

ವಿವರಣೆ : ಸತ್ಯಶೋಧಕ ಸಮಾಜವನ್ನು 1873ರಲ್ಲಿ ಜ್ಯೊತಿರಾವ್ ಫುಲೆಯವರು ಪುಣೆ, ಮಹಾರಾಷ್ಟ್ರದಲ್ಲಿ ಸ್ಥಾಪಿಸಿದರು.

46) ‘ಕ್ರಾಂತಿಕಾರಿ ಸನ್ಯಾಸಿ’ ಎಂದು ಯಾರನ್ನು ಕರೆಯುತ್ತಾರೆ?

ಎ) ದಯಾನಂದ ಸರಸ್ವತಿ ಬಿ) ರಾಮಕೃಷ್ಣ ಪರಮಹಂಸ

ಸಿ) ಸ್ವಾಮಿ ವಿವೇಕಾನಂದ ಡಿ) ಜ್ಯೋತಿ ಬಾ ಫುಲೆ

ಉತ್ತರ : (ಸಿ)

ವಿವರಣೆ: ವಿವೇಕಾನಂದರು ಸ್ವಾತಂತ್ರ‍್ಯ ಚಳವಳಿಗೆ ತಮ್ಮ ಮಾತುಗಳಿಂದಲೇ ಯುವ ಸ್ವಾತಂತ್ರ‍್ಯ ಹೋರಾಟಗಾರರಿಗೆ ಪ್ರೇರಣಾಶಕ್ತಿಯಾಗಿ ನಿಂತರು. ಆದ್ದರಿಂದ, ಇವರನ್ನು ‘ಕ್ರಾಂತಿಕಾರಿ ಸನ್ಯಾಸಿ’ ಎಂದು ಕರೆಯುತ್ತಾರೆ. ಸ್ವಾಮಿ ವಿವೇಕಾನಂದರವರು 12 ಜನವರಿ 1863 ರಂದು ವಿಶ್ವನಾಥದತ್ತ ಹಾಗೂ ಭುವನೇಶ್ವರಿ ದಂಪತಿಗೆ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಇವರು ರಾಮಕೃಷ್ಣ ಮಿಷನ್‌ ಅನ್ನು 1 ಮೇ 1897ರಲ್ಲಿ ಸ್ಥಾಪಿಸಿದರು.

47) ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು?

ಎ) ಸ್ವಾಮಿ ದಯಾನಂದ ಸರಸ್ವತಿ

ಬಿ) ಸ್ವಾಮಿ ವಿವೇಕಾನಂದ

ಸಿ) ಕೇಶವಚಂದ್ರ ಸೇನ್

ಡಿ) ಈಶ್ವರ್ ಚಂದ್ರ ವಿದ್ಯಾಸಾಗರ

ಉತ್ತರ : (ಎ)

ವಿವರಣೆ : ಆರ್ಯ ಸಮಾಜವು 10, ಏಪ್ರಿಲ್ 1875 ರಂದು ಮುಂಬೈನಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರಿಂದ ಸ್ಥಾಪಿಸಲ್ಪಟ್ಟಿತು. ಆರ್ಯ ಸಮಾಜದ ಸದಸ್ಯರು ದೇವರು ಒಬ್ಬ ನಿರ್ಗುಣನೆಂದು ನಂಬಿದ್ದರು. ಆರ್ಯ ಸಮಾಜದ ಮತ್ತೊಂದು ಶಾಖೆಯನ್ನು ಲಾಹೋರ್‌ನಲ್ಲಿ ಸ್ಥಾಪಿಸಲಾಯಿತು. ದಯಾನಂದ ಸರಸ್ವತಿಯವರು 1883 ಅಜ್ಮೇರ್‌ನಲ್ಲಿ ಮರಣ ಹೊಂದಿದರು.

48) ಈ ಕೆಳಗಿನವರಲ್ಲಿ ಯಾರು ಮಂದಗಾಮಿಗಳ ಗುಂಪಿಗೆ ಸೇರಿದ್ದಾರೆ?

