ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ ಶಿಕ್ಷಕರಿಗೆ ಜನರೇಟಿವ್‌ ‘ಎಐ’ ತರಬೇತಿ

Published 4 ಆಗಸ್ಟ್ 2024, 23:30 IST
Last Updated 4 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಶಾಲಾ ಶಿಕ್ಷಕರಿಗೆ ಉಚಿತ ಜೆನೆರೇಟಿವ್ ಎಐ ತರಬೇತಿಗೆ ಮುಂದಾದ ಎಂಐಟಿ ಮತ್ತು ಗೂಗಲ್ ಜೆನೆರೇಟಿವ್. ಚಾಟ್ ಜಿಟಿಪಿ ಪ್ರಯೋಗಾಲಯದಿಂದ ಮುಖ್ಯವಾಹಿನಿಗೆ ಬಂದಾಗ ಇನ್ನು ಮುಂದೆ ಬರಹಗಾರರಿಗೆ, ಕಥೆಗಾರರಿಗೆ ಕೆಲಸ ಇರುವುದಿಲ್ಲ; ಎಲ್ಲ ರೀತಿಯ ಬರವಣಿಗೆಯನ್ನು ಚಾಟ್ ಜಿಟಿಪಿ ಮಾಡಿ ಮುಗಿಸುತ್ತದೆ ಎಂಬ ಚರ್ಚೆ ನಡೆದಿದ್ದು ನಿಜ.

ಆದರೆ ಜೆನೆರೇಟಿವ್ ಎಐ ಆಧಾರಿತ ತಂತ್ರಜ್ಞಾನಗಳಾದ ಚಾಟ್ ಜಿಟಿಪಿ, ಜೆಮಿನಿ ಎಐ, Copilot ಮೊದಲಾದವು ಬರಹಗಾರರು, ಸಂಗೀತ ತಂತ್ರಜ್ಞರು, ಚಿತ್ರಕಲೆ ಕಲಾವಿದರುಗಳ ಕೆಲಸವನ್ನು ಇನ್ನಷ್ಟು ಉತ್ಕೃಷ್ಟವಾಗಿ ಮಾಡಲು ಸಹಾಯ ಮಾಡುವ ಆಪ್ತಸಹಾಯಕರಂತೆ ಹೊರ ಹೊಮ್ಮತೊಡಗಿವೆ. ಇಂಥ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಜೆನೆರೇಟಿವ್ ಎ.ಐನ ಬಳಕೆ ಮೂಲಕ ಶಿಕ್ಷಕರು ಹೇಗೆ ಮಕ್ಕಳ ಶಕ್ತಿ-ಮತ್ತು ದೌರ್ಬಲ್ಯವನ್ನು ಗುರುತಿಸಿ, ವ್ಯಕ್ತಿಗತ ಶಿಕ್ಷಣ ಪದ್ಧತಿಯನ್ನು ಅನುಷ್ಠಾನ ಮಾಡಬಹುದು ಎಂಬುದರತ್ತ ಚಿಂತನೆ ನಡೆದಿದೆ.

ದೈನಂದಿನ ಚಟುವಟಿಕೆಗಳನ್ನೂ ತ್ವರಿತವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಆವಿಷ್ಕಾರಗಳನ್ನೂ ತರುವ ಚರ್ಚೆ ನಡೆಸಿದೆ. ಗೂಗಲ್ ಕಂಪನಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ‘ಜೆನೆರೇಟಿವ್ ಎಐ ಫಾರ್ ಎಡುಕೇಟೋರ್ಸ್’ (Generative AI For Educators ) ಎಂಬ ಆನ್‌ಲೈನ್‌ ತರಬೇತಿ ಹಮ್ಮಿಕೊಂಡಿದೆ.

ಈ ಕೋರ್ಸ್ ಶಿಕ್ಷಕರು ಅದರಲ್ಲೂ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರನ್ನು ಎಐ ಯುಗಕ್ಕೆ ಸಜ್ಜು ಮಾಡುವ ಗುರಿಯೊಂದಿಗೆ ಪ್ರಾರಂಭಿಸಲಾಗಿದೆ.

* ತರಬೇತಿ ಸಮಯ: 2 ಗಂಟೆಗಳು

* ತರಬೇತಿ ಮಾಧ್ಯಮ: ಇಂಗ್ಲಿಷ್

* ಉಚಿತವಾಗಿ ತರಬೇತಿ ಲಭ್ಯ

ಕೋರ್ಸ್‌ನ ಕೊಂಡಿ: https://grow.google/ai-for-educators/.

ಈ ಕೋರ್ಸ್‌ ಕಲಿಯುಲು gmail id ಮೂಲಕ ಲಾಗಿನ್ ಆಗಬೇಕು

ಉದ್ದೇಶ

* ಜೆನೆರೇಟಿವ್ ಎ ಐ ಪ್ರಾಂಪ್ಟ್‌ಗಳನ್ನು ಬರೆಯುವ ಸುಲಭ ಮತ್ತು ಪರಿಣಾಮಕಾರಿ ವಿಧಾನದ ಕುರಿತ ಮಾಹಿತಿ. ತರಗತಿ ಮತ್ತು ಪಠ್ಯಕ್ಕೆ ಸಂಬಂಧ ಪಟ್ಟ ಸಂಪನ್ಮೂಲ (ರಿಸೋರ್ಸಸ್) ಗಳನ್ನು ಎಐ ಬಳಸಿ ಹೊಂದಿಸಿಕೊಳ್ಳುವ ಬಗೆ.

ತರಬೇತಿಯಲ್ಲಿ ಏನಿದೆ?

* ನಿತ್ಯ ಜೀವನದಲ್ಲಿ ಎಐ ಬಳಕೆಯ ವಿವಿಧ ಆಯಾಮಗಳು

* ಶಿಕ್ಷಣ ಕ್ಷೇತ್ರದಲ್ಲಿ ಎಐ ಸಲಕರಣೆಗಳ ಬಳಕೆ

* ರೆಸ್ಪೋನ್ಸಿಬಲ್ ಎಐ (ಜವಾಬ್ದಾರಿ ಯುತವಾಗಿ ಎಐ ಬಳಸುವುದು ಹೇಗೆ)

* ಎ ಐ ಪ್ರಾಂಪ್ಟ್ ( ಎಐ ಗೆ ಪ್ರಶ್ನೆ ಕೇಳುವ ವಿಧಾನ ) ಬರವಣಿಗೆ ಬಗ್ಗೆ ಮಾಹಿತಿ

* ಶೈಕ್ಷಣಿಕ ಸಂಪನ್ಮೂಲಗಳನ್ನು ಎಐ ಬಳಸಿ ಸಿದ್ಧಪಡಿಸುವ ವಿಧಾನ

* ಪಠ್ಯದಲ್ಲಿ ಸೃಜನಾತ್ಮಕತೆ ತರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT