ಉನ್ನತ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಪಾಲಕರಿಗೆ ಪರಿಚಿತರಿಂದ ಎಲ್ಲೆಂದರಲ್ಲಿ ಕೇಳಿಬರುವ ಮಾತುಗಳೆಂದರೆ ‘ಸರ್, ನಿಮ್ಮ ಹುಡುಗ ಇಂಜಿನಿಯರಿಂಗ್ ಮಾಡ್ತಿದ್ನಲ್ಲಾ, ಅವನದು ಪ್ಲೇಸ್ಮೆಂಟ್ ಆಯ್ತಾ?’, ‘ನಿಮ್ಮ ಹುಡುಗಿ ಎಂಬಿಎ ಫೈನಲ್ ಇಯರ್ ಇರಬೇಕಲ್ವಾ? ಎಲ್ಲಾದ್ರೂ ಪ್ಲೇಸ್ ಆದ್ಲಾ?’ ‘ಯಾರೋ ನಮ್ಮ ಆಫೀಸ್ನವರ ಮಾತು ಕೇಳಿ, ಹೆವಿ ಡೊನೇಶನ್ ಕೊಟ್ಟು ಇದೇ ಬ್ರ್ಯಾಂಚ್ ಬೇಕು ಅಂತ ಸೇರಿಸಿದ್ವಿ, ಕೋರ್ಸ್ ಮುಗಿದು ಒಂದು ವರ್ಷ ಆದ್ರೂ ಎಲ್ಲೂ ಕೆಲಸ ಇಲ್ಲ’.

ಇಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳು ಮುಖ್ಯವಾಗಿ ಮನದಟ್ಟು ಮಾಡಿಕೊಳ್ಳಬೇಕಾದ ವಿಷಯ ಒಂದಿದೆ. ಅದೆಂದರೆ, ಕಾಲೇಜಿನ ಕ್ಯಾಂಪಸ್ ನೇಮಕಾತಿಗಾಗಿ ಬರುವ ಕಂಪನಿಗಳು, ತಾವು ಅಪೇಕ್ಷಿಸುವ ಕೌಶಲ ಇಲ್ಲದ ವಿದ್ಯಾರ್ಥಿಗಳನ್ನು ಯಾವ ಕಾರಣಕ್ಕೂ ನೇಮಕ ಮಾಡಿಕೊಳ್ಳುವುದಿಲ್ಲ.

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಬರೀ ಕೋರ್ಸ್ ಮುಗಿಸಿದ ಕಾರಣಕ್ಕೆ ತಕ್ಷಣ ಕೆಲಸ ದೊರಕುವುದಿಲ್ಲ. ಪ್ರಸ್ತುತ ಮಾರುಕಟ್ಟೆ ಬಯಸುವ ಕೌಶಲಗಳನ್ನು ಕರಗತ ಮಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಒಳ್ಳೆಯ ಸಂಬಳ ಹಾಗೂ ಇಷ್ಟಪಟ್ಟ ಕೆಲಸ ಸಿಗುವುದು ಕನಸಿನ ಮಾತು. ಅಂತಹ ಕೌಶಲಗಳನ್ನು ಹೊಂದುವುದು ಹೇಗೆ? ಇಲ್ಲಿವೆ ಕೆಲವು ಸಲಹೆಗಳು:

ನಿಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ಐ.ಟಿ, ಬ್ಯಾಂಕಿಂಗ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಅಥವಾ ಕೋರ್ ಎಂಜಿನಿಯರಿಂಗ್– ಈ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ತಯಾರಿ ಇರಬೇಕು.

ನಿಮ್ಮ ಮೂಲಭೂತ ವಿಷಯಗಳಲ್ಲಿ ಪರಿಣತಿ ಇರಲಿ. ನೀವು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಎಂದುಕೊಳ್ಳಿ. ಡೇಟಾ ಸ್ಟ್ರಕ್ಚರ್ಸ್, ಅದ್ರೇ ಮತ್ತು ಲಿಂಕ್ಡ್ಲಿಸ್ಟ್ ನಡುವಿನ ವ್ಯತ್ಯಾಸ, ಅವುಗಳ ಉಪಯೋಗ ಮತ್ತು ಸಮಯ ಸಂಕೀರ್ಣತೆಯ ಬಗ್ಗೆ ನಿಮಗೆ ಸ್ಪಷ್ಟ ಮಾಹಿತಿ ಇರಲೇಬೇಕು. ಸಂದರ್ಶನದ ಸಮಯದಲ್ಲಿ ಅದ್ರೇ ಬದಲು ಲಿಂಕ್ಡ್ಲಿಸ್ಟ್ ಯಾವಾಗ ಉಪಯೋಗಿಸಬೇಕು ಎಂದು ಕೇಳಿದರೆ, ಆ ಪ್ರಶ್ನೆಗೆ ಸರಿಯಾದ ಉತ್ತರ ನೀಡಲು ಸಾಧ್ಯವಾಗಬೇಕು. ಯಾವುದೇ ವಿಷಯವನ್ನು ಅವಸರದಿಂದ ಓದಬೇಡಿ, ತಿಳಿದುಕೊಳ್ಳುವವರೆಗೂ ಮುಂದಿನದನ್ನು ಓದಬೇಡಿ.

ಬೇರೆಯವರ ರೆಸ್ಯೂಮ್ ಅನ್ನು ಕಾಪಿ ಮಾಡಬೇಡಿ. ಎಲ್ಲಾ ಕಂಪನಿಗಳು ಮತ್ತು ಖಾಲಿ ಇರುವ ಹುದ್ದೆಗಳು ಒಂದೇ ರೀತಿಯ ಕೌಶಲಗಳನ್ನು ಅಪೇಕ್ಷಿಸುವುದಿಲ್ಲ. ‘ಮಾರ್ಕೆಟಿಂಗ್’ ಕೆಲಸಕ್ಕೆ ಬೇಕಾಗಿರುವ ರೆಸ್ಯೂಮ್, ಫೈನಾನ್ಸ್ ಹುದ್ದೆಗೆ ಹೊಂದಿಕೆಯಾಗದೇ ಇರಬಹುದು. ಉದಾಹರಣೆಗೆ, ನೀವು ಒಂದು ಎಫ್ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಕಂಪನಿಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂದುಕೊಳ್ಳಿ. ನಿಮ್ಮ ರೆಸ್ಯೂಮ್ನಲ್ಲಿ ‘ಡಿಜಿಟಲ್ ಮಾರ್ಕೆಟಿಂಗ್’ ಕ್ಯಾಂಪೇನ್, ಬ್ರ್ಯಾಂಡ್ ಮ್ಯಾನೇಜ್ಮೆಂಟ್ ಮತ್ತು ಮಾರ್ಕೆಟ್ ರಿಸರ್ಚ್ ಅನುಭವಗಳಿಗೆ ಹೆಚ್ಚು ಒತ್ತು ನೀಡಿ. ಅದೇ ರೆಸ್ಯೂಮ್ ಅನ್ನು ಒಂದು ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಹುದ್ದೆಗೆ ಸಲ್ಲಿಸಬೇಡಿ. ಅಲ್ಲಿ ಫೈನಾನ್ಷಿಯಲ್ ಮಾಡೆಲಿಂಗ್, ಈಕ್ವಿಟಿ ರಿಸರ್ಚ್ ಮತ್ತು ಡೇಟಾ ಆ್ಯನಲಿಟಿಕ್ಸ್ಗೆ ಪ್ರಾಮುಖ್ಯ ನೀಡಿ.