ಎ) ಎಸ್.ಎನ್. ಬ್ಯಾನರ್ಜಿ ಬಿ) ಅರವಿಂದ ಘೋಷ್‌

ಸಿ) ಬಿಪಿನ್ ಚಂದ್ರಪಾಲ್ ಡಿ) ಬಾಲಗಂಗಾಧರ್ ತಿಲಕ್

ಉತ್ತರ : (ಎ)

ವಿವರಣೆ : 1885 ರಿಂದ 1905 ರವರೆಗೆ ಕಾಂಗ್ರೆಸ್ ನಾಯಕತ್ವವು ಮಂದಗಾಮಿಗಳ ನಿಯಂತ್ರಣದಲ್ಲಿ ಇದ್ದಿದ್ದರಿಂದ ಈ ಹಂತದ ಕಾಂಗ್ರೆಸ್‌ನ ಚಟುವಟಿಕೆಯ ಕಾಲವನ್ನು ಮಂದಗಾಮಿಗಳ ಯುಗ ಅಥವಾ ಉದಾರ ರಾಷ್ಟ್ರೀಯತಾ ವಾದದ ಯುಗವೆಂದು ಕರೆಯುತ್ತಾರೆ. ಉದಾರವಾದದ ನಾಯಕರುಗಳೆಂದರೆ ದಾದಾ ಭಾಯಿ ನವರೋಜಿ, ಎಸ್.ಎನ್. ಬ್ಯಾನರ್ಜಿ, ಫಿರೋಜ್ ಷಾ ಮೆಹ್ತಾ, ಮದನ ಮೋಹನ ಮಾಳವೀಯ, ಗೋಪಾಲಕೃಷ್ಣ ಗೋಖಲೆ, ಎಂ.ಜಿ. ರಾನಡೆ ಮುಂತಾದವರು.

49) ಮಂದಗಾಮಿಗಳ ಯಾವ ಮುಖಂಡನನ್ನು ‘ಅನಭಿಷಕ್ತ ದೊರೆ’ಯೆಂದು ಕರೆಯಲಾಗಿದೆ?

ಎ) ಗೋಪಾಲ ಕೃಷ್ಣ ಗೋಖಲೆ

ಬಿ) ಆರ್.ಸಿ. ದತ್ತ

ಸಿ) ಪಿ.ಆರ್. ನಾಯ್ಡು

ಡಿ) ಮದನ ಮೋಹನ ಮಾಳವಿಯ

ಉತ್ತರ : (ಎ)

ವಿವರಣೆ : ಬಾಲಗಂಗಾಧರ್ ತಿಲಕ್‌ರವರು ಗೋಖಲೆಯವರನ್ನು ‘ಭಾರತದ ವಜ್ರ’, ‘ಮಹಾರಾಷ್ಟ್ರದ ರತ್ನಾಭರಣ’ ಮತ್ತು ‘ರಾಜಕೀಯ ಕಾರ್ಯಕರ್ತರ ರಾಜಕುಮಾರ’ ಎಂಬುದಾಗಿ ಬಣ್ಣಿಸಿದ್ದಾರೆ. 1904ರಲ್ಲಿ ಬ್ರಿಟಿಷ್ ಸರ್ಕಾರವು ಗೋಖಲೆಯವರಿಗೆ ಸಿಐಇ (ಕಂಪ್ಯಾನಿಯನ್‌ ಆಫ್‌ ದಿ ಇಂಡಿಯನ್‌ ಎಂಪೈರ್‌) ಎಂಬ ಬಿರುದನ್ನು ನೀಡಿತು. ಗೋಖಲೆ 1905ರಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು.

50) ರಬ್ಬರ್‌ಗೆ ಗಡಸುತನ ನೀಡಲು ಈ ಕೆಳಗಿನ ಯಾವುದನ್ನು ಬೆರೆಸುತ್ತಾರೆ?

ಎ) ಬಿಳಿ ರಂಜಕ ಬಿ) ಕೆಂಪು ರಂಜಕ

ಸಿ) ಗಂಧಕ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ : (ಸಿ)

ವಿವರಣೆ: ರಬ್ಬರ್‌ಗೆ ಗಡಸುತನವನ್ನು ನೀಡಲು ಅದಕ್ಕೆ ಗಂಧಕವನ್ನು ಬೆರೆಸುತ್ತಾರೆ. ಈ ಕ್ರಿಯೆಗೆ ‘ವಲ್ಕನೀಕರಣ’ ಎನ್ನುವರು.

(ಪ್ರಶ್ನೋತ್ತರ ಸಂಯೋಜನೆ: www.iasjnana.com ಸಂಪರ್ಕಕ್ಕೆ: 9916399276)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು