ಕೇಂದ್ರ ಸರ್ಕಾರದ ಸಿಬಂದ್ದಿ ನೇಮಕಾತಿ ಆಯೋಗವು 7,565 ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಕಾನ್ಸ್ಟೆಬಲ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯು 4 ಹಂತಗಳಲ್ಲಿ ನಡೆಯಲಿದ್ದು ಆಯ್ಕೆಯಾದವರನ್ನು ದೇಶದಾದ್ಯಂತ ನೇಮಕ ಮಾಡಲಾಗುವುದು ಎಂದು ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ.

ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 21 ಆಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ:

ಆಯ್ಕೆಯ ಸಂಸ್ಥೆ: ಸಿಬಂದ್ದಿ ನೇಮಕಾತಿ ಆಯೋಗ (ಕೇಂದ್ರ ಸರ್ಕಾರ)

ಹುದ್ದೆಗಳ ಸಂಖ್ಯೆ: 7,565

ಉದ್ಯೋಗ ಸ್ಥಳ: ಭಾರತದಾದ್ಯಂತ

ಹುದ್ದೆ ಹೆಸರು: ಕಾನ್ಸ್ಟೆಬಲ್

ಸಂಬಳ: ತಿಂಗಳಿಗೆ ₹21,700 ದಿಂದ ₹69,100

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 21

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಅಕ್ಟೋಬರ್ 22

ಆನ್ಲೈನ್ ಅರ್ಜಿ ನಮೂನೆಯ ತಿದ್ದುಪಡಿ ಅಥವಾ ತಿದ್ದುಪಡಿ ಶುಲ್ಕಗಳ

ಆನ್ಲೈನ್ ಪಾವತಿಗೆ ಕೊನೆಯ ದಿನಾಂಕ: ಅಕ್ಟೋಬರ್ 29 ರಿಂದ 31

.18,500 ಶಿಕ್ಷಕರ ನೇಮಕಾತಿ ಶೀಘ್ರ: ಮಧು ಬಂಗಾರಪ್ಪ.
ಮೀಸಲಾತಿ ವಿವರ:

ಮಹಿಳಾ ಅಭ್ಯರ್ಥಿಗಳಿಗೆ 2,496 ಹುದ್ದೆಗಳು.

ಪುರುಷ ಅಭ್ಯರ್ಥಿಗಳಿಗೆ 5,069 ಹುದ್ದೆಗಳು.

ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತೆಗಳೇನು?

ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣವಾಗಿರಬೇಕು.

ಅಭ್ಯರ್ಥಿಯ ವಯಸ್ಸು ಜುಲೈ 1ಕ್ಕೆ 18 ವರ್ಷ ಪೂರ್ಣಗೊಂಡಿರಬೇಕು.

ಗರಿಷ್ಟ 25 ವರ್ಷ ವಯೋಮಿತಿ

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ ಎಷ್ಟು?

ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಇತರ ಅಭ್ಯರ್ಥಿಗಳು ಅರ್ಜಿ ಶುಲ್ಕ ₹100 ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆಯ ಹಂತಗಳು:

ಕಂಪ್ಯೂಟರ್ ಆಧಾರಿತ ಪರೀಕ್ಷೆ

ದೈಹಿಕ ಪರೀಕ್ಷೆ

ದಾಖಲೆ ಪರಿಶೀಲನೆ

ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವುದು ಹೇಗೆ?

ಕಾನ್ಸ್ಟೆಬಲ್ ಹುದ್ದೆಗೆ ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

https://ssc.gov.in/ ವಿಳಾಸಕ್ಕೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುಸದಾಗಿದೆ.

ಅರ್ಜಿಯ ನಮೂನೆಯಲ್ಲಿ ಕೇಳಲಾದ ಎಲ್ಲಾ ದಾಖಲೆಗಳು ಹಾಗೂ ಮಾಹಿತಿಯನ್ನು ಭರ್ತಿ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ.

ಡಿಸೆಂಬರ್ ಅಥವಾ 2026ರ ಜನವರಿಯಲ್ಲಿ ನೇಮಕಾತಿ ನಡೆಯುವ ಸಂಭವವಿದೆ ಎಂದು ಇಲಾಖೆಯು ತಿಳಿಸಿದೆ.

.ವಾಚಕರ ವಾಣಿ | ನೇಮಕಾತಿ ಮಾಡದಂತೆ ಪತ್ರ: ನೆಗಡಿಯಾದರೆ ಮೂಗು ಕೊಯ್ಯಲಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.