ನೀವು ಮಾಡಿರುವ ಕೆಲಸಗಳ ಬಗ್ಗೆ ಹೆಚ್ಚು ಹೇಳುವುದಕ್ಕಿಂತ ಅದರ ಪರಿಣಾಮಗಳನ್ನು ತಿಳಿಸಿ. ವಿದ್ಯಾರ್ಥಿಯು ಪದವಿ ಸಮಯದಲ್ಲಿ ಮಾಡುವ ‘ಇಂಟರ್ನ್ಶಿಪ್ ಅಥವಾ ಪ್ರಾಜೆಕ್ಟ್’ ಒಂದು ಉತ್ತಮ ಕೆಲಸ ಗಿಟ್ಟಿಸುವಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ.

ನೀವು ಬರೀ ‘ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ನಿರ್ವಹಿಸಿದೆ’ ಎಂದು ಬರೆಯುವ ಬದಲು, ಒಂದು ಡಿಜಿಟಲ್ ಮಾರ್ಕೆಟಿಂಗ್ ಕ್ಯಾಂಪೇನನ್ನು ರೂಪಿಸಿದೆ ಎಂದು ಹೇಳಿ. ಅದರಿಂದ ಶೇ 30ರಷ್ಟು ಹೆಚ್ಚು ಗ್ರಾಹಕರು ಸಂಬಂಧಿಸಿದ ಕಂಪನಿಯ ವೆಬ್ಸೈಟ್ ಅನ್ನು ವೀಕ್ಷಿಸಿದ್ದಾರೆ ಹಾಗೂ 500ಕ್ಕೂ ಹೆಚ್ಚು ಗ್ರಾಹಕರನ್ನು ಪಡೆಯಲಾಗಿದೆ ಎಂದು ಹೇಳಿ. ಇದು ನಿಮ್ಮ ಕೊಡುಗೆಯನ್ನು ಸಂಖ್ಯೆಗಳಲ್ಲಿ ತೋರಿಸುತ್ತದೆ.

ನಿಮ್ಮ ರೆಸ್ಯೂಮ್ ನಿಮ್ಮ ಮೊದಲ ಪರಿಚಯ ಪತ್ರ. ಅದು ಸಂಕ್ಷಿಪ್ತ, ದೋಷರಹಿತ ಮತ್ತು ನಿಮ್ಮ ನೈಜ ಕೌಶಲಗಳನ್ನು ಪ್ರತಿಬಿಂಬಿಸಬೇಕು.

ಬರೀ ತಾಂತ್ರಿಕ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೇ ಹೆಚ್ಚು ಸಮಯವನ್ನು ಮೀಸಲಿಡಬೇಡಿ. ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿಗೆ ಗಮನ ಕೊಡಿ. ಉತ್ತಮ ಸಂವಹನ, ತಂಡದ ಅಭಿವೃದ್ಧಿ, ಸಮಸ್ಯೆ ಪರಿಹರಿಸುವ ಕೌಶಲಗಳು ನಿಮ್ಮ ಮೌಲ್ಯವನ್ನು ಹೆಚ್ಚಿಸುತ್ತವೆ. ಉದಾಹರಣೆಗೆ, ಸ್ನೇಹಿತರೊಂದಿಗೆ ಒಂದು ಸಣ್ಣ ಗುಂಪನ್ನು ರಚಿಸಿ, ‘ಕಾಲೇಜು ಶುಲ್ಕ ಪಾವತಿ ವ್ಯವಸ್ಥೆ ಡಿಜಿಟಲ್ ಆಗಬೇಕೆ?’ ಎಂಬಂತಹ ವಿಷಯಗಳ ಮೇಲೆ ಗುಂಪು ಚರ್ಚೆ ನಡೆಸಿ. ಇದು ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ನೆರವಾಗುತ್ತದೆ.

ಕಂಪನಿ ಹಾಗೂ ನೀವು ಇಷ್ಟಪಡುವ ಹುದ್ದೆಯ ಬಗ್ಗೆ ಮುಂಚಿತವಾಗಿ ಹೆಚ್ಚು ಸಂಶೋಧನೆ ಮಾಡಿ. ಅಂದರೆ, ನೀವು ಅರ್ಜಿ ಸಲ್ಲಿಸುತ್ತಿರುವ ಕಂಪನಿಯ ಇತ್ತೀಚಿನ ಆಗುಹೋಗುಗಳನ್ನು ಸಮಗ್ರವಾಗಿ ತಿಳಿದುಕೊಳ್ಳಿ. ಹಾಗೆಯೇ ನೀವು ನಿರೀಕ್ಷಿಸುವ ಹುದ್ದೆ ನಿಮ್ಮಿಂದ ಏನನ್ನು ಅಪೇಕ್ಷಿಸುತ್ತದೆ, ಆ ಹುದ್ದೆ ನಿರ್ವಹಿಸಲು ಯಾವ ಯಾವ ಹೊಸ ತಂತ್ರಜ್ಞಾನಗಳನ್ನು ಬಳಸಬಹುದು ಎಂದು ಮುಂಚೆಯೇ ತಿಳಿದುಕೊಂಡರೆ ಸಂದರ್ಶನದ ಸಮಯದಲ್ಲಿ ಉತ್ತಮವಾಗಿ ‘ಪರ್ಫಾರ್ಮ್’ ಮಾಡಬಹುದು.

ಮಾನಸಿಕ ಸಾಮರ್ಥ್ಯ ಮತ್ತು ತರ್ಕಶಕ್ತಿ ಪ್ರಶ್ನೆಗಳಿಗೆ ಸಿದ್ಧರಾಗಿರಿ. ಈ ದಿಸೆಯಲ್ಲಿ ಪ್ರತಿನಿತ್ಯ ಪ್ರತ್ಯೇಕ ಅಭ್ಯಾಸ ಅತ್ಯಗತ್ಯ. ಇದಕ್ಕಾಗಿಯೇ ಇರುವ ಕೆಲವು ಕಂಪನಿಗಳ ಪುಸ್ತಕಗಳ ನೆರವಿನಿಂದ ದಿನವೂ ಪ್ರಶ್ನೆಗಳನ್ನು ಪರಿಹರಿಸಲು ಅಭ್ಯಾಸ ಮಾಡಿ.

ಸಂದರ್ಶನದ ಸಮಯದಲ್ಲಿ ನಿಮ್ಮ ಆಲೋಚನೆಗಳನ್ನು ಸರಳ ಮತ್ತು ಆತ್ಮವಿಶ್ವಾಸದಿಂದ ವ್ಯಕ್ತಪಡಿಸಲು ಸಾಧ್ಯವಾಗಬೇಕು. ಅದಕ್ಕಾಗಿ ಇಂಗ್ಲಿಷ್ ಸಂವಹನಕ್ಕೆ ಹೆಚ್ಚು ಗಮನ ಕೊಡಿ. ಇದಕ್ಕೆ ಪೂರಕವಾಗಿ ದಿನಕ್ಕೆ 15 ನಿಮಿಷ ಇಂಗ್ಲಿಷ್ ವಾರ್ತೆಯನ್ನು ಕೇಳಿ ಅಥವಾ ವೀಕ್ಷಿಸಿ, ಇಂಗ್ಲಿಷ್ ದಿನಪತ್ರಿಕೆಗಳನ್ನು ದಿನವೂ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಓದಿ. ಇದು ಕೇಳುವ ಮತ್ತು ಮಾತನಾಡುವ ನಿಮ್ಮ ಕೌಶಲಕ್ಕೆ ಹೆಚ್ಚು ಮೆರುಗು ನೀಡುತ್ತದೆ.

ಸಂದರ್ಶನದ ಸಮಯದಲ್ಲಿ ಶಾಂತವಾಗಿ ಇರಿ. ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದೇ ಹೇಳಿ. ಆದರೆ ಗೊತ್ತಿಲ್ಲದ್ದನ್ನು ಕಲಿಯಲು ಸಂಪೂರ್ಣ ಸಿದ್ಧರಿದ್ದೀರಿ ಎಂದು ಸೌಮ್ಯವಾಗಿ ಹೇಳಿ. ಪ್ರಾಮಾಣಿಕತೆಗೆ ಮಹತ್ವ ನೀಡಿ. ಸಂದರ್ಶನದ ಯಾವ ಹಂತದಲ್ಲೂ ಉದ್ವೇಗಕ್ಕೆ ಒಳಗಾಗಬೇಡಿ.

ಪ್ರತಿ ಅನುಭವದಿಂದ ಕಲಿಯಿರಿ ಮತ್ತು ಮುಂದುವರಿಯಿರಿ. ಉದಾಹರಣೆಗೆ, ನೀವು ಒಂದು ಗುಂಪು ಚರ್ಚೆಯಲ್ಲಿ (ಗ್ರೂಪ್ ಡಿಸ್ಕಷನ್) ಮೊದಲ ಸುತ್ತಿನಲ್ಲಿಯೇ ಹೊರಬಂದಿದ್ದೀರಿ ಎಂದು ತಿಳಿದುಕೊಳ್ಳಿ. ಆ ಚರ್ಚೆಯಲ್ಲಿ ಯಾರು ಯಾವ ಅಂಶಗಳನ್ನು ಹೇಳಿದರು, ನೀವು ಯಾವ ಅಂಶಗಳನ್ನು ಹೇಳಲು ವಿಫಲರಾದಿರಿ ಎಂಬುದನ್ನು ವಿಶ್ಲೇಷಿಸಿ. ಮುಂದಿನ ನಡೆಗೆ ಸಂಪೂರ್ಣ ಸಿದ್ಧರಾಗಿ.

ಯಶಸ್ವಿ ಪ್ಲೇಸ್ಮೆಂಟ್ ಎಂಬುದು ಒಂದು ರಾತ್ರಿಯಲ್ಲಿ ಸಾಧಿಸಬಹುದಾದ ಗುರಿಯಲ್ಲ. ಇದು ಸತತ ಪ್ರಯತ್ನ, ಸರಿಯಾದ ಯೋಜನೆ ಮತ್ತು ಸಕಾರಾತ್ಮಕ ದೃಷ್ಟಿಕೋನದ ಫಲಿತಾಂಶ.

ಇದಕ್ಕಿರಲಿ ಆದ್ಯತೆ

ಸಂದರ್ಶನದ ಸಮಯದಲ್ಲಿ ನಿಮ್ಮ ಆಲೋಚನೆಗಳನ್ನು ಸರಳ ಮತ್ತು ಆತ್ಮವಿಶ್ವಾಸದಿಂದ ವ್ಯಕ್ತಪಡಿಸಲು ಸಾಧ್ಯವಾಗಬೇಕು. ಅದಕ್ಕಾಗಿ ಇಂಗ್ಲಿಷ್ ಸಂವಹನಕ್ಕೆ ಹೆಚ್ಚು ಗಮನ ಕೊಡಿ. ಇದಕ್ಕೆ ಪೂರಕವಾಗಿ ದಿನಕ್ಕೆ 15 ನಿಮಿಷ ಇಂಗ್ಲಿಷ್ ವಾರ್ತೆಯನ್ನು ಕೇಳಿ ಅಥವಾ ವೀಕ್ಷಿಸಿ, ಇಂಗ್ಲಿಷ್ ದಿನಪತ್ರಿಕೆಗಳನ್ನು ಓದಿ. ಇದು ಕೇಳುವ ಮತ್ತು ಮಾತನಾಡುವ ನಿಮ್ಮ ಕೌಶಲಕ್ಕೆ ಹೆಚ್ಚು ಮೆರುಗು ನೀಡುತ್ತದೆ.

ಲೇಖಕ: ಸಹ ಪ್ರಾಧ್ಯಾಪಕ, ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಹರಿಹರ